Sunday, Dec 15 2019 | Time 17:55 Hrs(IST)
 • ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ದೇಶ ರಕ್ಷಣೆಯಾಗಿದೆ; ಪ್ರಧಾನಿ
 • ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್‌ ಇಂಡೀಸ್‌ಗೆ 289 ರನ್ ಗುರಿ
 • ಸೈಫ್ ಪುತ್ರಿಯಾಗಿ ಅನನ್ಯ !
 • ದಬಾಂಗ್ -3 ಕುರಿತು ಸಲ್ಮಾನ್ ಮಾತು
 • ಎಚ್ ಡಿ ರೇವಣ್ಣ ಮಂಡ್ಯ ಉಸಾಬರಿಗೆ ಬರುವುದು ಬೇಡ: ನಾರಾಯಣಗೌಡ
 • ಧೋನಿ ನನ್ನ ನೆಚ್ಚಿನ ಕ್ರಿಕೆಟರ್; ಸಲ್ಮಾನ್ ಖಾನ್
 • ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ
 • ಭಾರತಕ್ಕೆೆ ಪಂತ್, ಅಯ್ಯರ್ ಅರ್ಧಶತಕಗಳ ಆಸರೆ
 • ರಾಹುಲ್ ಗಾಂಧಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವೆ; ರಂಜಿತ್ ಸಾರ್ವಕರ್
 • ಅಸ್ಸಾಂ ಪರಿಸ್ಥಿತಿ ಕುರಿತು ಮೋದಿ, ಅಮಿತ್‍ ಷಾಗೆ ಮಾಹಿತಿ ನೀಡಲಿರುವ ಸೋನೋವಾಲ್‍
 • ವೃತ್ತಿ ಜೀವನದ 11ನೇ ಬಿಡಬ್ಲ್ಯುಎಫ್ ಫೈನಲ್ಸ್‌ ಗೆದ್ದ ಕೆಂಟೊ ಮೊಮೊಟಾ
 • ಕಾಂಗ್ರೆಸ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ; ಮಾಯಾವತಿ ಲೇವಡಿ
 • ಭಾರತೀಯ ಮೀನುಗಾರರ ದೋಣಿಗಳ ಮೇಲೆ ಶ್ರೀಲಂಕಾ ನೌಕಾಪಡೆಯಿಂದ ದಾಳಿ
 • ವಿಶ್ವ ಸುಂದರಿ ಪಟ್ಟ, ಭಾರತದ ಸುಮನ್ ರಾವ್ ಗೆ ದ್ವಿತೀಯ ಸ್ಥಾನ
 • ಫಿಲಿಪೈನ್ಸ್‌ನಲ್ಲಿ 6 8 ತೀವ್ರತೆಯ ಭೂಕಂಪನ
Health -Lifestyle Share

ತಾಯಿಯಿಂದ ಮಗುವಿಗೆ ಮಧುಮೇಹ ವರ್ಗಾವಣೆ ಆತಂಕಕಾರಿ: ಸಮಸ್ಯೆ ಎದುರಿಸಲು ತಕ್ಷಣವೇ ಸಜ್ಜಾಗಿ: ಜಾಗತಿಕ ತಜ್ಞರ ಕರೆ

ತಾಯಿಯಿಂದ ಮಗುವಿಗೆ ಮಧುಮೇಹ ವರ್ಗಾವಣೆ ಆತಂಕಕಾರಿ: ಸಮಸ್ಯೆ ಎದುರಿಸಲು ತಕ್ಷಣವೇ ಸಜ್ಜಾಗಿ: ಜಾಗತಿಕ ತಜ್ಞರ ಕರೆ
ತಾಯಿಯಿಂದ ಮಗುವಿಗೆ ಮಧುಮೇಹ ವರ್ಗಾವಣೆ ಆತಂಕಕಾರಿ: ಸಮಸ್ಯೆ ಎದುರಿಸಲು ತಕ್ಷಣವೇ ಸಜ್ಜಾಗಿ: ಜಾಗತಿಕ ತಜ್ಞರ ಕರೆ

ಬೆಂಗಳೂರು, ನ 19 [ಯುಎನ್ ಐ] ತಾಯಿ ಹಾಗೂ ಶಿಶು ಮರಣ ತಗ್ಗಿಸುವಲ್ಲಿ ಗಮನಾರ್ಹ ಸುಧಾರಣೆ ಕಂಡಿರುವ ಭಾರತದಲ್ಲಿ ಇದೀಗ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸವಾಲುಗಳು ಎದುರಾಗಿದ್ದು, ಆಧುನಿಕ ವ್ಯವಸ್ಥೆಗೆ ತಕ್ಕಂತೆ ತಂತ್ರಜ್ಞಾನ, ವೈದ್ಯರು, ದಾದಿಯರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸಫರ್ - ಆರ್ಟಿಸ್ಟ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

ಖಾಸಗಿ ಆರೋಗ್ಯ ವಲಯ, ಸರ್ಕಾರದ ಜತೆ ಆರ್ಟಿಸ್ಟ್ ಸಂಸ್ಥೆ ಕಾರ್ಯನಿರ್ವಹಿಸಲು ಸಿದ್ಧವಾಗಿದ್ದು, ವೈದ್ಯಕೀಯ ವಲಯದ ವೃತ್ತಿ ಕೌಶಲ್ಯ ವರ್ಗಾವಣೆಗೆ ಸಜ್ಜಾಗಿದೆ. ಬೆಂಗಳೂರಿನ ಜೆ.ಪಿ. ನಗರದ ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಆರ್ಟಿಸ್ಟ್ ಸಂಸ್ಥೆ ಜತೆ ಗುರುತಿಸಿಕೊಂಡಿರುವ ಜಾಗತಿಕ ಆರೋಗ್ಯ ತಜ್ಞರು ಮಹತ್ವದ ದುಂಡುಮೇಜಿನ ಸಭೆ ನಡೆಸಿದರು. ಪ್ರಮುಖವಾಗಿ ಭಾರತ ಮಧುಮೇಹ ರಾಜಧಾನಿಯಾಗಿ ಹೊರ ಹೊಮ್ಮುತ್ತಿದ್ದು, ಸಮಗ್ರ ಆರೋಗ್ಯ ರಕ್ಷಣೆಗೆ ಜಾಗತಿಕ ಆರೋಗ್ಯ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಕಾರ್ಯನಿರ್ವಹಿಸಲು ತೀರ್ಮಾನಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹೆಗಾರರು ಮತ್ತು ಆರ್ಟಿಸ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹೇಮಾ ದಿವಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ ನಿಟ್ಟಿನಲ್ಲಿ ಆರ್ಟಿಸ್ಟ್ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಮಹಿಳೆಯರ ಆರೋಗ್ಯ - ದೇಶದ ಸಂಪತ್ತು ಎನ್ನುವ ವಿಷನ್ ೨೦೨೨ ಘೋಷಣೆಯಡಿ ಆರ್ಟಿಸ್ಟ್ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಕಿಲ್ ಇಂಡಿಯಾ ಸಹಭಾಗಿತ್ವ ಹೊಂದಿದ್ದು, ಕರ್ನಾಟಕ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುವ ಸಂಬಂಧ ಮಾತುಕತೆಗಳು ನಡೆಯುತ್ತಿವೆ ಎಂದರು.

ಈಗಿನ ಜನ ಸಮುದಾಯದಲ್ಲಿ ಗಣನೀಯವಾಗಿ ಆಹಾರ ಪದ್ಧತಿ ಹಾಗೂ ವಿಶೇಷವಾಗಿ ಜೀವನ ಶೈಲಿಯಲ್ಲಿ ಹಠಾತ್ ಬದಲಾವಣೆಗಳಾಗುತ್ತಿವೆ. ಇದರ ಪರಿಣಾಮ ಗರ್ಭಿಣಿ ಸ್ತ್ರೀಯರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತಿದ್ದು, ಇದು ಹುಟ್ಟುವ ಮಕ್ಕಳಿಗೆ ವರ್ಗಾವಣೆಯಾಗುತ್ತಿದೆ. ಪ್ರತಿವರ್ಷ ೪ ರಿಂದ ೫ ದಶಲಕ್ಷ ಗರ್ಭಿಣಿಯರಲ್ಲಿ ಮಧುಮೇಹ ಕಂಡು ಬರುತ್ತಿದೆ. ಈ ಪೈಕಿ ಎರಡು ದಶಲಕ್ಷ ಮಹಿಳೆಯರಿಗೆ ಟೈಪ್ ೨ ಮಧುಮೇಹ ಆವರಿಸಿಕೊಳ್ಳುತ್ತಿದೆ. ಇದರಿಂದ ಹುಟ್ಟುವ ಮಕ್ಕಳು ಸ್ಥೂಲಕಾಯದ ಜತೆಗೆ ಯೌವನಾವಸ್ಥೆಗೆ ತಲುಪುವ ವೇಳೆಗೆ ಮಧುಮೇಹ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಂದಿನ ದಶಕದಲ್ಲಿ ನೂರು ದಶಲಕ್ಷ ಮಕ್ಕಳು ಜನ್ಮ ತಳೆಯುವ ಅಂದಾಜಿದ್ದು, ಆರೋಗ್ಯವಂತ ತಾಯಿ, ಆರೋಗ್ಯವಂತ ಮಗುವಿನ ಜನನ ಅಗತ್ಯವಿದೆ. ಪ್ರಸ್ತುತ ದೇಶದಲ್ಲಿ ೨೦೪ ದಶಲಕ್ಷ ಮಹಿಳೆಯರಲ್ಲಿ ಮಧುಮೇಹವಿದ್ದು, ಇದು ಬರುವ ೨೦೪೫ರ ವೇಳೆಗೆ ೩೦೮ ದಶಲಕ್ಷಕ್ಕೆ ಏರುವ ನಿರೀಕ್ಷೆಯಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ಉತ್ತಮ ಜೀವನ ಶೈಲಿ, ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ ಎಂದು ಹೇಳಿದರು.

ಆರ್ಟಿಸ್ ಸಂಸ್ಥೆಯ ಮಾರ್ಗದರ್ಶಕ ಮತ್ತು ಅಮೆರಿಕದ ಜಪೈಗೋ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಹರ್ಷದ್ ಸಾಂಘ್ವಿ ಮಾತನಾಡಿ, ಕಳದೊಂದು ದಶಕದಲ್ಲಿ ತಾಯಿ ಶಿಶುಮರಣ ಪ್ರಮಾಣ ಗಣನೀಯಗಾಗಿ ತಗ್ಗಿರುವುದು ಭಾರತದ ಮಹತ್ವದ ಸಾಧನೆಯಾಗಿದೆ. ಯಾವುದೇ ದೇಶದ ಬೆಳವಣಿಗೆಯನ್ನು ತಾಯಿ ಮತ್ತು ಶಿಶು ಮರಣದ ಮೇಲೆ ಅಳೆಯಲಾಗುತ್ತದೆ. ಭಾರತ ಈ ನಿಟ್ಟಿನಲ್ಲಿ ಸಾಧನೆ ಮಾಡಿರಬಹುದು. ಆದರೆ ತಾಯಿ ಮತ್ತು ಶಿಶು ಆರೋಗ್ಯ ಕ್ಷೇತ್ರದಲ್ಲಿ ಈಗ ಮುಂದಿನ ಹಂತದ ಸವಾಲುಗಳು ಎದುರಾಗಿವೆ. ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿಶೇಷವಾಗಿ ದಾದಿಯರಿಗೆ ತರಬೇತಿ, ತಂತ್ರಜ್ಞಾನ ವರ್ಗಾವಣೆ, ಕೌಶಲ್ಯ ಅಭಿವೃದ್ಧಿಗೆ ವೈದ್ಯಕೀಯ ಕ್ಷೇತ್ರ ಒತ್ತು ಕೊಡಬೇಕು ಎಂದರು.

ಬ್ರಿಟಿಷ್ ಹಾರ್ಟ್ ಫೌಂಡೇಶನ್ ನ ಪ್ರಾಧ್ಯಾಪಕ ಮಾರ್ಕ್ ಹನ್ಸನ್ ಮಾತನಾಡಿ, ಭಾರತದ ಜನರ ಆಹಾರ, ವಿಹಾರ, ವ್ಯಾಯಾಮ ಸೇರಿ ಸಮಗ್ರ ಜೀವನ ಶೈಲಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ಮಧುಮೇಹ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಹೃದ್ರೋಗದಂತಹ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿವೆ. ಇದನ್ನು ಎಚ್ಚರಿಕೆ ಗಂಟೆ ಎಂದು ಭಾವಿಸಬೇಕು ಎಂದರು.

ಪ್ರಮುಖವಾಗಿ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸಲು ಸರ್ಕಾರದ ನೀತಿ ನಿರೂಪಣೆಯಲ್ಲಿ ಬದಲಾವಣೆಯಾಗಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಮಾಧ್ಯಮಗಳು ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಬೇಕು. ಶಾಲಾ ಹಂತದಿಂದಲೇ ಮಕ್ಕಳಿಗೆ, ನಂತರ ಮಹಿಳೆಯರಿಗೆ ಸದೃಢ ದೇಹ, ಆರೋಗ್ಯವಂತ ಮನಸ್ಸು, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನಾಂದೋಲನ ರೂಪಿಸಬೇಕು. ಇಂತಹ ಚಟಿವಟಿಕೆಗಳಿಗೆ ಸರ್ಕಾರ ಸೂಕ್ತ ನೀತಿ, ನಿರೂಪಣೆ ರೂಪಿಸಿ ಜಾರಿಗೆ ತಂದರೆ ಮುಂದಿನ ಆರೋಗ್ಯವಂತ ಪೀಳಿಗೆಯನ್ನು ದೇಶಕ್ಕೆ ಕೊಡಲು ಸಾಧ್ಯ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಯುಎನ್‌ಐ ವಿಎನ್ 1400

More News
ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ

ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ

22 Nov 2019 | 12:29 PM

ಬೆಂಗಳೂರು, ನ 21 (ಯುಎನ್ಐ) ಈಗಿರುವುದು ಹೈಫೈ ವೈಫೈ ಕಾಲ. ಅಧುನಿಕತೆಯ ಆಡಂಬರ, ಕಣ್ಣುಹಾಯಿಸಿದಷ್ಟು ತಂತ್ರಜ್ಞಾನ. ಸಂಚರಿಸಲು ಕಾರು, ಬಸ್ಸು, ಬೈಕು. ಆದರೆ ರಾಜ್ಯದ ಅದೆಷ್ಟೋ ಕುಗ್ರಾಮಗಳಲ್ಲಿ ನಡೆಯಲು ರಸ್ತೆಯೇ ಇಲ್ಲದಿರುವುದು ಕೂಡ ವಾಸ್ತವ. ಹೌದು, ಚಾಮರಾಜನಗರ ಜಿಲ್ಲೆಯ ಅದೆಷ್ಟೋ ಗ್ರಾಮಗಳಲ್ಲಿ ಮಕ್ಕಳು, ವಯೋವೃದ್ಧರು ನಡೆದಾಡುವುದಿರಲಿ, ಗಟ್ಟಿಮುಟ್ಟಾದ ಹದಿಹರೆಯದ ಯುವಕ-ಯುವತಿಯರೇ ನಡೆದಾಡಲು ಸಂಕಷ್ಟಪಡುವಂತಹ ದುಃಸ್ಥಿತಿ ಇದೆ.

 Sharesee more..

ನ 25 ರಿಂದ ನಗರದಲ್ಲಿ ಕ್ಷಯ ರೋಗ ನಿಯಂತ್ರಣ ಆಂದೋಲನ

21 Nov 2019 | 6:56 PM

 Sharesee more..