Friday, May 29 2020 | Time 11:00 Hrs(IST)
 • ರೆಬೆಲ್‌ ಸ್ಟಾರ್ ಅಂಬರೀಶ್ ಜನ್ಮದಿನ: ಮುಖ್ಯಮಂತ್ರಿ, ಗಣ್ಯರಿಂದ ಗೌರವ ನಮನ
 • 58 ಕಾರ್ಮಿಕರ ಜೀವ ಉಳಿಸಿದ ಸಾಮಾಜಿಕ ಜಾಲತಾಣ
 • ಡ್ರಗ್ಸ್ ಮಾರಾಟ ದಂಧೆ: ನೈಜೀರಿಯಾ ಪ್ರಜೆಯ ಬಂಧನವನ್ನು ಎತ್ತಿಹಿಡಿದ ಹೈಕೋರ್ಟ್‌
 • ವಂದೇ ಭಾರತ್ ಮಿಷನ್: 45 ಸಾವಿರ ಭಾರತೀಯರು ತವರಿಗೆ
 • ಮೆಕ್ಸಿಕೋದಲ್ಲಿ ಕೊರೊನಾ ಸೋಂಕಿಗೆ ಮತ್ತೆ 447 ಬಲಿ, ಒಟ್ಟು 9,044 ಸಾವು
 • ಚಿಲಿಯಲ್ಲಿ 87 ಸಾವಿರ ಕೊರೊನಾ ಸೋಂಕು ಪ್ರಕರಣ
 • ರಾಜ್ಯಸಭಾ ಸದಸ್ಯ ವಿರೇಂದ್ರಕುಮಾರ್ ಇನ್ನಿಲ್ಲ
 • ಸೊಲ್ಲಾಪುರ; ಕೃಷಿ ಭೂಮಿಯಲ್ಲಿ ಸುಮಾರು ೭೦೦ ಪುರಾತನ ನಾಣ್ಯಗಳ ಪತ್ತೆ
 • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
 • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
 • ಲಾಕ್ ಡೌನ್; ರಾಜ್ಯಗಳ ಅಭಿಪ್ರಾಯ ಕೇಳಿದ ಗೃಹ ಸಚಿವ ಅಮಿತ್ ಶಾ
Entertainment Share

ನಾನೂ ದೊಡ್ಡ ಹೀರೋ ಆಗುತ್ತೇನೆ : ತಾರಾ ಪುತ್ರ, ಬಾಲ ನಟ ಕೃಷ್ಣ

ನಾನೂ ದೊಡ್ಡ ಹೀರೋ ಆಗುತ್ತೇನೆ : ತಾರಾ ಪುತ್ರ, ಬಾಲ ನಟ ಕೃಷ್ಣ
ನಾನೂ ದೊಡ್ಡ ಹೀರೋ ಆಗುತ್ತೇನೆ : ತಾರಾ ಪುತ್ರ, ಬಾಲ ನಟ ಕೃಷ್ಣ

(ಸಂದರ್ಶನ:ಸಂಧ್ಯಾ ಸೊರಬ)

ಬೆಂಗಳೂರು, ಸೆ 20 (ಯುಎನ್ಐ) 'ಅಮ್ಮನೇ ನನಗೆ ಸ್ಫೂರ್ತಿ, ನಾನು ಅಮ್ಮನ ದೊಡ್ಡ ಫ್ಯಾನ್, ದೊಡ್ಡವನಾಗಿ ನಾನು ಅಮ್ಮನಂತೆ ಸ್ಟಾರ್ ಆಗ್ತಿನಿ. ನಾನು ಒಂದು ದಿನ ದೊಡ್ಡ ಹೀರೋ ಆಗುತ್ತೇನೆ' ಇದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ, ಮೇಲ್ಮನೆ ಮಾಜಿ ಸದಸ್ಯೆ ತಾರಾ ಅನುರಾಧ, ಛಾಯಾಗ್ರಾಹಕ ಎಚ್.ಸಿ ವೇಣು ದಂಪತಿ ಪುತ್ರ 'ಕೃಷ್ಣ'ನ ಮುದ್ದಾದ ಮಾತುಗಳು.

'ಶಿವಾರ್ಜುನ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆದಿರುವ ಕೃಷ್ಣ, ತಾಯಿ ಜೊತೆ ತೆರೆಹಂಚಿಕೊಂಡಿದ್ದಾನೆ. ಚಿತ್ರದಲ್ಲಿ ತಾಯಿ-ಮಗನ ಪಾತ್ರವನ್ನು ಮಾಡುತ್ತಿರುವ ಈ ರಿಯಲ್ ಅಮ್ಮನ ಒಟ್ಟಿಗೆ ನಟಿಸಿದ್ದಕ್ಕೆ ಸಖತ್ ಖುಷಿಯಾಗಿದ್ದಾರೆ. ಶಿವನಂದಿ ಪಾತ್ರಕ್ಕೆ ಬಣ್ಣಹಚ್ಚಿರುವ ಕೃಷ್ಣ, ಡಬ್ಬಿಂಗ್ ಕೂಡ ಮಾಡಿ ಸೈ ಅನಿಸಿಕೊಂಡಿದ್ದಾನೆ. ಪಕ್ಕಾ ಕಮರ್ಷಿಯಲ್ ಆಗಿರುವ ಚಿತ್ರಕ್ಕೆ ಶಿವನಂದಿ ಪ್ರಮುಖ ಪಾತ್ರವಾಗಿದ್ದು, ಚಿರಂಜೀವಿ ಸರ್ಜಾ ಜೊತೆಗೆ ಶಿವನಂದಿ ಒಳ್ಳೆಯ ಕಾಂಬಿನೇಷನ್ ಆಗಿದೆ.ಮನೆಯ ಸಮೀಪವೇ ಇರುವ ಇನ್ನೀಸ್ ಫ್ರೀ ಹೋಮ್ ಸ್ಕೂಲ್ ನಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಕೃಷ್ಣನಿಗೆ ಈಗ ಪರೀಕ್ಷಾ ಸಮಯ. ಓದಿನೊಂದಿಗೆ ಪರೀಕ್ಷೆಯಲ್ಲಿಯೂ ಈ ಹುಡುಗ ಚೆನ್ನಾಗಿ ಬರೆದಿದ್ದಾನಂತೆ. ಪರೀಕ್ಷೆ, ಸಿನಿಮಾ, ಪೇಂಟಿಂಗ್ ಎಂದೆಲ್ಲಾ ಬಿಝಿಯಾಗಿರುವ ಕೃಷ್ಣ ಸಿನಿಮಾ ಅಭಿನಯದ ಅನುಭವವನ್ನು ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮುಗ್ಧ ಮಾತುಗಳಲ್ಲಿ ವಿವರಿಸಿದ್ದು ಹೀಗೆ

* ಚಿತ್ರರಂಗ ಪ್ರವೇಶಿಸಲು ಯಾರು ಸ್ಫೂರ್ತಿ ?

ನಾನು ಅಮ್ಮನ ಚಿತ್ರಗಳನ್ನು ನೋಡುತ್ತಲೇ ಬರುತ್ತಿದ್ದೇನೆ. ಅವರ ಜೊತೆ ಚಿತ್ರೀಕರಣಕ್ಕೆ ಆಗಾಗ ಹೋಗುತ್ತಿರುತ್ತೇನೆ.ಅಮ್ಮನಂತೆ ನಾನು ನಟಿಸಬೇಕು ಎಂದು ಆಸೆಯಾಗುತ್ತಿತ್ತು.

* ನಿನ್ನ ನೆಚ್ಚಿನ ನಾಯಕ ನಟ, ನಟಿ ಯಾರು ?

ಅಮ್ಮನೇ ನನ್ನ ಮೆಚ್ಚಿನ ನಟಿ, ನೆಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್

* ದೊಡ್ಡವನಾದ ಮೇಲೆ ಏನಾಗಬೇಕು ಎಂದು ಬಯಸುತ್ತೀಯಾ?

ನಾನು ಹೀರೋ ಆಗಬೇಕು. ಧೃವಸರ್ಜಾ ತರಹ ಫೈಟ್ ಮಾಡಬೇಕು.

* ಶಾಲೆಯಲ್ಲಿ ನಿನ್ನ ಸ್ನೇಹಿತರು ನಿನ್ನ ನಟನೆ ಬಗ್ಗೆ ಏನು ಹೇಳುತ್ತಾರೆ?

ನಾನು ನಟನೆ ಮಾಡುತ್ತಿರುವುದನ್ನು ಶಾಲೆಯ ಶಿಕ್ಷಕಿಗಾಗಲೀ, ಫ್ರೆಂಡ್ ಗಾಗಲೀ ಹೇಳಿರಲಿಲ್ಲ. ನನ್ನ ಫ್ರೆಂಡ್ ಒಬ್ಬ ಪೇಪರ್ ನಲ್ಲಿ ಬಂದಿದ್ದ ನನ್ನ ಫೋಟೋವನ್ನು ತಂದು ನನಗೆ ತೋರಿಸಿ ಖುಷಿಪಟ್ಟ.

* ಚಿತ್ರೀಕರಣದ ಸೆಟ್ ನಲ್ಲಿನ ಅನುಭವ ಹೇಳು?

ಅಮ್ಮನ ಜೊತೆಯಲ್ಲಿಯೇ ನಟನೆ ಮಾಡಿದ್ದು ಬಹಳ ಖುಷಿ ಕೊಟ್ಟಿದೆ. ಅಪ್ಪನೇ ಚಿತ್ರೀಕರಣ ಮಾಡಿದ್ದಾರೆ. ಸೆಟ್ ನಲ್ಲಿ ನಾನು ಅಮ್ಮ,ಅಪ್ಪ ಜೊತೆಗೆ ಇರುತ್ತಿದ್ದೆ. ಇನ್ನೂ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಂಡಿಲ್ಲ.

* ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತು ಡೈಲಾಗ್ ಹೇಳುವಾಗ ಹೇಗಿತ್ತು ?

ಅಪ್ಪನೇ ಕ್ಯಾಮೆರಾ ಹಿಡಿದಿದ್ದರಿಂದ ತೊಂದರೆಯೇನು ಆಗಲಿಲ್ಲ. ಡೈಲಾಗ್ ಹೇಳುವಾಗ ಸ್ವಲ್ಪ ಕಷ್ಟ ಆಗುತ್ತಿತ್ತು. ಆದರೆ ಅದೆ ಖುಷಿ ಕೊಡುತ್ತಿತ್ತು. ತುಂಬ ಸಂತೋಷವಾಗಿಯೇ ನಟಿಸಿದ್ದೇನೆ.

* ಓದಿಗೆ ತೊಂದರೆ ಆಗಲಿಲ್ಲವೇ?

ನಾನು ರಜೆ ದಿನಗಳಲ್ಲಿಯೇ ಹೆಚ್ಚು ನಟಿಸಿದ್ದೇನೆ. ಶಾಲೆಗಾಗಲೀ, ನನ್ನ ಓದಿಗಾಗಲಿ ಯಾವುದೇ ತೊಂದರೆಯಾಗಲಿಲ್ಲ.

ಈ ಚಿತ್ರದಲ್ಲಿ ತಾರಾ ಖಡಕ್ ತಹಶೀಲ್ದಾರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲು ಮಗ ನಟಿಸುತ್ತಾನೆ ಎನ್ನುವ ಬಗ್ಗೆ ನಮಗೂ ವಿಶ್ವಾಸ ಇರಲಿಲ್ಲ. ನಿರ್ದೇಶಕ ಶಿವತೇಜಸ್ ಅವರು ಶಿವನಂದಿ ಪಾತ್ರಕ್ಕೆ ಬಾಲ ನಟನನ್ನು ಹುಡುಕುತ್ತಿದ್ದರು. ನನ್ನ ಮಗನನ್ನು ನೋಡಿ ಇವನಿಂದಲೇ ಪಾತ್ರ ಮಾಡಿಸೋಣ ಎಂದಾಗ ನಾನು ಮೊದಲು ಒಪ್ಪಿರಲಿಲ್ಲ. ಆದರೆ ಅವನ ಸ್ಪಷ್ಟ ಕನ್ನಡ ಮಾತುಗಳು ಅವನಲ್ಲಿದ್ದ ಆತ್ಮವಿಶ್ವಾಸ ನೋಡಿ ನಮಗೆ ಅಚ್ಚರಿಯಾಯಿತು ಎಂದು ತಾರಾ ಹೇಳಿದರು.

ಯುಎನ್‍ಐ ಯುಎಲ್ ಎಎಚ್ 1218