Friday, Apr 10 2020 | Time 08:51 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Entertainment Share

ಡ್ರಗ್ಸ್ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ‘ಕೆ 3’ ಟೆಲಿಚಿತ್ರ

ಡ್ರಗ್ಸ್ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ‘ಕೆ 3’ ಟೆಲಿಚಿತ್ರ
ಡ್ರಗ್ಸ್ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ‘ಕೆ 3’ ಟೆಲಿಚಿತ್ರ

ಬೆಂಗಳೂರು, ಫೆ 25 (ಯುಎನ್‍ಐ) ಸಾಕಷ್ಟು ಭರವಸೆ ಹುಟ್ಟಿಸುವ ಕಿರುಚಿತ್ರಗಳು ಕನ್ನಡದಲ್ಲಿ ಬರುತ್ತಿದ್ದು, ಆ ಸಾಲಿಗೆ ಸೇರಿರುವ ಮತ್ತೊಂದು ಟೆಲಿಚಿತ್ರ ‘ಕೆ 3’ ಸುಮಾರು 23 ನಿಮಿಷಗಳ ಈ ಟೆಲಿಚಿತ್ರವನ್ನು ಶ್ರೀಸಾಯಿ ವೆಂಕಟೇಶ್ವರ ಟಾಕೀಸ್ ಲಾಂಛನದಲ್ಲಿ ಶಿಲ್ಪ ಶ್ರೀನಾಥ್ ನಿರ್ಮಿಸಿದ್ದಾರೆ.ಮಾದಕ ಪದಾರ್ಥ ಡ್ರಗ್ಸ್ ಸಮಸ್ಯೆ ಸುತ್ತಲಿನ ಕಥಾ ಹಂದರ ಹೊಂದಿರುವ ಈ ಕಿರುಚಿತ್ರವನ್ನು ಸಂಜಯ್ ಕೆ ನಿರ್ದೇಶಿಸಿದ್ದಾರೆ. ಆರ್ ಚಂದ್ರು ಅವರ ನಿರ್ದೇಶನ ತಂಡದಲ್ಲಿದ್ದ ಸಂಜಯ್ ಮೊದಲ ಪ್ರಯತ್ನವಾಗಿ ಈ ಟೆಲಿಚಿತ್ರವನ್ನು ನಿರ್ದೇಶಿಸಿದ್ದಾರೆನನಗೆ ಹಿರಿತೆರೆ ಚಿತ್ರಗಳನ್ನು ನಿರ್ದೇಶಿಸುವ ಆಸೆ ಇದೆ ಆದರೆ ನಿರ್ಮಾಪಕರಿಗೆ ನಮ್ಮ ನಿರ್ದೇಶನದ ಸಾಮರ್ಥ್ಯ ತಿಳಿದಿರುವುದಿಲ್ಲ. ಮೊದಲ ಹೆಜ್ಜೆಯಾಗಿ ಉತ್ತಮ ಗುಣಮಟ್ಟವಿರುವ ಈ ಟೆಲಿಚಿತ್ರವನ್ನು ನಾನು ನಿರ್ದೇಶಿಸಿದ್ದು, ಸಾಕಷ್ಟು ನಿರ್ಮಾಪಕರಿಗೆ ಈ ಟೆಲಿಚಿತ್ರವನ್ನು ತೋರಿಸಿ, ಹಿರಿತೆರೆ ಚಿತ್ರಗಳ ನಿರ್ದೇಶನದ ಅವಕಾಶ ಕೇಳಬಹುದು. ನಿರ್ಮಾಪಕರಿಗೂ ಇದರ ವೀಕ್ಷಣೆಯ ನಂತರ ನಿರ್ದೇಶಕನ ಸಾಮರ್ಥ್ಯ ತಿಳಿದಿರುತ್ತದೆ ಎನ್ನುವುದು ಸಂಜಯ್ ಅವರ ಅಭಿಪ್ರಾಯ.ತಾಂತ್ರಿಕತೆಯಲ್ಲಿ ಹಿರಿತೆರೆಯ ಯಾವುದೇ ಚಿತ್ರಕ್ಕೂ ಕಡಿಮೆಯಿಲ್ಲದಂತೆ ‘ಕೆ ೩‘ ಟೆಲಿಚಿತ್ರ ಮೂಡಿಬಂದಿದೆ. ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ ಹಾಗೂ ಹಲವು ನಿರ್ಮಾಪಕರು ಈ ಟೆಲಿಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಾರಿ ಸೈಫ಼ಾ ಗೂ ಈ ಟೆಲಿಚಿತ್ರ ಆಯ್ಕೆಯಾಗಿದೆ. ಯೂಟ್ಯೂಬ್‌ನಲ್ಲೂ ‘ಕೆ ೩‘ಯ ಟೀಸರ್ ಸದ್ದು ಮಾಡುತ್ತಿದೆ.ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಸಂತೋಷ್ ವಿಜಯ್‌ಕುಮಾರ್ ಛಾಯಾಗ್ರಹಣ ಹಾಗೂ ಮಹೇಶ್ ತೊಗಟ ಅವರ ಸಂಕಲನವಿರುವ ಈ ಟೆಲಿಚಿತ್ರದ ತಾರಾಬಳಗದಲ್ಲಿ ಯುಗ ಚಂದ್ರು, ಶ್ರೀನಾಥ್ ಗೌಡ, ಲೋಕೇಶ್ ಗೌಡ, ಪಿ.ಕೆ, ಸುವಿನ್ ಮುಂತಾದವರಿದ್ದಾರೆ.ಯುಎನ್‍ಐ ಎಸ್‍ಎ ವಿಎನ್ 0556

More News

ಹನುಮ‌ ಜಯಂತಿಗೆ ಶುಭಾಶಯ ಕೋರಿದ ದರ್ಶನ್

08 Apr 2020 | 5:07 PM

 Sharesee more..
ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

07 Apr 2020 | 5:23 PM

ಬೆಂಗಳೂರು, ಏ.7 (ಯುಎನ್ಐ) ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ನಗರದ ಹೆಬ್ಬಾಳದ ರುದ್ರಭೂಮಿಯಲ್ಲಿಂದು ನೆರವೇರಿಸಲಾಯಿತು.

 Sharesee more..
ಕೊರೊನಾ ವೈರಸ್  ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

06 Apr 2020 | 3:49 PM

ಪುಣೆ, ಏ ೬(ಯುಎನ್‌ಐ) ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

 Sharesee more..
ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

06 Apr 2020 | 3:44 PM

ಬೆಂಗಳೂರು, ಏ 06 (ಯುಎನ್‍ಐ) ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

 Sharesee more..