Tuesday, Oct 22 2019 | Time 08:55 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Entertainment Share

ತಾರಾ–ವೇಣು ದಂಪತಿ ಪುತ್ರ ಶ್ರೀಕೃಷ್ಣ ಬೆಳ್ಳಿತೆರೆಗೆ

ಬೆಂಗಳೂರು, ಸೆ 19 (ಯುಎನ್ಐ) ಜನಪ್ರಿಯ ನಟಿ, ರಾಜಕಾರಣಿ ತಾರಾ ಅನುರಾಧ ಹಾಗೂ ಛಾಯಾಗ್ರಾಹಕ ವೇಣು ದಂಪತಿಯ ಪುತ್ರ ಶ್ರೀಕೃಷ್ಣ ಬಾಲ ಕಲಾವಿದನಾಗಿ ಚಂದನವನಕ್ಕೆ ಪ್ರವೇಶಿಸುತ್ತಿದ್ದಾನೆ.

ನಟ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀಕೃಷ್ಣ, ತನ್ನ ಪಾತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡಿದ್ದಾನೆ.

ನಿಶ್ಚಿತಾ ಕಂಬೈನ್ಸ್ ಅಡಿಯಲ್ಲಿ ಎಂ.ಬಿ. ಮಂಜುಳಾ ನಿರ್ಮಿಸುತ್ತಿರುವ ಶಿವಾರ್ಜುನ ಚಿತ್ರವನ್ನು ಶಿವತೇಜ ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ, ರವಿ ಕಿಶನ್,ಸಾಧು ಕೋಕಿಲಾ ಮೊದಲಾದವರು ತಾರಾಬಳಗದಲ್ಲಿದ್ದಾರೆ.

ಸ್ಯಾಂಡಲ್ ವುಡ್ ಗೆ ಈಗಾಗಲೇ ಹಲವು ನಟ, ನಟಿಯರು, ನಿರ್ಮಾಪಕರ ಮಕ್ಕಳು ಬಾಲಕಲಾವಿದರಾಗಿ ಪಾದಾರ್ಪಣೆ ಮಾಡುತ್ತಿದ್ದು, ಈ ಪಟ್ಟಿಗೆ ಇದೀಗ ಶ್ರೀಕೃಷ್ಣ ಸೇರ್ಪಡೆಯಾಗಿದ್ದಾನೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ರಕ್ಷಿತಾ-ಪ್ರೇಮ್, ನೆನಪಿರಲಿ ಪ್ರೇಮ, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ, ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ, ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಕೂಡ ಅಭಿನಯರಂಗ ಪ್ರವೇಶಿಸಿದ್ದಾರೆ.

ಯುಎನ್ಐ ಎಸ್ಎ ಆರ್ ಕೆ 1353