Tuesday, Sep 29 2020 | Time 12:50 Hrs(IST)
 • ಮೂವರು ದರೋಡೆಕೋರರು ಬಂಧನ
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
 • ವಿಶ್ವ ಹೃದಯ ದಿನ: ಹೃದಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಲಹೆ
 • ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್
 • ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಉಮಾ ಭಾರತಿ
 • ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ
Karnataka Share

ಡ್ರಗ್ಸ್ ಮೂಲಕ ಭಾರತದ ಶಕ್ತಿ ಕುಗ್ಗಿಸುವ ನಾರ್ಕೊ ಭಯೋತ್ಪಾದನೆ ಶಂಕೆ; ಕಠಿಣ ಕಾನೂನಿಗೆ ಈಶ್ವರ್ ಖಂಡ್ರೆ ಒತ್ತಾಯ

ಡ್ರಗ್ಸ್ ಮೂಲಕ ಭಾರತದ ಶಕ್ತಿ ಕುಗ್ಗಿಸುವ ನಾರ್ಕೊ ಭಯೋತ್ಪಾದನೆ ಶಂಕೆ; ಕಠಿಣ ಕಾನೂನಿಗೆ ಈಶ್ವರ್ ಖಂಡ್ರೆ ಒತ್ತಾಯ
ಡ್ರಗ್ಸ್ ಮೂಲಕ ಭಾರತದ ಶಕ್ತಿ ಕುಗ್ಗಿಸುವ ನಾರ್ಕೊ ಭಯೋತ್ಪಾದನೆ ಶಂಕೆ; ಕಠಿಣ ಕಾನೂನಿಗೆ ಈಶ್ವರ್ ಖಂಡ್ರೆ ಒತ್ತಾಯ

ಬೆಂಗಳೂರು, ಸೆ.15 (ಯುಎನ್‌ಐ) ಡ್ರಗ್ಸ್ ದಂಧೆಯ ಮೂಲಕ ಬುದ್ಧಿವಂತ ಭಾರತೀಯ ವಿದ್ಯಾರ್ಥಿಗಳನ್ನು ಅಮಲಿನ ನಶೆಯಲ್ಲಿ ಸಿಲುಕಿಸಿ ಭಾರತದ ಶಕ್ತಿಯನ್ನು ಕುಗ್ಗಿಸುವ ನಾರ್ಕೊ ಭಯೋತ್ಪಾದನೆ ಇರುವ ಅನುಮಾನ ಹುಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ, ರಾಜ್ಯದಲ್ಲಿ‌ ಡ್ರಗ್ಸ್ ಮಟ್ಟಹಾಕದೆ ಹೋದರೆ ಕಷ್ಟವಾಗಲಿದ್ದು, ಕರ್ನಾಟಕ ರಾಜ್ಯ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ. ಡ್ರಗ್ಸ್ ತಡೆಯಲು ಎಲ್ಲರೂ ಕೈಜೋಡಿಸಬೇಕು. ಸಮಾಜಘಾತುಕ ವಿಚಾರಗಳನ್ನು ತಡೆಗಟ್ಟಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದರು.

ಡ್ರಗ್ಸ್ ಫೆಡರ್ ಗಳಿಗೆ, ಉತ್ಪಾದಕರಿಗೆ , ಕಳ್ಳ ಸಾಗಣೆದಾರರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಇದೇ ಅಧಿವೇಶನದಲ್ಲೇ ಕಾನೂನು ತರುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಾದಕ ದ್ರವ್ಯ ಸೇವಿಸುವವರಿಗೂ ಕನಿಷ್ಠ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರೆ ಮಾತ್ರ ಪಿಡುಗಿನ ನಿರ್ಮೂಲನೆ ಸಾಧ್ಯ. ಸಮಾಜಕ್ಕೆ ಮಾರಕವಾದ ಮಾದಕ ದ್ರವ್ಯ ಪಿಡುಗು ನಿರ್ಮೂಲನೆಗೆ ಅಧಿವೇಶನದ ಅವಧಿಯನ್ನು ವಿಸ್ತರಿಸಿ ಎರಡು ದಿನಗಳ ಕಾಲ ಡ್ರಗ್ಸ್ ಸಂಬಂಧ ಚರ್ಚೆಗೆ ವಿಶೇಷ ಕಲಾಪ ನಡೆಸಿ ಕಠಿಣ ಕಾನೂನು ರೂಪಿಸುವಂತೆ ಖಂಡ್ರೆ ಸರ್ಕಾರವನ್ನು ಒತ್ತಾಯಿಸಿದರು.

ಮನುಕುಲಕ್ಕೆ ಮಾರಕವಾಗಿರುವ ಮಾದಕ ದ್ರವ್ಯ ಮಕ್ಕಳು, ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದು , ಈ ಪಿಡುಗನ್ನು ಬೇರು ಸಹಿತ ಕಿತ್ತೊಗೆಯಬೇಕಾಗಿದೆ. ಈ ಮಾದಕ ದ್ರವ್ಯ ದಂಧೆ ಹಿಂದೆ ದೊಡ್ಡ ಜಾಲ, ದೇಶ ವಿದೇಶಗಳ ಕೈವಾಡವೂ ಇದೆ. ಬುದ್ಧಿವಂತ ಭಾರತೀಯ ವಿದ್ಯಾರ್ಥಿಗಳನ್ನು ಅಮಲಿನ ನಶೆಯಲ್ಲಿ ಸಿಲುಕಿಸಿ ಭಾರತವನ್ನು ಕುಗ್ಗಿಸುವ ನಾರ್ಕೊ ಭಯೋತ್ಪಾದನೆ ಇರುವ ಅನುಮಾನ ಹುಟ್ಟಿದೆ. ರಾಜ್ಯದ ಸಾಮಾಜಿಕ ಸ್ವಾಸ್ಥ್ಯವನ್ನೇ ಬುಡಮೇಲು ಮಾಡುತ್ತಿರುವ ಈ ಜಾಲವನ್ನು ಮೂಲೋತ್ಪಾಟನೆ ಮಾಡುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು. ಈ ಮಾದಕ ದ್ರವ್ಯ ಜಾಲದ ಹಿಂದ ಭಯೋತ್ಪಾದಕರ , ಭೂಗತ ಜಗತ್ತಿನ ನಂಟು ಬೆಸೆದುಕೊಂಡಿರುವುದು ದೇಶದ ಸಾಂಸ್ಕೃತಿಕ ತಳಹದಿಯನ್ನೇ ನಾಶ ಮಾಡುವಂತಾಗಿದೆ ಎಂದು ಖಂಡ್ರೆ ಆತಂಕ ವ್ಯಕ್ತಪಡಿಸಿದರು.

ಡ್ರಗ್ಸ್ ಪಿಡುಗಿನಿಂದ ನಮ್ಮ ಯುವಕರು ಹಾಳಾಗುತ್ತಿದ್ದು, ಅವರ ಬದುಕು ಕಗ್ಗತ್ತಲಾಗಿದೆ. ಡ್ರಗ್ಸ್ ತಡೆಯಲು ಪಕ್ಷಾತೀತವಾಗಿ ಕೈಜೋಡಿಸಬೇಕಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ರೇವ್ ಪಾರ್ಟಿಗಳು ಮುಂದುವರಿಯುತ್ತಿವೆ. ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವಧಿಯಲ್ಲಿ ಡ್ರಗ್ ನಿಷೇಧ ಕಾಯ್ದೆ ತರಲಾಗಿತ್ತು. ಡ್ರಗ್ಸ್ ತಯಾರಕರು, ಸರಬರಾಜುದಾರರು, ಕಳ್ಳಸಾಗಣಿಕೆದಾರರು ಯಾರು ಎನ್ನುವುದನ್ನು ಸರ್ಕಾರ ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು. ಸಂಸತ್ ಅಧಿವೇಶನ ಪ್ರಾರಂಭವಾಗಿದೆ. ರಾಜ್ಯದಲ್ಲಿ ಇದೇ 21ರಿಂದ ವಿಧಾನಮಂಡಲ ಅಧಿವೇಶನವೂ ನಡೆಯಲಿದೆ. ವಿವಾದಾತ್ಮಕ ಕಾಯ್ದೆ ಜಾರಿಗೆ ತರುವುದನ್ನು ಕೈಬಿಟ್ಟು ಡ್ರಗ್ಸ್ ವಿರುದ್ಧ ಕಠಿಣ ಕಾನೂನು ತರಬೇಕು ಎಂದು ಅವರು ಆಗ್ರಹಿಸಿದರು.

ಇದು ರಾಜಕೀಯ ಮಾಡುವ ವಿಚಾರವಾಗಿರದೇ ಬದಲಾಗಿ ಕರ್ನಾಟಕದ ಯುವಜನರ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮಾದಕದ್ರವ್ಯ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಿಕ್ಕಿರುವ ಅವಕಾಶ ಎಂದು ತಿಳಿದು ಸರ್ಕಾರ ಮುಂಗಾರು ಅಧಿವೇಶನದಲ್ಲಿಯೇ ಗಾಂಜಾ ಇತ್ಯಾದಿ ಮಾದಕ‌ ಪದಾರ್ಥ ಬೆಳೆಯುವವರಿಗೆ ಕಳ್ಳ ಸಾಗಣೆ , ದಾಸ್ತಾನು ಮಾಡುವವರಿಗೆ ಜೀವಾವಧಿ ಶಿಕ್ಷೆ ಮತ್ತು ಮಾದಕ ವ್ಯಸನಿಗಳಿಗೆ ಕನಿಷ್ಠ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಕಾಯಿದೆ ರೂಪಿಸಬೇಕು. ಕರ್ನಾಟಕದಲ್ಲಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಾವಿರಾರು ಕೆಜಿ ಗಾಂಜಾ , ಇನ್ನಿತರ ಅಮಲಿನ ವಸ್ತುಗಳನ್ನು ನೋಡಿದಾಗ ರಾಜ್ಯದಲ್ಲಿ ಅದನ್ನು ಯುವಕರು ಈ ಮಾದಕ ದ್ರವ್ಯದ ದಾಸರಾಗಿದ್ದಾರೆ ಎಂಬ ಸಂಗತಿ ಗಾಬರಿ ಹುಟ್ಟಿಸುವಂತಿದೆ. ಸರ್ಕಾರ ಈಗಲೇ ಎಚ್ಚೆತ್ತು ಇದನ್ನು ನಿಗ್ರಹಿಸದೇ ಹೋದರೆ ಮುಂದೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಖಂಡ್ರೆ ಎಚ್ಚರಿಸಿದರು.

ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಖಂಡ್ರೆ, ರಾಜ್ಯದಲ್ಲಿ ಕ್ಯಾಸಿನೋ ತರಲು ಹೊರಟಿದ್ದ ಸಚಿವ ಸಿ.ಟಿ.ರವಿಗೆ ಡ್ರಗ್ಸ್ ಕ್ಯಾಸಿನೋ ವಿರೋಧದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಶಾಸಕ ಜಮೀರ್ ಅಹ್ಮದ್ ತಮ್ಮ ಮೇಲಿನ ಡ್ರಗ್ಸ್ ಆರೋಪದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆರೋಪ ಸಾಬೀತಾದರೆ ತಮ್ಮ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದಿದ್ದಾರೆ ಎಂದು ಖಂಡ್ರೆ ಸಮರ್ಥಿಸಿಕೊಂಡರು.

ಯುಎನ್ಐ ಯುಎಲ್ ಎಎಚ್ 1330

More News

ಉಡುಪಿ ಕೃಷ್ಣ ಮಠ : ಭಕ್ತರ ದರ್ಶನಕ್ಕೆ ಮುಕ್ತ

29 Sep 2020 | 12:28 PM

 Sharesee more..
ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ

ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ

29 Sep 2020 | 11:07 AM

ಬೆಂಗಳೂರು,ಸೆ.29 (ಯುಎನ್ಐ) ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ! ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

 Sharesee more..
ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್

ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್

29 Sep 2020 | 11:05 AM

ಬೆಂಗಳೂರು, ಸೆ.29 (ಯುಎನ್ಐ) ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿರುವ ಅವರು, ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ

 Sharesee more..