SpecialPosted at: Dec 4 2020 8:13PM Shareತೆಲಂಗಾಣ ಜನರು ಬದಲಾವಣೆ ಬಯಸುತ್ತಿದ್ದಾರೆ; ಕೇಂದ್ರ ಸಚಿವ ಕಿಶನ್ ರೆಡ್ಡಿಹೈದ್ರಾಬಾದ್, ಡಿ 4(ಯುಎನ್ಐ) ತೆಲಂಗಾಣ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ನಾಯಕ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ. ಗ್ರೇಟರ್ ಹೈದ್ರಾಬಾದ್ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನಗಳನ್ನು ಪಡೆದುಕೊಂಡು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಿಶನ್ ರೆಡ್ಡಿ ... ತೆಲಂಗಾಣದಲ್ಲಿ ಬಿಜೆಪಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ, ಗ್ರೇಟರ್ ಹೈದ್ರಾಬಾದ್ ಮುನಿಸಿಪಲ್ ಕಾರ್ಪೋರೇಷನ್ ಬಿಜೆಪಿ ಬಲ ಪಡೆದುಕೊಂಡಿದೆ ಎಂದು ಹೇಳಿದರು.ಜನರ ನಂಬಿಕೆಯನ್ನು ಎಂ ಐ ಎಂ, ಟಿ ಆರ್ ಎಸ್ ಪಕ್ಷಗಳು ಕಳೆದುಕೊಂಡಿವೆ ಎಂದು ಅವರು ಹೇಳಿದರು. ಚುನಾವಣೆಗಳು ತ್ವರಿತವಾಗಿ ಸಮೀಪಿಸಿದ್ದರಿಂದ ಸಿದ್ದತೆಗೆ ಬಿಜೆಪಿ ಸಾಕಷ್ಟು ಸಮಯ ಲಭಿಸಲಿಲ್ಲ. ಸಮಯ ಸಿಕ್ಕಿದ್ದರೆ ಮೇಯರ್ ಪೀಠವನ್ನು ಪಕ್ಷ ದಕ್ಕಿಸಿಕೊಳ್ಳುತ್ತಿತ್ತು ಎಂದು ಹೇಳಿದರು. ಗ್ರೇಟರ್ ಫಲಿತಾಂಶಗಳು ತಮಗೆ ತೃಪ್ತಿ ನೀಡಿವೆ ಎಂದು ಹೇಳಿದರು.ಯುಎನ್ಐ ಕೆವಿಆರ್ 20.11