Thursday, Oct 22 2020 | Time 21:18 Hrs(IST)
 • ಅ 27 ರಂದು ಭಾರತ-ಅಮೆರಿಕ ನಡುವಿನ ಸಚಿವ ಮಟ್ಟದ ಮಾತುಕತೆ:ಪ್ರಾದೇಶಿಕ, ಜಾಗತಿಕ ವಿಷಯಗಳ ಬಗ್ಗೆ ಚರ್ಚೆ
 • ಬಿಹಾರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ; 19 ಲಕ್ಷ ಉದ್ಯೋಗ, ಉಚಿತ ಕೋವಿಡ್‌ ಲಸಿಕೆಯ ಭರವಸೆ
 • ಶ್ರೀನಗರದಲ್ಲಿ ‘ಕಾಶ್ಮೀರ್ ಟೈಮ್ಸ್’ ಕಚೇರಿಗಳಿಗೆ ಮೊಹರು: ಎಡಿಟರ್ಸ್‍ ಗಿಲ್ಡ್ ಖಂಡನೆ
 • ಭಾರತದ ಈ ಕ್ರಮಗಳು ಚೀನಾ ದೇಶವನ್ನು ನಡುಗುವಂತೆ ಮಾಡಿವೆ: ಜೆ ಪಿ ನಡ್ಡಾ
 • ಅ 24ರಂದು ಪ್ರಧಾನಿಯಿಂದ ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ
 • ಪ್ರಾದೇಶಿಕ ಭಾಷೆಗಳಲ್ಲಿ ಜೆ ಇ ಇ ಮುಖ್ಯ ಪರೀಕ್ಷೆ: ರಮೇಶ್ ಪೋಖ್ರಿಯಾಲ್
 • ಪದವಿಪೂರ್ವ ಪಠ್ಯ ಶೇ 30 ರಷ್ಟು ಕಡಿತ
 • ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
 • ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ: ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು… !!!
 • ಬಿಹಾರಿಗಳ ಆತ್ಮಗೌರವ ಮಾರಾಟಕ್ಕಿಲ್ಲ , ತೇಜಸ್ವಿ ಯಾದವ್ ವಾಗ್ದಾಳಿ
 • ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
Karnataka Share

ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸನ್ಮಾನ : ವಿಷನ್ ಅಕಾಡೆಮಿಯಲ್ಲಿ ಕಲ್ಯಾಣ, ಕರ್ನಾಟಕ ಉತ್ತರ ಕರ್ನಾಟಕದಿಂದ ಉತ್ತಮ ಸಾಧನೆ

ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸನ್ಮಾನ : ವಿಷನ್ ಅಕಾಡೆಮಿಯಲ್ಲಿ ಕಲ್ಯಾಣ, ಕರ್ನಾಟಕ ಉತ್ತರ ಕರ್ನಾಟಕದಿಂದ ಉತ್ತಮ ಸಾಧನೆ
ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸನ್ಮಾನ : ವಿಷನ್ ಅಕಾಡೆಮಿಯಲ್ಲಿ ಕಲ್ಯಾಣ, ಕರ್ನಾಟಕ ಉತ್ತರ ಕರ್ನಾಟಕದಿಂದ ಉತ್ತಮ ಸಾಧನೆ

ಬೆಂಗಳೂರು, ಅ 17 [ಯುಎನ್ಐ] ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮೀಣ ಭಾಗದ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಉತ್ತರ, ಕಲ್ಯಾಣ ಕರ್ನಾಟಕದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿಷನ್ ಅಕಾಡೆಯಿಂದ ಸನ್ಮಾನಿಸಲಾಯಿತು.ಆಲ್ ಇಂಡಿಯಾ ಮಟ್ಟದ ಓಬಿಸಿ 47 ರ್ಯಾಂಕ್ ಪಡೆದ ಆಕಾಶ್ ಬಿ.ಜಿ ಕರ್ನಾಟಕದ ಜಮಖಂಡಿ ಬಾಗಲಕೋಟೆ ಡಿಸ್ಟಿಕ್ ವಿದ್ಯಾರ್ಥಿಗೆಸ ವಿಷನ್ ಅಕಾಡೆಮಿ ಅಧ್ಯಕ್ಷ ರಾಮಮೋಹನ ರೆಡ್ಡಿ, ಪ್ರಾಂಶುಪಾಲ ಬ್ರಹ್ಮಯ್ಯ, ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀ ರೆಡ್ಡಿ ಸನ್ಮಾನಿಸಿ ಗೌರವಿಸಿದರು.ಈ ಬಾರಿ ಒಟ್ಟು 1400 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 650ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಪ್ರತಿವರ್ಷ ಸರಾಸರಿ 650 ಮಂದಿ ವೈದ್ಯಕೀಯ ಸೀಟ್ ಪಡೆಯುತ್ತಾರೆ. ಈ ಬಾರಿಯೂ ಅದೇ ಪರಂಪರೆ ಮುಂದುವರೆದಿದೆ.ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ ಮೈಸೂರಿನ ತ್ರಿವಳಿಗಳು ಸಹ ವೈದ್ಯಕೀಯ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದಾರೆ. ಮೈಸೂರಿನ ಮಧುವನ ಬಡಾವಣೆಯ ಶ್ರೀರಾಮಪುರದ ಟಿ.ಬಿ. ವರ್ಚಸ್ವಿ 564, ನಿತಿನ್ ಕೆ ಗೌಡ 510 ಮತ್ತು ಟಿ.ಬಿ. ಯಶಸ್ವಿನಿ 489 ಅಂಕಗಳನ್ನು ಪಡೆದಿದ್ದು, ಇವರನ್ನು ಸಹ ಇದೇ ರೀತಿ ಸನ್ಮಾನಿಸಲಾಯಿತು.ನಿರಂತರ ಪ್ರಯತ್ನ, ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ ಮುಕ್ತ ಕಂಠದಿಂದ ಶ್ಲಾಘಿಸಿತು. ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಅಮಿತೋತ್ಸಾಹದಿಂದ ಪಾಲ್ಗೊಂಡು ಉತ್ತಮ ಫಲಿತಾಂಶವನ್ನು ಸಂಭ್ರಮಿಸಿದರು.ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಒಟ್ಟಾರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇವರನ್ನು ಉತ್ತಮ ರೀತಿಯಲ್ಲಿ ತರಬೇತುಗೊಳಿಸಲಾಗಿದೆ.ವಿಷನ್ ಅಕಾಡೆಮಿ ಅಧ್ಯಕ್ಷ ರಾಮಮೋಹನ ರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಂಸ್ಥೆಯಾಗಿದ್ದು, ಬೆಂಗಳೂರಿನ ಬಾಣಸವಾಡಿ, ಗಂಡು ಮಕ್ಕಳಿಗೆ ಬಿಬಿಎಸ್. ಹೆಣ್ಣು ಮಕ್ಕಳಿಗಾಗಿ ಅಣಗಲಪುರ ಕ್ಯಾಂಪಸ್ ಇದೆ. ಹೊಸೂರು, ಬಳ್ಳಾರಿ, ಗುಲ್ಬರ್ಗಾದಲ್ಲಿಯೂ ನಮ್ಮ ಶಾಖೆಗಳಿವೆ. ವಿದ್ಯಾರ್ಥಿಗಳ ಅಗತ್ಯತೆಗಳನ್ನು ನೋಡಿಕೊಂಡು ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಕೌನ್ಸಲರ್ ಗಳನ್ನು ಸಹ ನೇಮಿಸಿರುವುದು ನಮ್ಮ ಸಂಸ್ಥೆಯ ಹೆಗ್ಗಳಿಕೆ ಎಂದು ಹೇಳಿದರು.ನಮ್ಮ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಎಲ್ಲಾ ಜಿಲ್ಲೆಗಳಿಂದ ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ನಮ್ಮಲ್ಲಿ ಕಲಿತ 650 ಮಂದಿ ವೈದ್ಯರಾಗಲು ಸಿದ್ಧರಾಗಿದ್ದಾರೆ ಎನ್ನುವುದು ನಿಜಕ್ಕೂ ಶ್ಲಾಘನೀಯ. ವಿಷನ್ ಅಕಾಡೆಮಿ ಮತ್ತಷ್ಟು ವೈದ್ಯರನ್ನು ಸಜ್ಜುಗೊಳಿಸಲಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿರುವ ವೈದ್ಯರ ಕೊರತೆ ಖಂಡಿತ ನಿವಾರಣೆಯಾಗುತ್ತದೆ. ಅದಕ್ಕೆ ವಿಷನ್ ಅಕಾಡೆಮಿ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ' ದೇಶದ ಆರೋಗ್ಯ ಸೇವೆ ಬಲವರ್ಧನೆಗೆ ನಮ್ಮ ಸಂಸ್ಥೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.ವಿಷನ್ ಮೆಡಿಕಲ್ ಅಕಾಡೆಮಿ 2015ರಲ್ಲಿ ಸ್ಥಾಪನೆಯಾಗಿದ್ದು ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯದ ವಿವಿಧ ವೈದ್ಯ ಕಾಲೇಜುಗಳಲ್ಲಿ 3000ಕ್ಕೂ ಹೆಚ್ಚು ಮಂದಿ ಕಲಿಯುತ್ತಿದ್ದಾರೆ. ವಿಷನ್ ಶಿಕ್ಷಣ ಸಂಸ್ಥೆಗಳ ಸಮೂಹ ಬಿ.ಕಾಂ, ಬಿಬಿಎ, ಬಿಎ, ಪದವಿ, ಮತ್ತು ಸಿಎ ಸಿಪಿಟಿ ಕೋರ್ಸ್‍ಗಳನ್ನು ಸಹ ಆಯೋಜಿಸುತ್ತಿದೆ ಎಂದರುಪ್ರಾಂಶುಪಾಲ ಬ್ರಹ್ಮಯ್ಯ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಉದ್ಯೋಗ ಮಾರ್ಗದರ್ಶನ, ಯೋಗ ತರಬೇತಿ ಸಹ ನೀಡಲಾಗುತ್ತಿದೆ. ಸುಸಜ್ಜಿತ ವಸತಿ ಹಾಗೂ ಪ್ರಯೋಗಾಲಯ ಸೌಲಭ್ಯವನ್ನು ವಿಷನ್ ಅಕಾಡೆಮಿ ಹೊಂದಿದೆ. ವಿಷನ್ ಪಿಯು ಕಾಲೇಜ್ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಇ ಕೋರ್ಸ್‍ಗಳು ಸಹ ಇವೆ. ಪಿಯು ಕಾಮರ್ಸ್‍ನಲ್ಲಿ ಸಿಸಿಬಿಎ, ಎಂಇಬಿಎ, ಎಚ್‍ಇಪಿಎಸ್, ಪಿಯು ಸಿ ಮತ್ತು ಸಿಎ-ಸಿಪಿಟಿ, ಪಿಯುಸಿ ಮತ್ತು ಐಎಎಸ್ ಫೌಂಡೇಷನ್ ಕೋರ್ಸ್‍ಗಳು ಸಹ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಹೇಳಿದರು.ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಲಕ್ಷ್ಮೀ ರೆಡ್ಡಿ ಮಾತನಾಡಿ, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಶ್ರೇಷ್ಠ ಕಲಿಕೆಯ ಅನುಭವ ಒದಗಿಸಬೇಕೆನ್ನುವುದು ನಮ್ಮ ಗುರಿ. ವರ್ಷದಿಂದ ವರ್ಷಕ್ಕೆ ಉತ್ತಮಗೊಳ್ಳುತ್ತಿರುವ ಫಲಿತಾಂಶಗಳು ಇದಕ್ಕೆ ನಿದರ್ಶನವಾಗಿವೆ. ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕ ಆಸಕ್ತಿಯ ಸುದೀರ್ಘ ಬಾಂಧವ್ಯ ಬೆಳೆಸಿಕೊಳ್ಳುವುದು ನಮ್ಮ ಯಶಸ್ಸಿನ ಗುಟ್ಟಾಗಿದೆ. ಹಲವು ವರ್ಷಗಳಿಂದ ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ವಿಶೇಷ ಕೋಚಿಂಗ್‍ಗೆ ಸಂಸ್ಥೆ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.ಯುಎನ್ಐ ವಿಎನ್ 1501