Sunday, Apr 5 2020 | Time 16:14 Hrs(IST)
 • ಕರ್ಫ್ಯೂ ಉಲ್ಲಂಘಿಸಿದ ಆಟಗಾರನಿಗೆ 3 ತಿಂಗಳು ಗೃಹ ದಿಗ್ಬಂಧನ
 • ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಿಂದ ಥಾಯ್ಲೆಂಡ್, ಮಲೇಷ್ಯಾಅಮಾನತು
 • ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳ ಜತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
 • ಪಿಎಂ ಕೇರ್ಸ್ ನಿಧಿಗೆ ೧೦೦ ಕೋಟಿ, ಕರ್ನಾಟಕಕ್ಕೆ ೫ ಕೋಟಿ ನೆರವು ಪ್ರಕಟಿಸಿದ ಡಿಮಾರ್ಟ್
 • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
National Share

ದೇಶದಲ್ಲಿ 600 ದಾಟಿದ ಕೊರೋನ ಪ್ರಕರಣಗಳ ಸಂಖ್ಯೆ, ಇನ್ನಿಬ್ಬರು ಸಾವು; ಕೇಂದ್ರದಿಂದ 80 ಕೋಟಿ ಬಡವರಿಗೆ ಸಬ್ಸಿಡಿ ದರದಲ್ಲಿ ಪಡಿತರ

ದೇಶದಲ್ಲಿ 600 ದಾಟಿದ ಕೊರೋನ ಪ್ರಕರಣಗಳ ಸಂಖ್ಯೆ, ಇನ್ನಿಬ್ಬರು ಸಾವು; ಕೇಂದ್ರದಿಂದ 80 ಕೋಟಿ ಬಡವರಿಗೆ ಸಬ್ಸಿಡಿ ದರದಲ್ಲಿ ಪಡಿತರ
ದೇಶದಲ್ಲಿ 600 ದಾಟಿದ ಕೊರೋನ ಪ್ರಕರಣಗಳ ಸಂಖ್ಯೆ, ಇನ್ನಿಬ್ಬರು ಸಾವು; ಕೇಂದ್ರದಿಂದ 80 ಕೋಟಿ ಬಡವರಿಗೆ ಸಬ್ಸಿಡಿ ದರದಲ್ಲಿ ಪಡಿತರ

ನವದೆಹಲಿ, ಮಾರ್ಚ್ 25(ಯುಎನ್ಐ)- ಕರೋನವೈರಸ್ ಹರಡುವಿಕೆ ತಡೆಯಲು ಭಾರತ 21 ದಿನಗಳ ಸಂಪೂರ್ಣ ಲಾಕ್‍ಡೌನ್‍ ಜಾರಿಗೊಳಿಸಿರುವ ಮಧ್ಯೆ, ಬುಧವಾರ ಕನಿಷ್ಠ 42 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 606 ಕ್ಕೆ ತಲುಪಿದೆ.

ಮಾರಕ ಸೋಂಕಿನಿಂದ ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ .

ಇಂದೋರ್‌ನ ಸರ್ಕಾರಿ ಎಂವೈ ಆಸ್ಪತ್ರೆಯಲ್ಲಿ ದಾಖಲಾಗಿ ಕೊವಿದ್‍ -19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಉಜ್ಜಯಿನಿ ಮೂಲದ ಮಹಿಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಮಾರ್ಚ್ 23 ರಂದು ಸೋಂಕು ದೃಢಪಟ್ಟು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ವ್ಯಕ್ತಿ ಸಹ ಈ ಕಾಯಿಲೆಯೊಂದಿಗೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ.

ಮಾರಕ ವೈರಾಣು ಸೋಂಕಿನಿಂದ ದೇಶದಲ್ಲಿ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ.

128 ಪ್ರಕರಣಗಳು ದೃಢಪಡುವುದರೊಂದಿಗೆ ಮಹಾರಾಷ್ಟ್ರ ಹೆಚ್ಚು ಸೋಂಕು ಪೀಡಿತ ರಾಜ್ಯವೆನಿಸಿದೆ. ನಂತರದ ಸ್ಥಾನಗಳಲ್ಲಿರುವ ಕೇರಳದಲ್ಲಿ 109, ಕರ್ನಾಟಕ 41, ಗುಜರಾತ್ 38, ಉತ್ತರ ಪ್ರದೇಶ 37, ರಾಜಸ್ಥಾನ 36 ಮತ್ತು ತೆಲಂಗಾಣ 35 ಪ್ರಕರಣಗಳು ದಾಖಲಾಗಿವೆ.

ದೆಹಲಿಯಲ್ಲಿ 31 , ಪಂಜಾಬ್ 29, ಹರಿಯಾಣ 28, ತಮಿಳುನಾಡು 18, ಮಧ್ಯಪ್ರದೇಶ 14, ಲಡಾಖ್ 13 ಮತ್ತು ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ತಲಾ 9 ಪ್ರಕರಣಗಳು ವರದಿಯಾಗಿವೆ.

ಚಂಡೀಗಢ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ 7, ಬಿಹಾರ ಮತ್ತು ಉತ್ತರಾಖಂಡ್ ನಲ್ಲಿ ತಲಾ 4, ಹಿಮಾಚಲ ಪ್ರದೇಶ 3, ಒಡಿಶಾ 2 ಮತ್ತು ಚತ್ತೀಸ್‍ಗಢದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳ ಆಡಳಿತಗಳು ಕರೋನವೈರಸ್ ರೋಗಿಗಳಿಗೆ ಚಿಕಿತ್ಸೆಗಾಗಿ ಸ್ಥಳಾವಕಾಶ ಸೃಷ್ಟಿಸುವ ಕೆಲಸವನ್ನು ಚುರುಕುಗೊಳಿಸಿವೆ. ಇದಲ್ಲದೆ, ಸೇನಾ ಶಸ್ತ್ರಾಸ್ತ್ರ ಕಾರ್ಖಾನೆಗಳು ಮತ್ತು ಕೇಂದ್ರ ಅರೆಸೈನಿಕ ಪಡೆಗಳು 2,000 ಹಾಸಿಗೆಗಳ ಸೌಲಭ್ಯವನ್ನು ಒದಗಿಸಿವೆ.

ಜನರು ಎದುರಿಸಬಹುದಾದ ಕಷ್ಟಗಳನ್ನು ಪರಿಗಣಿಸಿ, 80 ಕೋಟಿ ಬಡ ಜನರಿಗೆ 3 ರೂ.ಗೆ ಕೆಜಿ ಅಕ್ಕಿ ಮತ್ತು 2 ರೂ.ಗೆ ಕೆ.ಜಿ ಗೋಧಿ ವಿತರಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.

‘ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 7 ಕೆಜಿ ಪಡಿತರ ದೊರೆಯಲಿದೆ.’ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವ ಅನೇಕರು ಭೂಮಾಲೀಕರು ಮತ್ತು ಇತರರಿಂದ ಕಿರುಕುಳ ಎದುರಿಸುತ್ತಿರುವ ಬಗ್ಗೆ ವರದಿಗಳು ಹೊರಬರುತ್ತಿದ್ದಂತೆ, ‘ಕೆಲ ವ್ಯಕ್ತಿಗಳ ಕೆಟ್ಟ ನಡವಳಿಕೆಯಿಂದ ತಮಗೆ ತುಂಬಾ ನೋವಾಗಿದೆ.’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಸ್ವಕ್ಷೇತ್ರವಾದ ವಾರಾಣಸಿ ಕ್ಷೇತ್ರದ ಜನರೊಂದಿಗೆ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಮೋದಿ, ಕೊರೊನಾವೈರಸ್ ಬಗ್ಗೆ ವಿಶ್ವಾಸಾರ್ಹ ಮಾಹಿತಿಗಾಗಿ ವಾಟ್ಸಾಪ್ ಸಹಾಯವಾಣಿ ಸಂಖ್ಯೆ - 9013151515 ಕರೆ ಮಾಡಬಹುದು ಎಂದು ಹೇಳಿದ್ದಾರೆ.

‘ಮಹಾಭಾರತ ಯುದ್ಧವನ್ನು 18 ದಿನಗಳಲ್ಲಿ ಗೆದ್ದರೂ, ಕರೋನವೈರಸ್ ವಿರುದ್ಧದ ಸಮರಕ್ಕೆ 21 ದಿನ ಬೇಕಾಗುತ್ತದೆ.’ ಎಂದು ಹೇಳಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅನೇಕ ರಾಜ್ಯಗಳು ಸಹಾಯವಾಣಿ ಸಂಖ್ಯೆಯನ್ನು ಘೋಷಿಸಿವೆ.

ಈ ಮಧ್ಯೆ, ಜನಗಣತಿ 2021 ಮತ್ತು ಎನ್‌ಪಿಆರ್ ಪ್ರಕ್ರಿಯೆಯ ನವೀಕರಣದ ಕುರಿತಂತೆ ಕೇಂದ್ರ ಸರ್ಕಾರ ಮೊದಲ ಹಂತವನ್ನು ಮುಂದೂಡಿದೆ. ಇದು ಏಪ್ರಿಲ್‌ನಿಂದ ಆರಂಭವಾಗಬೇಕಿತ್ತು. 21 ದಿನಗಳ ಲಾಕ್‌ಡೌನ್ ಅವಧಿಯ ಕೊನೆಯ ದಿನವಾದ ಏಪ್ರಿಲ್ 14 ರವರೆಗೆ ರೈಲ್ವೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.ಇದಕ್ಕೂ ಮೊದಲು ಮಾರ್ಚ್ 31 ರವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಯುಎನ್‍ಐ ಎಸ್‍ಎಲ್‍ಎಸ್ 2056