Wednesday, Dec 11 2019 | Time 02:23 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
Sports Share

ದೇವದತ್ತ ಸ್ಫೋಟಕ ಬ್ಯಾಟಿಂಗ್: ಜಾರ್ಖಂಡ್ ಗೆ ಕಠಿಣ ಗುರಿ

ಸೂರತ್, ನ 22 (ಯುಎನ್‌ಐ) ದೇವದತ್ತ ಪಡಿಕ್ಕಲ್ (63 ರನ್) ಅವರ ಆಕರ್ಷಲ ಅರ್ಧಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋಫಿಯ ಸೂಪರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಜಾರ್ಖಂಡ್ ತಂಡಕ್ಕೆೆ ಕಠಿಣ ಗುರಿ ನೀಡಿದೆ.
ಇಲ್ಲಿನ ಲಾಲಾಬಾಯಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ 20 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆೆ 189 ರನ್ ಗಳಿಸಿತು. ಆ ಮೂಲಕ ಜಾರ್ಖಂಡ್‌ಗೆ 190 ರನ್ ಕಠಿಣ ಗುರಿ ನೀಡಿತು.
ಆರಂಭಿಕರಾಗಿ ಕಣಕ್ಕೆೆ ಇಳಿದ ಕೆ.ಎಲ್ ರಾಹುಲ್ ಹಾಗೂ ದೇವದತ್ತ ಪಡಿಕ್ಕಲ್ ಜೋಡಿ ಮೊದಲನೇ ವಿಕೆಟ್‌ಗೆ 114 ರನ್ ಗಳಿಸಿ ತಂಡಕ್ಕೆೆ ಭರ್ಜರಿ ಅಡಿಪಾಯ ಹಾಕಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ದೇವದತ್ತ ಪಡಿಕ್ಕಲ್ ಕೇವಲ 30 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ 63 ರನ್ ಗಳಿಸಿದರು.
ಉಕ್ರಾಂತ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಕೆ.ಎಲ್ ರಾಹುಲ್ 36 ರನ್ ಗಳಿಸಿದರು.
ಇನ್ನುಳಿದಂತೆ ಎಲ್ಲ ಬ್ಯಾಟ್ಸ್‌‌ಮನ್‌ಗಳು ತಮ್ಮ ಜವಾಬ್ದಾರಿಯನ್ನು ಒಂದು ಹಂತದಲಿ ಪೂರ್ಣಗೊಳಿಸಿದರು.
ಸೋನು ಸಿಂಗ್ ಮೂರು ವಿಕೆಟ್ ಪಡೆದರೆ, ಮೋನು ಕುಮಾರ್ ಎರಡು ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್ ಗಳಿಗೆ 189/6 (ದೇವದತ್ತ ಪಡಿಕ್ಕಲ್ 63, ಕೆ.ಎಲ್ ರಾಹುಲ್ 36, ಕರುಣ್ ನಾಯರ್ 19; ಸೋನು ಸಿಂಗ್ 28 ಕ್ಕೆೆ 3, ಮೋನು ಕುಮಾರ್ 29 ಕ್ಕೆೆ 2)
ಯುಎನ್‌ಐ ಆರ್ ಕೆ 2046
More News

ಏಕದಿನ ಸರಣಿ: ಧವನ್ ಸ್ಥಾನಕ್ಕೆೆ ಅಗರ್ವಾಲ್

10 Dec 2019 | 10:20 PM

 Sharesee more..
ಮೂರನೇ ಟಿ-20 ಪಂದ್ಯ:ಇಂಡೋ-ವಿಂಡೀಸ್ ನಡುವೆ ಹೈ ವೋಲ್ಟೇಜ್ ಕದನ

ಮೂರನೇ ಟಿ-20 ಪಂದ್ಯ:ಇಂಡೋ-ವಿಂಡೀಸ್ ನಡುವೆ ಹೈ ವೋಲ್ಟೇಜ್ ಕದನ

10 Dec 2019 | 9:46 PM

ಸ್ಥಳ: ವಾಂಖೆಡೆ ಕ್ರೀಡಾಂಗಣ: ಮುಂಬೈ, ಡಿ 10 (ಯುಎನ್‌ಐ) ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ನಾಳೆ ನಡೆಯುವ ಮೂರನೇ ಅಥವಾ ನಿರ್ಣಾಯಕ ಪಂದ್ಯದ ಗೆಲುವಿನ ಮೇಲೆ ಚಿತ್ತ ನೆಟ್ಟಿವೆ.

 Sharesee more..