Thursday, Apr 9 2020 | Time 22:04 Hrs(IST)
 • ತಮಿಳುನಾಡಿನಲ್ಲಿ ಕೊರೊನವೈರಸ್‍ನ ಹೊಸ 96 ಪ್ರಕರಣಗಳು ದೃಢ, ಒಟ್ಟು ಸೋಂಕಿತರ ಸಂಖ್ಯೆ 834ಕ್ಕೆ ಏರಿಕೆ
 • ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ 50 ವಿದೇಶಿ ಸದಸ್ಯರ ಪತ್ತೆ; ಸರ್ಕಾರ
 • ಮೃಗಾಲಯದಲ್ಲಿ ಪ್ರಾಣಿಗಳಿಗೆ ಸೋಂಕು ತಗುಲದಂತೆ ಅಗತ್ಯ ಕ್ರಮ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ
 • ಕೋವಿಡ್; ದೇಶದಲ್ಲಿ ಒಂದೇ ದಿನದಲ್ಲಿ 663 ಹೊಸ ಪ್ರಕರಣ, 20 ಸಾವು; ಒಟ್ಟು 5865 ಸೋಂಕಿತರು
 • ಕೇವಲ 8 ದಿನಗಳಲ್ಲಿ 97 ಕೊರೋನಾ ಸೋಂಕಿನ ಪ್ರಕರಣ ಪತ್ತೆ: ಸುರೇಶ್ ಕುಮಾರ್
 • ಕೊವಿದ್ -19: ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
 • ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದವರಿಗೂ ಪಡಿತರ ವಿತರಣೆ : ಸಂಪುಟದ ಮಹತ್ವದ ನಿರ್ಣಯ
 • ಕೊರೋನಾಗೆ ಯಾವುದೇ ಜಾತಿ,ಧರ್ಮ, ಮತ, ಪಂಥ ಇಲ್ಲ: ನಳೀನ್ ಕುಮಾರ್ ಕಟೀಲ್
 • ಲಾಕ್‌ಡೌನ್ ವಿಸ್ತರಣೆ: ಪ್ರಧಾನಿ ಜೊತೆ ಚರ್ಚಿಸಿ ಮುಂದಿನ ತೀರ್ಮಾನಕೈಗೊಳ್ಳಲು ಸಚಿವ ಸಂಪುಟ ನಿರ್ಧಾರ
 • ಚಿನ್ನದ ಬೇಡಿಕೆ ಶೇ 30ರಷ್ಟು ಇಳಿಕೆ; ಐಸಿಸಿ
 • ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಜನವಾದಿ ಮಹಿಳಾ ಸಂಘಟನೆ
 • ಮುಖ್ಯಮಂತ್ರಿ ಗದ್ದುಗೆಗೆ ಅಪಾಯ ಎಂ ಎಲ್ ಸಿ ಪದವಿ ನೀಡಿ !
 • ಕೈಗಾರಿಕಾ ವಲಯದ ಚೇತರಿಕೆಗೆ ಸರಕಾರದಿಂದ ಅಗತ್ಯ ಕ್ರಮ: ಸಚಿವ ಜಗದೀಶ್‌ ಶೆಟ್ಟರ್
 • ಪರಿಹಾರ ಸಾಮಗ್ರಿ ಮೇಲೆ ಫೋಟೋ: ಎಚ್ ಡಿ ಕುಮಾರಸ್ವಾಮಿ ಕೆಂಡ
 • ಜಮ್ಮು ಕಾಶ್ಮೀರದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಪುನಾರಂಭ ಕೋರಿಕೆ; ನೋಟಿಸ್ ಜಾರಿ
Karnataka Share

ನಗರ ಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲೂ ಏರಿಯಾ ಮಟ್ಟದ ಸಭೆ ನಡೆಸಲು ಒತ್ತಾಯ

ಬೆಂಗಳೂರು,ಜ 20 (ಯುಎನ್ಐ) ಗ್ರಾಮ ಪಂಚಾಯತಿಯಲ್ಲಿ ನಡೆಯುವಂತೆಯೇ ನಗರ ಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲೂ ಏರಿಯಾ ಮಟ್ಟದ ಸಭೆ ನಡೆಸಬೇಕು ಎಂದು ನ್ಯಾಯಾಲಯದ ಆದೇಶವಿದ್ದು, ಇದನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಾರ್ಡ್ ಸಮಿತಿ ವೇದಿಕೆಯ ಮುಖ್ಯಸ್ಥೆ ಕಾತ್ಯಾಯಿನಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ 1500 ಮತದಾರರಿಗೆ ಒಂದು ಏರಿಯಾ ಸಭೆ ನಡೆಸಬೇಕೆನ್ನುವುದು ಸಮಿತಿ ಆಗ್ರಹ. ನ್ಯಾಯಾಲಯ 5 ಸಾವಿರ ಜನರಿಗೆ ಒಂದು ಏರಿಯಾ ಸಭೆ ನಡೆಸುವಂತೆ ಆದೇಶಿಸಿತ್ತು. ಆದರೆ ಈ ಕುರಿತು ಉಂಟಾಗುವ ಸಮಸ್ಯೆಗಳನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಮ್ ಪರ್ವೇಜ್‌ ಅವರ ಜತೆ ಚರ್ಚಿಸಿದ್ದೇವೆ. ಇದಕ್ಕೆ ಯಾವುದೇ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಲಿದ್ದೇವೆ ಎಂದರು.
ಕೆ.ಎಂ.ಸಿ ಕಾಯ್ದೆ ತಿದ್ದುಪಡಿಯ ಮುಖ್ಯ ಉದ್ದೇಶ ಈಡೇರಿಕೆಯಾಗಿ, ನಗರ ಪ್ರದೇಶದ ಜನಸಾಮಾನ್ಯರಿಗೂ ಕುಂದು ಕೊರತೆ ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಬೇಕು. ಮತದಾರರೇ ಏರಿಯಾ ಸಭೆಯ ಸದಸ್ಯರಾಗಿರುತ್ತಾರೆ. ಕನಿಷ್ಠ 3 ತಿಂಗಳಿಗೊಮ್ಮೆ ಸಭೆ ನಡೆಸುವುದು, ಸಭೆಯಲ್ಲಿ ಹಾಜರಿದ್ದ ಸದಸ್ಯರ ಬಹುಮತದಿಂದ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವ ಅಂಶಗಳು ಮಹತ್ವದ್ದಾಗಿದೆ ಎಂದರು.
ಏರಿಯಾ ಮಟ್ಟದ ಸಭೆ ನಡೆಯುವುದರಿಂದ ತಳ ಮಟ್ಟದಲ್ಲಿ ಯೋಜನೆ ರೂಪಿಸಲು ಸಹಕಾರಿಯಾಗಲಿದೆ. ಜನರಿಗೆ ಅಭಿವೃದ್ಧಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಸಮಾಜದ ಏಳಿಗೆಯಲ್ಲಿ ಅವರೂ ತಮ್ಮ ಕೊಡುಗೆ ನೀಡುತ್ತಾರೆ ಎಂದರು.
ನಾಗರೀಕ ಸಮಿತಿ ಅಧ್ಯಕ್ಷ ನರೇಂದ್ರಕುಮಾರ್ ಮಾತನಾಡಿ, ಈಗಾಗಲೇ ರಾಜ್ಯದ 11 ಮುನಿಸಿಪಲ್ ಕಾರ್ಪೊರೇಷನ್‌ನಲ್ಲಿ ಏರಿಯಾ ಸಭೆ, ವಾರ್ಡ್ ಸಮಿತಿ ರಚನೆಗೆ ನ್ಯಾಯಾಲಯದ ಮೂಲಕ ಚಾಲನೆ ದೊರೆತಿದೆ. ಇದರಿಂದಾಗಿ 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಳಗಾವಿ, ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ವಿಜಯಪುರಯಲ್ಲೂ ಏರಿಯಾ ಸಭೆ- ವಾರ್ಡ್ ಸಮಿತಿ ರಚನೆಯಾಗಿದೆ. ಈ ನಗರದಲ್ಲಿ ವ್ಯವಸ್ಥಿತ ಸಮಿತಿ ಸಿದ್ಧಪಡಿಸುವುದು ನಮ್ಮ ಮುಂದಿನ ಗುರಿ ಎಂದು ಹೇಳಿದರು.
ಯುಎನ್ಐ ಡಿಸಿ ವಿಎನ್ 1755