Friday, Nov 15 2019 | Time 13:31 Hrs(IST)
 • ಎಟಿಪಿ ಫೈನಲ್ಸ್: ಜೊಕೊವಿಚ್ ಮಣಿಸಿ ಸೆಮಿಫೈನಲ್ ತಲುಪಿದ ಫೆಡರರ್
 • ದೇಶದ ರಫ್ತು ವಲಯದಲ್ಲಿ ಕರ್ನಾಟಕದಿಂದ ಮೂರನೇ ಒಂದರಷ್ಟು ಕೊಡುಗೆ: ಎಲ್ಲಾ ವಲಯಗಳಲ್ಲೂ ಬೆಂಗಳೂರು ಮಂಚೂಣಿಯಲ್ಲಿ – ಗೌರವ್ ಗುಪ್ತಾ
 • ಇಸ್ಲಾಮಿಕ್ ಸ್ಟೇಟ್ ಯೋಧರ ವಿಚಾರಣೆಗೆ ಅಂತರರಾಷ್ಟ್ರೀಯ ನ್ಯಾಯಮಂಡಳಿಗೆ ಅಮೆರಿಕಾ ವಿರೋಧ
 • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
 • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
 • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
 • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
 • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
 • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
Parliament Share

ಡೆನ್ಮಾಕ್ ಓಪನ್: ಎರಡನೇ ಸುತ್ತಿಗೆ ಸಿಂಧು , ಕಶ್ಯಪ್ ಗೆ ನಿರಾಸೆ

ಓಡೆನ್ಸ್‌, ಅ 15 (ಯುಎನ್‌ಐ)ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಆದರೆ, ಪರುಪಳ್ಳಿ ಕಶ್ಯಪ್ ಅವರು ಸೋತು ಹೊರ ನಡೆದಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸಿಂಗ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಪಿ.ವಿ ಸಿಂಧು ಅವರು 22-20, 21-18, ಅಂತರದಲ್ಲಿ ನೇರ ಸೆಟ್‌ಗಳಿಂದ ಇಂಡೋನೇಷ್ಯಾದ ಗ್ರೇಗೋರಿಯಾ ತುಂಜುಂಗ್ ವಿರುದ್ಧ ಗೆದ್ದು 38 ನಿಮಿಷಗಳ ಪಂದ್ಯವನ್ನು ತನ್ನದಾಗಿಸಿಕೊಂಡರು. ಆ ಮೂಲಕ ಎರಡನೇ ಸುತ್ತಿಗೆ ಲಗ್ಗೆೆ ಇಟ್ಟಿದ್ದಾರೆ.
38 ನಿಮಿಷಗಳ ಕಾಲ ನಡೆದಿದ್ದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ಅವರು 13-21, 12-21 ಅಂತರದಲ್ಲಿ ನೇರ ಸೆಟ್‌ಗಳಿಂದ ಥೈಲ್ಯಾಂಡ್ ಸಿತ್ತಿಕೋಮ್ ಥಮ್ಮಾಸಿನ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದರು.
ಇತ್ತೀಚೆಗೆ ಬಿಡುಗಡೆಯಾಗಿದ್ದ ಬಿಡಬ್ಲ್ಯುಎಫ್ ವಿಶ್ವ ಶ್ರೇಯಾಂಕದಲ್ಲಿ ಪಿ.ವಿ ಸಿಂಧು ಅವರು ಒಂದು ಸ್ಥಾನ ಕುಸಿದು ಆರನೇ ಶ್ರೇಯಾಂಕ ಪಡೆದಿದ್ದರು. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ 25ನೇ ಸ್ಥಾನದಲ್ಲೇ ಮುಂದುವರಿದಿದ್ದರು.
ಆಗಸ್ಟ್‌. 25ಕ್ಕೆೆ 24ನೇ ವರ್ಷಕ್ಕೆೆ ಪದಾರ್ಪಣೆ ಮಾಡಲಿರುವ ಸಿಂಧು ಅವರು ಸ್ವಿಜರ್‌ಲೆಂಡ್ ಬಸೆಲ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಹ ಣಾಹಣಿಯಲ್ಲಿ ಜಪಾನ್‌ನ ನಜೋಮಿ ಒಕುಹಾರ ವಿರುದ್ಧ 21-7, 21-7 ಅಂತರದಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲದೇ, ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ನೂತನ ಮೈಲುಗಲ್ಲು ಸೃಷ್ಟಿಸಿದ್ದರು.
ಯುಎನ್‌ಐ ಆರ್ ಕೆ 1643