Wednesday, Jun 3 2020 | Time 09:30 Hrs(IST)
  • ನಿಸರ್ಗಚಂಡಮಾರುತ ಬೀತಿ: ಮುಂಬೈನಗರದಲ್ಲಿ ನಿಷೇಧಾಜ್ಞೆ
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
Entertainment Share

ನಿರ್ದೇಶಕರ ಸ್ವಾನುಭವದ ಗಾಥೆ ‘ರಾಂಚಿ’ : ಬಾಲಿವುಡ್ ಆಫರ್ ಗಿಟ್ಟಿಸಿಕೊಂಡ ಶಶಿಕಾಂತ್ ಗಟ್ಟಿ

ಬೆಂಗಳೂರು, ಸೆ 20 (ಯುಎನ್ಐ) ಜಾರ್ಖಂಡ್ ರಾಜಧಾನಿ ರಾಂಚಿಯ ಐಪಿಎಸ್ ಅಧಿಕಾರಿ ಪ್ರವೀಣ್ ಕುಮಾರ್ ಸಾಹಸಗಾಥೆ ಆಧಾರಿತ ‘ರಾಂಚಿ’ ಚಿತ್ರದ ತುಣುಕು ಬಿಡುಗಡೆಯಾಗಿದೆ.

ಟೀಸರ್ ಗೆ ಚಾಲನೆ ನೀಡಿದ ಬಾಲಿವುಡ್ ನಿರ್ಮಾಪಕ ರೂಪೇಶ್ ಓಝಾ, ಶುಭ ಕೋರುವುದರ ಜತೆಗೆ, ತಂದೆಯವರ ನೆನಪಿನಲ್ಲಿ ಆರಂಭಿಸಿರುವ ಎಸ್ ಕೆ ಓಝಾ ಪಿಕ್ಚರ್ಸ್ ಅಡಿಯಲ್ಲಿ ರಾಂಚಿ ಚಿತ್ರವನ್ನು ಹಿಂದಿಯಲ್ಲಿ ತರಲು ಸಮ್ಮತಿಸಿದ್ದು, ಶಶಿಕಾಂತ್ ಗಟ್ಟಿಯವರೇ ನಿರ್ದೇಶನದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

“ರಾಂಚಿಯ ಒಂದು ಗ್ಯಾಂಗ್ ಇಡೀ ದೇಶದ ಸಿನಿಮಾ ನಿರ್ದೇಶಕರು, ನಿರ್ಮಾಪಕರಿಂದ ಡಾಕ್ಯುಮೆಂಟ್‌ ಕೇಳಲು ಅಲ್ಲಿಗೆ ಕರೆಸಿಕೊಳ್ಳುತ್ತಿದ್ದರು. ಕನ್ನಡದ ನಿರ್ಮಾಪಕಿಯೊಬ್ಬರು ಈ ಮೋಸಕ್ಕೆ ಒಳಗಾಗಿದ್ದು, ಇದನ್ನೂ ಸಹ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಕುಕೃತ್ಯ ಮಾಡುತ್ತಿದ್ದ ಗ್ಯಾಂಗ್ ಹಿಡಿಯಲು 8 ವರ್ಷ ಬೇಕಾಯಿತು. ಒಂದು ದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಹಸ್ರಪದಿ ಅಡ್ಡಬಂದಿತು. ಆ ಸಹಸ್ರಪದಿಯನ್ನು ತಪ್ಪಿಸಿಕೊಂಡು ಹೋದೆ. ಆದರೆ ಅವರ ನಂತರದಲ್ಲಿ ಬಂದ ವಾಹನಗಳು ಆ ಸಹಸ್ರಪದಿಯನ್ನು ಮೆಟ್ಟಿ ಅಪ್ಪಚ್ಚಿ ಮಾಡಿತ್ತು. ಆಗ ಅವಕಾಶ ಬಂದಾಗ ಮೀನ ಮೇಷ ಎಣಿಸದೆ ಪ್ರತಿಕ್ರಿಯಿಸಬೇಕೆಂಬ ಅರಿವಾಯಿತು. ರಾಂಚಿಯ ಎಸ್‌ಎಸ್‌ಬಿ ಐಎಎಸ್ ಆಫೀಸರ್ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಮಾತನಾಡಿದೆ. ಅವರಿಗೆ ಒಂದು ಸ್ಕ್ರಿಫ್ಟ್ ಬರೆದುಕೊಟ್ಟೆ. ತದನಂತರದಲ್ಲಿ ಅವರು ಆ ಕುಕೃತ್ಯ ಮಾಡಿದ್ದ ಗ್ಯಾಂಗ್‌ನ್ನು ಒಂದು ವರ್ಷದಲ್ಲಿ ಹಿಡಿದರು” ಎಂದು ನಿರ್ದೇಶಕರು ವಿವರಿಸಿದ್ದಾರೆ.
ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ನಟಿಸಿದ್ದ ನಟ ಪ್ರಭು ಮುಂಡ್ಕುರ್ ಈ ಚಿತ್ರದಲ್ಲಿ ಶಶಿಕಾಂತ್ ಅವರ ನಿಜ ಜೀವನದ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಕಥಾವಸ್ತು ನೈಜವಾಗಿದ್ದು, ಅದ್ಭುತ, ವಿಶೇಷವಾಗಿರುವ ಕಾರಣ ಬೇರೆಯವರ ಪಾಲಾಗಬಾರದು ಎಂದು ಈ ಚಿತ್ರ ಒಪ್ಪಿಕೊಂಡೆ" ಎಂದು ಪ್ರಭು ಹೇಳಿದ್ದಾರೆ.
ಖ್ಯಾತ ಹಿರಿಯ ನಟ ಸುರೇಶ್ ಹೆಬ್ಳೀಕರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೋಸ ಹೋದ ಕರ್ನಾಟಕದ ನಿರ್ಮಾಪಕಿಯ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ಮಾಪಕರಾದ ಅರುಣ್ ಕುಮಾರ್ ಮತ್ತು ಆನಂದ್ ತಿಳಿಸಿದ್ದಾರೆ.
ನಟಿ ದಿವ್ಯಾ ಸಹಾಯಕ ನಿರ್ದೇಶಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭು, ವಿನೋದ್ ರಾಜ್ ಕ್ಯಾಮೆರಾ ಕೈಚಳಕ ಈ ಚಿತ್ರದಲ್ಲಿರಲಿದೆ. ಆರತಿ ನಾಯಕ್, ಸತ್ಯ, ಜಾನ್, ಮಣಿಕಂಠನ್, ಲಕ್ಷ್ಮಣ್ ಗೌಡ್ರು, ಉದಯ್, ಉಷಾ ಭಂಡಾರಿ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಬಾಲಿವುಡ್‌ನ ಸಂದೀಪ್ ಛೌಟಾ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
ನೈಜ ಘಟನೆ ನಡೆದ ರಾಂಚಿಯ ಕೆಲವು ಸ್ಥಳಗಳಲ್ಲಿ ಈ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿದ್ದು, ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.
ಯುಎನ್ಐ ಎಸ್ಎ ಕೆಎಸ್ ವಿ 2010
More News

ತಮ್ಮನಿಗೆ ಲಾಲಿ ಹಾಡಿದ ಐರಾ: ವಿಡೀಯೋ ವೈರಲ್

02 Jun 2020 | 2:59 PM

 Sharesee more..
ಲಾಕ್ ಡೌನ್ ಅವಧಿಯಲ್ಲಿ ವಿ ಮನೋಹರ್ ಅವರ ‘ಚಾಟ್ ಮಸಾಲ’

ಲಾಕ್ ಡೌನ್ ಅವಧಿಯಲ್ಲಿ ವಿ ಮನೋಹರ್ ಅವರ ‘ಚಾಟ್ ಮಸಾಲ’

01 Jun 2020 | 4:51 PM

ಬೆಂಗಳೂರು, ಜೂ 01 (ಯುಎನ್‍ಐ) ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕಲಾವಿದರು, ತಂತ್ರಜ್ಞರು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡು ಎಲ್ಲಾ ಭಾಷೆಯ ಚಿತ್ರರಂಗದ ಅನೇಕರು ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಬಿಟ್ಟರು.

 Sharesee more..
78 ವರ್ಷಗಳಲ್ಲಿ ಕಲಿಯದನ್ನು, ಲಾಕ್ ಡೌನ್ ಸಮಯದಲ್ಲಿ ಕಲಿತೆ: ಅಮಿತಾಬ್

78 ವರ್ಷಗಳಲ್ಲಿ ಕಲಿಯದನ್ನು, ಲಾಕ್ ಡೌನ್ ಸಮಯದಲ್ಲಿ ಕಲಿತೆ: ಅಮಿತಾಬ್

31 May 2020 | 5:47 PM

ಮುಂಬೈ, ಮೇ 31 (ಯುಎನ್ಐ)- ಲಾಕ್ ಡೌನ್ ಸಮಯದಲ್ಲಿ ಕಲಿತಷ್ಟು 78 ವರ್ಷಗಳಲ್ಲಿ ಕಲಿಯಲು ಸಾಧ್ಯವಾಗಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

 Sharesee more..