Tuesday, Sep 29 2020 | Time 13:48 Hrs(IST)
 • ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸಲು ಮಮತಾ ಕಿಚನ್ ರೆಡಿ
 • ಪಾಕ್ ರಡಾರ್ ನಲ್ಲಿ ಶ್ರೀನಗರ: ದಾರಿ ತಪ್ಪಿರುವ ಯುವಕರನ್ನು ವಾಪಸ್ ಕರೆ ತರಲು ಕ್ರಮ- ಡಿಜಿಪಿ ದಿಲ್‍ಬಾಗ್ ಸಿಂಗ್
 • ಗಾಂಜಾ ಮಾರಾಟ ಯತ್ನಿಸುತ್ತಿದ್ದವರ ಬಂಧನ
 • ಪೂಜಿಸುತ್ತಿದ್ದ ಕೃಷಿ ಉಪಕರಣಗಳಿಗೆ ಬೆಂಕಿ ಹಚ್ಚುವುದು ರೈತರನ್ನು ಅವಮಾನಿಸಿದಂತೆ: ಮೋದಿ
 • ಬಾಬ್ರಿ ಮಸೀದಿ ದ್ವಂಸ ಪ್ರಕರಣ: ನಾಳೆ ಅಂತಿಮ ತೀರ್ಪು, ಭದ್ರತೆ ಬಿಗಿ ಗೊಳಿಸಲು ರಾಜ್ಯಗಳಿಗೆ ಕೇಂದ್ರ ಆದೇಶ
 • ಮೂವರು ದರೋಡೆಕೋರರು ಬಂಧನ
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
Karnataka Share

ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ

ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ
ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಸೆ.15 (ಯುಎನ್ಐ) ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಮಾಜಿ‌‌ ಸಚಿವ ಸಿ.ಜೀವರಾಜ ಆಳ್ವ ಪುತ್ರ ಆದಿತ್ಯ ಆಳ್ವಾಗೆ ಸೇರಿದ ನಗರದ ನಿವಾಸದ ಮೇಲೆ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.

ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೀವ್ಸ್ ನಲ್ಲಿನ ಆದಿತ್ಯಾ‌ ಆಳ್ವ ಮನೆಯ ಮೇಲೆ ಇನ್ಸ್ಪೆೆಕ್ಟರ್ ಗಳಾದ ಅಂಜುಮಾಲಾ ನಾಯ್ಕ್, ಪುನೀತ್ ನೇತೃತ್ವದಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ. ಈ ವೇಳೆ ಮಾದಕ ವಸ್ತುಗಳು ಸೇರಿದಂತೆ ಮಹತ್ವದ ವಸ್ತುಗಳು ದೊರೆತಿದ್ದು ಅವುಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಆರೋಪಿ ಆದಿತ್ಯ ಆಳ್ವಾ ಬಾಲಿವುಡ್ ನಟ ವಿವೇಕ್ ಓಬೇರಾಯ್ ಅವರ ಮೈದುನ. ಬರೋಬ್ಬರಿ ಆರು ಎಕರೆ ವಿಸ್ತೀರ್ಣದಲ್ಲಿ ಆದಿತ್ಯ ಆಳ್ವಾ ಮನೆ ಇದ್ದು. ಇದೇ ಮನೆಯಲ್ಲಿ ವಾರಾಂತ್ಯದ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಿ ರವಿಶಂಕರ್ ತಪ್ಪೊಪ್ಪಿಕೊಂಡಿದ್ದನು. ಇದಲ್ಲದೆ ಡ್ರಗ್ ಜಾಲದಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿರುವ ಆರು ಮಂದಿ ಆರೋಪಿಗಳು ಆದಿತ್ಯ ಆಳ್ವಾ ಹೆಸರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಡ್ರಗ್ ಜಾಲದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರುವ ಅನುಮಾನಗಳು ವ್ಯಕ್ತವಾಗಿವೆ.

ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದರು ಎನ್ನಲಾಗಿದೆ.

ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆದಿತ್ಯ ಆಳ್ವನ ಮನೆಗೆ ದಾಳಿ ನಡೆಸಿದ್ದಾರೆ. ಈ ಮನೆಯಲ್ಲೇ ಗಣ್ಯ ವ್ಯಕ್ತಿಗಳಿಗೆ ಪಾರ್ಟಿ ನಡೆಸಲಾಗುತ್ತಿತು. ಅಲ್ಲಿ ಗಾಂಜಾ ಮಾತ್ರೆ ಸೇವಿಸಲಾಗುತ್ತಿತ್ತು ಎಂದು ಆತ ಮಾಹಿತಿ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಯುಎನ್ಐ ಎಎಚ್ 1120

More News

ಮೂವರು ದರೋಡೆಕೋರರು ಬಂಧನ

29 Sep 2020 | 12:41 PM

 Sharesee more..

ಉಡುಪಿ ಕೃಷ್ಣ ಮಠ : ಭಕ್ತರ ದರ್ಶನಕ್ಕೆ ಮುಕ್ತ

29 Sep 2020 | 12:28 PM

 Sharesee more..
ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ

ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ

29 Sep 2020 | 11:07 AM

ಬೆಂಗಳೂರು,ಸೆ.29 (ಯುಎನ್ಐ) ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ! ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

 Sharesee more..
ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್

ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್

29 Sep 2020 | 11:05 AM

ಬೆಂಗಳೂರು, ಸೆ.29 (ಯುಎನ್ಐ) ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿರುವ ಅವರು, ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ

 Sharesee more..