Tuesday, Jun 25 2019 | Time 13:19 Hrs(IST)
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
Karnataka Share

ನಾನಿನ್ನು ಬದುಕಿದ್ದೇನೆ, ಹೂಡಿಕೆದಾರರ ಹಣ ವಾಪಸ್ ನೀಡ್ತೇನೆ : ಮನ್ಸೂರ್ ಖಾನ್ ಹೊಸ ಆಡಿಯೋ

ನಾನಿನ್ನು ಬದುಕಿದ್ದೇನೆ, ಹೂಡಿಕೆದಾರರ ಹಣ ವಾಪಸ್ ನೀಡ್ತೇನೆ : ಮನ್ಸೂರ್ ಖಾನ್ ಹೊಸ ಆಡಿಯೋ
ನಾನಿನ್ನು ಬದುಕಿದ್ದೇನೆ, ಹೂಡಿಕೆದಾರರ ಹಣ ವಾಪಸ್ ನೀಡ್ತೇನೆ : ಮನ್ಸೂರ್ ಖಾನ್ ಹೊಸ ಆಡಿಯೋ

ಬೆಂಗಳೂರು , ಜೂ 11(ಯುಎನ್ಐ) ಐಎಂಎ ಜ್ಯುವೆಲ್ಸ್‌ ಮಾಲೀಕ ಮನ್ಸೂರ್ ಖಾನ್ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ತಿರುವು ಸಿಕ್ಕಿದೆ ತಾನು ಬೆಂಗಳೂರಲ್ಲಿಯೇ ಇದ್ದು, ಆತ್ಮಹತ್ಯೆ ಮಾಡಿಕೊಳ್ಳದೆ ಜೀವಂತ ಇರುವುದಾಗಿ ಹೇಳಿಕೆ ನೀಡಿ ಹೊಸ ಧ್ವನಿ ಸುರಳಿ ಬಿಡುಗಡೆ ಮಾಡಿದ್ದಾನೆ.ಅಜ್ಞಾತ ಸ್ಥಳದಲ್ಲಿದ್ದುಕೊಂಡು 1.54 ನಿಮಿಷದ ಆಡಿಯೊ ಬಿಡುಗಡೆ ಮಾಡಿರುವ ಮನ್ಸೂರ್ ಖಾನ್, ನನ್ನ ಹಿಂದೆ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ, ನಾನು ಸಾಯುವುದಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಹಾಗೂ ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಧ್ವನಿ ಸುರಳಿಯಲ್ಲಿ ಆರೋಪಿಸಿದ್ದಾರೆ.'ನಾನು ತೆಗೆದುಕೊಂಡಿರುವ ನ್ಯಾಯಯುತ ಹಣವನ್ನು ಹೂಡಿಕೆದಾರರಿಗೆ ವಾಪಸ್ ಸಿಗಲಿದೆ. ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ಹಾಗೂ ರಾಹೀಲ್ ತಮ್ಮನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸುತ್ತಿದ್ದಾರೆ. ಹೂಡಿಕೆ ಮಾಡಲಾಗಿರುವ ಎಲ್ಲ ಹಣವನ್ನು ನಾನು ಆಭರಣ, ವಜ್ರ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾನೆ.ತನ್ನ ವಿರುದ್ಧದ ಮಾಡಿರುವ ಆರೋಪಕ್ಕೆ ದೊಡ್ಡ ದೊಡ್ಡವರ ಸಹಕಾರ ಇದೆ . ರಾಹೀಲ್ ಕೈಯಲ್ಲಿ ನನ್ನ ಎಲ್ಲ ಆಭರಣ ಹಾಗೂ ವಜ್ರ ಕೊಟ್ಟಿದ್ದೇನೆ. ಇಂದು ಸಂಜೆ ಸಮದ್ ಹಾಲ್ ನಲ್ಲಿ ಸಭೆ ಕರೆದಿದ್ದೇನೆ. ರಾಹೀಲ್ ಸೇರಿ ಎಲ್ಲರ ಜೊತೆ ಮಾತನಾಡಿ,15 ನೆ ತಾರೀಕಿನೊಳಗೆ ಎಲ್ಲರ ಹಣ ವಾಪಸ್ ಮಾಡುತ್ತೇನೆ. ಮೊದಲು ಕಡಿಮೆ ಮೊತ್ತದವರಿಗೆ, ನಂತರ ಮಧ್ಯಮ, ತದನಂತರ ದೊಡ್ಡ ಮೊತ್ತದವರಿಗೆ ಪಾವತಿಸುತ್ತೇನೆ ಎಂದು ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ಹೊಸ ಧ್ವನಿ ಸುರಳಿಯಲ್ಲಿ ಹೇಳಿಕೊಂಡಿದ್ದಾನೆ.

ನಿನ್ನೆ ಬಿಡುಗಡೆ ಮಾಡಿದ ಆಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿರುವಂತೆ ತಾವು ಸಾವನ್ನಪ್ಪಿಲ್ಲ.ಬೆಂಗಳೂರಿನಲ್ಲಿ ಕುಟುಂಬ ಸಮೇತ ಸುರಕ್ಷಿತವಾಗಿದ್ದು,ಹೂಡಿಕೆದಾರರ ಹಣ ಸುರಕ್ಷಿತವಾಗಿದೆ.ಸುಳ್ಳು ಮಾಹಿತಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಗ್ರಾಹಕರಿಗೆ ಮನ್ಸೂರ್ ಮನವಿ ಮಾಡಿದ್ದಾನೆ.

ಆದರೆ ಇಂದು ಬಿಡುಗಡೆಯಾಗಿರುವ ಆಡಿಯೋ ಐಎಂಎ ಮಾಲೀಕ ಮನ್ಸೂರ್ ಖಾನ್ ಅವನದೆಯೇ ಅಥವಾ ಬೇರೆಯವರದ್ದಾ ಎಂಬುದು ತನಿಖೆಯಿಂದಲೇ ಧೃಡಪಡಿಸಬೇಕಿದೆ.

ಯುಎನ್ಐ ಎಸ್ಎಂಆರ್ ವಿಎನ್ 2045