Friday, Feb 28 2020 | Time 10:31 Hrs(IST)
 • ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನಿಂದ ನೋಟೀಸ್ ಜಾರಿ
 • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
 • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
 • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
 • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
 • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
 • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
 • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
 • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
 • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
 • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Special Share

ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಗಡಿ ಕೊಳವೆ ಮಾರ್ಗ ಯೋಜನೆಗೆ ಪ್ರಧಾನಿಮೋದಿ, ನೇಪಾಳಪ್ರಧಾನಿ ಜಂಟಿ ಉದ್ಘಾಟನೆ

ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಗಡಿ ಕೊಳವೆ ಮಾರ್ಗ ಯೋಜನೆಗೆ ಪ್ರಧಾನಿಮೋದಿ, ನೇಪಾಳಪ್ರಧಾನಿ ಜಂಟಿ ಉದ್ಘಾಟನೆ
ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಗಡಿ ಕೊಳವೆ ಮಾರ್ಗ ಯೋಜನೆಗೆ ಪ್ರಧಾನಿಮೋದಿ, ನೇಪಾಳಪ್ರಧಾನಿ ಜಂಟಿ ಉದ್ಘಾಟನೆ

ನವದೆಹಲಿ, ಸೆ 10 (ಯುಎನ್ಐ)-ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಗಡಿಯಾಚೆಗಿನ ಮೋತಿಹಾರಿ- ಅಮ್ಲೆಖ್ಗುಂಜ್ ಪೆಟ್ರೋಲಿಯಂ ಉತ್ಪನ್ನಗಳ ಕೊಳವೆ ಮಾರ್ಗ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು

ಹೊಸ ಯೋಜನೆಯ ಆರಂಭದ ಮೂಲಕ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯದಲ್ಲಿ ನವ ಸಂಚಲನ ಸೃಷ್ಟಿಯಾಗಲಿದೆ ಎಂದು ಯೋಜನೆಗೆ ಚಾಲನೆಗೆ ನೀಡಿದ ನಂತರ ಪ್ರಧಾನಿ ಮೋದಿ ಹೇಳಿದರು.

ಪೈಪ್ ಲೈನ್ ಯೋಜನೆಯಿಂದ ಉಭಯ ದೇಶಗಳ ನಡುವೆ ಅಂತರಿಕ ಸಂಪರ್ಕ, ಪರಸ್ಪರ ಅವಲಂಬನೆ ಹೆಚ್ಚಳಗೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ವ್ಯಾಪಾರ ಹಾಗೂ ಸಾಗಣೆ ಸಂಪರ್ಕಕ್ಕೆ ಈ ಯೋಜನೆ ಒಂದು ಉತ್ತಮ ಉದಾಹರಣೆ ಎಂದು ನೇಪಾಳ ಪ್ರಧಾನಿ ಓಲಿ ಅಭಿಮತ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಆದಷ್ಟು ಶೀಘ್ರ ನೇಪಾಳಕ್ಕೆ ಭೇಟಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ ನೇಪಾಳ ಪ್ರಧಾನಿ, ಸಮೃದ್ಧ ನೇಪಾಳಕ್ಕಾಗಿ ಭಾರತೀಯ ಸಹಭಾಗಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ತಾವು ಹೆಚ್ಚು ಉತ್ಸುಕರಾಗಿರುವುದಾಗಿ ಹೇಳಿದರು.

ನೇಪಾಳ ಭೇಟಿಗೆ ಪ್ರಧಾನಿ ಕೆ.ಪಿ. ಓಲಿ ಶರ್ಮಾ ಅವರು ನೀಡಿರುವ ಆಹ್ವಾನ ತಮಗೆ ತುಂಬಾ ಸಂತಸ ತಂದಿದ್ದು, ಆದಷ್ಟು ಶೀಘ್ರ ಹಿಮಾಲಯದ ಪುಟ್ಟ ರಾಷ್ಟ್ರಕ್ಕೆ ಭೇಟಿ ನೀಡುವುದಾಗಿ ಮೋದಿ ಪ್ರಕಟಿಸಿದರು.

ಉಭಯ ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಇಂತಹ ಯೋಜನೆಗೆ ಚಾಲನೆ ನೀಡುತ್ತಿರುವ ಈ ಸಂದರ್ಭ ಅತ್ಯಂತ ಸಂತಸದ ಘಳಿಗೆ ಎಂದು ಮೋದಿ ಬಣ್ಣಿಸಿದರು.ನೇಪಾಳ ಹಾಗೂ ಭಾರತ ನಡುವೆ ಶತಶತಮಾನಗಳಿಂದ ಜನರ ನಡುವಣ ಅತ್ಯುತ್ತಮ ಬಾಂಧವ್ಯ ಅನುಭವಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ಉನ್ನತ ರಾಜಕೀಯ ಮಟ್ಟದಲ್ಲಿ ಬಾಂಧವ್ಯ ವೃದ್ದಿಸಿದ್ದು ಕಳೆದೊಂದೂವರೆ ವರ್ಷದಲ್ಲಿ ನೇಪಾಳ ಪ್ರಧಾನಿ ಅವರನ್ನು ತಾವು ನಾಲ್ಕು ಬಾರಿ ಭೇಟಿ ಯಾಗಿರುವುದಾಗಿ ಮೋದಿ ಹೇಳಿದರು.

ಯುಎನ್ಐ ಕೆವಿಆರ್ ವಿಎನ್ 1327