Monday, Mar 1 2021 | Time 03:03 Hrs(IST)
Election Share

ದಿವಂಗತ ತಾಯಿಯ ಹೆಸರು ರಸ್ತೆಗೆ ನಾಮಕರಣ.. ಭಾವೋದ್ವೇಗೊಂಡ ಸೋನು ಸೂದ್..

ಮುಂಬೈ, ಜ 1(ಯುಎನ್ಐ) "ನನ್ನ ಕನಸು .. ಜೀವನದ ಆಶಯ ಇಂದು ನೆರವೇರಿದೆ”. ತವರೂರು ಪಂಜಾಬ್ ನ ಮೋಗಾದಲ್ಲಿ ನನ್ನಮ್ಮನ ಹೆಸರಿನಲ್ಲಿ .. ‘‘ ಪ್ರೊಫೆಸರ್ ಸರೋಜ್ ಸೂದ್ ಮಾರ್ಗ್ ” ಎಂದು ರಸ್ತೆಯೊಂದಕ್ಕೆ ನಾಮಕರಣಗೊಳಿಸಿದ್ದಾರೆ.
ಇದು ನನ್ನ ಜೀವನದ ಅತ್ಯಂತ ಮುಖ್ಯವಾದ ಅಧ್ಯಾಯ. ನನ್ನಮ್ಮ, ತಮ್ಮ ಜೀವನದುದ್ದಕ್ಕೂಸಂಚರಿಸಿದ ಆ ರಸ್ತೆಗೆ ಆಕೆಯ ಹೆಸರಿಟ್ಟಿದ್ದಾರೆ. ಅವರು ಕಾಲೇಜಿನಿಂದ ಮನೆಗೆ, ಮನೆಯಿಂದ ಕಾಲೇಜಿಗೆ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಸ್ವರ್ಗದಲ್ಲಿರುವ ನನ್ನ ತಂದೆ -ತಾಯಿ... ಈ ವಿಷಯ ತಿಳಿದು ಖಂಡಿತವಾಗಿಯೂ ಸಂತೋಷಿಸಲಿದ್ದಾರೆ. ಇದನ್ನು ಸಾಧ್ಯವಾಗಿಸಿದ ಹರ್ಜೋತ್ ಕಮಲ್, ಸಂದೀಪ್ ಹ್ಯಾನ್ಸ್ ಹಾಗೂ ಅನಿತಾ ದರ್ಶಿ ಅವರಿಗೆ ಧನ್ಯವಾದಗಳು. ಈಗ ನಾನು ಹೆಮ್ಮೆಯಿಂದ ಹೇಳಬಲ್ಲೆ. ವಿಶ್ವದ ನನ್ನ ಅಚ್ಚುಮೆಚ್ಚಿನ ಸ್ಥಳ .. "ಪ್ರೊಫೆಸರ್ ಸರೋಜ್ ಸೂದ್ ರಸ್ತೆ .. ನನ್ನ ಯಶಸ್ಸಿನ ದಾರಿ" ಎಂದು ನಟ ಸೋನು ಸೂದ್ ಭಾವೋದ್ವೇಗಕ್ಕೊಳಗಾಗಿದ್ದಾರೆ.
ಪಂಜಾಬ್‌ನ ತಮ್ಮ ತವರೂರು ಮೋಗಾದ ಒಂದು ರಸ್ತೆಗೆ ತನ್ನ ಹೆತ್ತಮ್ಮನ ಹೆಸರು ಇಟ್ಟಿರುವುದಕ್ಕೆ ಸೂದ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ತಮ್ಮ ಸೇವಾ ಕಾರ್ಯಕ್ರಮ ಆರಂಭಿಸಿದ್ದ ಸೋನು ಸೂದ್, ಇಂದಿಗೂ ಅದನ್ನು ಮುಂದುವರಿಸಿದ್ದಾರೆ. ಇತರ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ವಾಪಸ್ ಕಳುಹಿಸುವುದರೊಂದಿಗೆ ಆರಂಭಗೊಂಡ ಅವರು ಸೇವೆ... “ಕಷ್ಟ ಎದುರಾದರೆ ಸಾಕು.. ನಮಗೆ ಸೋನು ಇದ್ದಾರೆ” ಎಂಬ ಭರವಸೆ ಮೂಡಿಸುವ ಆಧುನಿಕ ಕರ್ಣ ಎಂದು ಹೆಸರು ಪಡೆದುಕೊಂಡಿದ್ದಾರೆ. ಈ ಸೇವೆಗಳಿಗಾಗಿ ವಿಶ್ವಸಂಸ್ಥೆ ನೀಡುವ ಮಾನವೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಸೋನು ಸೂದ್ ಜನರ ಹೃದಯದಲ್ಲಿ ‘ದೇವರಾಗಿ” ಸ್ಥಾನ ಗಳಿಸಿದ್ದಾರೆ. ತಮ್ಮ ಸೇವಾ ಗುಣಗಳಿಗೆ ತಾಯಿ ಸರೋಜ್ ಸೂದ್ ತಮ್ಮಲ್ಲಿ ಬೆಳಸಿದ್ದ ಸಂಸ್ಕಾರವೇ ಕಾರಣ ಎಂದು ಈಗಾಗಲೇ ಹಲವಾರು ಬಾರಿ ಸೂದ್ ಹೇಳಿಕೊಂಡಿದ್ದಾರೆ.
ಯುಎನ್ಐ ಕೆವಿಆರ್ 15.23
There is no row at position 0.