Wednesday, Oct 28 2020 | Time 16:19 Hrs(IST)
 • ರಾಜ್ಯದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಕೆ
 • ಕಾಶ್ಮೀರದಲ್ಲಿ 370ನೇವಿಧಿ ರದ್ದಾದ ಮೇಲೆ ಏನು ಬದಲಾಗಿದೆ: ಶಿವಸೇನೆ ಪ್ರಶ್ನೆ
 • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
 • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
 • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
 • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
 • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
 • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
 • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
 • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
 • ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೇಲಿನ ನಿಷೇಧ ವಿಸ್ತರಣೆ
 • ಕಳ್ಳನ ಬಂಧನ: 8 37 ಲಕ್ಷ ಮೌಲ್ಯದ ಚಿನ್ನಾಭರಣ ವಶ
 • ಮತ್ತಿಬ್ಬರು ಐಸಿಸ್ ಶಂಕಿತರು ಎಎನ್ಐ ವಶಕ್ಕೆ
National Share

ನೆರೆ ಪರಿಹಾರ ಕೈಗೊಳ್ಳಲು ಹೆಚ್ಚಿನ ನೆರವು ನೀಡಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಮನವಿ

ನವದೆಹಲಿ, ಸೆ 18 [ಯುಎನ್ಐ] ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಸಂಕಷ್ಟದಲ್ಲಿರುವ ಜನತೆಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಮೂರು ದಿನಗಳ ದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ ಇಂದು ಬೆಳಿಗ್ಗೆ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.
ಸಂಸತ್ ಭವನದಲ್ಲಿ ಸುಮಾರು 15 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಯಡಿಯೂರಪ್ಪ, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಪ್ರವಾಹದಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯಿಂದ ಅಗತ್ಯ ಪ್ರಮಾಣದಲ್ಲಿ ನೆರವು ಬಿಡುಗಡೆ ಮಾಡಬೇಕು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿಧಿ ಕುರಿತ ನಿಯಮಗಳಲ್ಲಿ ಬದಲಾವಣೆ ತಂದು ಸಂಕಷ್ಟದಲ್ಲಿರುವವರಿಗೆ ಹೆಚ್ಚಿನ ನೆರವು ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳು ರಾಜ್ಯದ ಅತ್ಯಂತ ಪ್ರಮುಖ ಯೋಜನೆಗಳಾಗಿವೆ. ಹೀಗಾಗಿ ಇವುಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿದರು.
ಗೋವಾ ರಾಜ್ಯದೊಂದಿಗೆ ವಿವಾದದ ಸ್ವರೂಪದಲ್ಲಿರುವ ಕಳಸಾ-ಬಂಡೂರಿ ನಾಲಾ ಯೋಜನೆಯಲ್ಲಿ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಂತೆ ತನ್ನ ಪಾಲಿನ ನೀರು ಬಳಸಿಕೊಳ್ಳಲು ಕಳಸಾ ಬಂಡೂರಿ ನಾಲಾ ಯೋಜನೆಗೆ ಪರಿಸರ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಅನುಮೋದನೆಗಳನ್ನು ನೀಡಬೇಕು ಎಂದು ಸಹ ಯಡಿಯೂರಪ್ಪ ಮೋದಿ ಅವರನ್ನು ಕೋರಿದರು.

ಇದಲ್ಲದೇ ತಮಿಳುನಾಡಿನ ಜತೆ ವಿವಾದ ಉಂಟಾಗಿರುವ ಕಾವೇರಿ ನದಿ ಪಾತ್ರದ ಮೇಕೆದಾಟು ಯೋಜನೆ ರಾಜ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಕಾವೇರಿ ನ್ಯಾಯಾಧೀಕರಣದಂತೆ ತನ್ನ ಪಾಲಿನ ನೀರು ಬಳಸಿಕೊಳ್ಳಲು ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವ ಮೇಕೆದಾಟು ಯೋಜನೆಗೆ ಎಲ್ಲಾ ರೀತಿಯ ಅನುಮತಿ ಹಾಗೂ ಅನುಮೋದನೆ ನೀಡಿದರೆ, ರಾಜ್ಯಕ್ಕೆ ಮಂಜೂರಾಗಿರುವ ನೀರಿನ ಪ್ರಮಾಣ ಸದ್ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ದೇಶದ ತಾಂತ್ರಿಕ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ನವೆಂಬರ್ 19ರಂದು ಬೆಂಗಳೂರು ಟೆಕ್ ಸಮ್ಮಿಟ್ ನಡೆಯುತ್ತಿದ್ದು, ವರ್ಚುವಲ್ ವೇದಿಕೆ ಮೂಲಕ ಈ ಸಮ್ಮೇಳನ ಉದ್ಘಾಟಿಸುವಂತೆಯೂ ಮೋದಿ ಅವರಿಗೆ ಯಡಿಯೂರಪ್ಪ ಮನವಿ ಮಾಡಿದರು.
ಯುಎನ್ಐ ವಿಎನ್ 1430
More News
ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

28 Oct 2020 | 3:32 PM

ನವದೆಹಲಿ, ಅ 28 (ಯುಎನ್‍ಐ) ದೇಶದ ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 Sharesee more..
ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

27 Oct 2020 | 9:18 PM

ನವದೆಹಲಿ, ಅ 27 (ಯುಎನ್ಐ) ಫೇಸ್ ಬುಕ್ ಕಾರ್ಯಾಚರಣೆಗಳ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರದೇಶಗಳ ಸಾರ್ವಜನಿಕ ನೀತಿಗಳ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಆಂಖಿ ದಾಸ್ ಮಂಗಳವಾರ ಫೇಸ್ ಬುಕ್ ಕಂಪನಿಗೆ ರಾಜಿನಾಮೆ ನೀಡಿದ್ದಾರೆ.

 Sharesee more..
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಪೊಂಪಿಯೊ, ಎಸ್ಪೆರ್

ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಪೊಂಪಿಯೊ, ಎಸ್ಪೆರ್

27 Oct 2020 | 9:06 PM

ನವದೆಹಲಿ, ಅ 27 (ಯುಎನ್‌ಐ) ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಭಾರತದೊಂದಿಗೆ ಸದೃಢ ಸಂಬಂಧವನ್ನು ಬೆಳೆಸುವಲ್ಲಿ ಹಾಗೂ ಪರಸ್ಪರ ಗುರಿ ಮತ್ತು ದೂರದೃಷ್ಟಿಗಳು ಸಕಾರಗೊಳ್ಳಲು ಒಟ್ಟಾಗಿ ಕಾರ್ಯನಿರ್ವಹಿಸುವ ಟ್ರಂಪ್ ಆಡಳಿತದ ನಿರಂತರ ಆಸಕ್ತಿಯ ಬಗ್ಗೆ ವಿವರಿಸಿದ್ದಾರೆ.

 Sharesee more..