Wednesday, Oct 28 2020 | Time 16:35 Hrs(IST)
 • ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ
 • ಕೋವಿಡ್‍-19: 4 39 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ರಾಜ್ಯದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಕೆ
 • ಕಾಶ್ಮೀರದಲ್ಲಿ 370ನೇವಿಧಿ ರದ್ದಾದ ಮೇಲೆ ಏನು ಬದಲಾಗಿದೆ: ಶಿವಸೇನೆ ಪ್ರಶ್ನೆ
 • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
 • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
 • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
 • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
 • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
 • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
 • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
 • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
 • ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೇಲಿನ ನಿಷೇಧ ವಿಸ್ತರಣೆ
Entertainment Share

ನಿರ್ಮಾಪಕನಾಗಲು ವಿಷ್ಣುವರ್ಧನ್ ಕಾರಣ: ನಿರ್ಮಾಪಕ ರೆಹಮಾನ್

ನಿರ್ಮಾಪಕನಾಗಲು ವಿಷ್ಣುವರ್ಧನ್ ಕಾರಣ: ನಿರ್ಮಾಪಕ ರೆಹಮಾನ್
ನಿರ್ಮಾಪಕನಾಗಲು ವಿಷ್ಣುವರ್ಧನ್ ಕಾರಣ: ನಿರ್ಮಾಪಕ ರೆಹಮಾನ್

-ಎಸ್‍ ಆಶಾ ಕಶ್ಯಪ್ಬೆಂಗಳೂರು, ಸೆ 17 (ಯುಎನ್‍ಐ) ಸ್ಯಾಂಡಲ್ ವುಡ್ ಕಂಡ ಮಹಾನ್ ಕಲಾವಿದರ ಪಟ್ಟಿಯಲ್ಲಿ ವಿಷ್ಣುವರ್ಧನ್ ಹೆಸರು ಅಮರ. ಅಭಿನಯದಲ್ಲಿ ಪರಕಾಯ ಪ್ರವೇಶ, ಸರಳ ಸಜ್ಜನಿಕೆಯ ವ್ಯಕ್ತಿತ್ವ,ಸೆಪ್ಟೆಂಬರ್ 18 ಅವರ 70ನೇ ಜನ್ಮದಿನ. ಅಭಿಮಾನಿಗಳು ಒಂದು ತಿಂಗಳಿನಿಂದಲೇ ರಕ್ತದಾನ, ಗಿಡನೆಡುವಿಕೆ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳ ಮೂಲಕ ‘ಸಾಹಸ ಸಿಂಹ’ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ,ಇದೇ ವೇಳೆ ಯುಎನ್‍ಐ ಸುದ್ದಿಸಂಸ್ಥೆ ವಿಷ್ಣುವರ್ಧನ್ ಅವರ ಸೂಪರ್ ಡೂಪರ್ ಚಲನಚಿತ್ರ ‘ಯಜಮಾನ’ ನಿರ್ಮಾಪಕ ರೆಹಮಾನ್ ಅವರನ್ನು ಮಾತನಾಡಿಸಿದಾಗ, ಅಭಿನಯ ಭಾರ್ಗವನ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ….*ಚಿತ್ರರಂಗ ಪ್ರವೇಶಕ್ಕೆ ಪ್ರೇರಣೆ. ..ನಾನು ನಿರ್ಮಾಪಕ ಎನಿಸಿಕೊಳ್ಳಲು ವಿಷ್ಣುವರ್ಧನ್ ಅವರೇ ಕಾರಣ. ಚಿಕ್ಕವಯಸ್ಸಿನಿಂದ ಚಿತ್ರಗಳನ್ನು ನೋಡಿ ಬೆಳೆದು ಚಿತ್ರ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬಂದಾಗ ಮೊದಲು ಹೋಗಿದ್ದೇ ಅವರ ಬಳಿಗೆ. ‘ಧಣಿ’ ಚಿತ್ರದಲ್ಲಿ ನಟಿಸಿ ಪ್ರೋತ್ಸಾಹಿಸಿದರು. ಬಳಿಕ ‘ಮಂಗಳಸೂತ್ರ’ ನಂತರ ಸೂಪರ್ ಹಿಟ್ ಮೂವಿ ‘ಯಜಮಾನ’’ ನಿರ್ಮಾಣಕ್ಕೂ ಪ್ರೇರಣೆಯಾದರು.*ಶಿಸ್ತಿನ ಸಿಪಾಯಿ, ಗೌರವಾನ್ವಿತ ವ್ಯಕ್ತಿತ್ವ. . .ವಿಷ್ಣುವರ್ಧನ್ ಅವರದು ಗೌರವಾನ್ವಿತ ವ್ಯಕ್ತಿತ್ವ. ಜತೆಗೆ ಸಮಯಪಾಲನೆ, ಶಿಸ್ತು ಪಾಲಿಸುವುದರಲ್ಲಿ ನಂಬರ್ ಒನ್. ಹೇಳಿದ ಸಮಯಕ್ಕೆ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದರು.ಅವರಿಗೆ ಗದ್ದಲ, ಗಲಾಟೆ ಇಷ್ಟವಾಗುತ್ತಿರಲಿಲ್ಲ. ಶಾಂತಿಪ್ರಿಯರಾಗಿದ್ದರು. ಮಹಿಳೆಯರನ್ನು ಗೌರವಿಸುತ್ತಿದ್ದರು. ನಟಿಯರ ಜತೆ ಸಲ್ಲದೆ ದೃಶ್ಯಗಳು, ಉಡುಪುಗಳಿಗೆ ಒಪ್ಪುತ್ತಿರಲಿಲ್ಲ. ಚಿತ್ರೀಕರಣ ನೋಡಲು ಸೇರುತ್ತಿದ್ದ ನೂರಾರು ಜನರು ಅದೆಷ್ಟು ಗೌರವ ಕೊಡುತ್ತಿದ್ದರೆಂದರೆ ಶೂಟಿಂಗ್ ಮುಗಿವವರೆಗೂ ಒಬ್ಬನಾದರೂ, ಧೂಮಪಾನ ಮಾಡುತ್ತಿರಲಿಲ್ಲ. ಒಂದು ವೇಳೆ ಅಂತಹ ವ್ಯಕ್ತಿ ಕಣ್ಣಿಗೆ ಬಿದ್ದರೆ ಖುದ್ದು ವಿಷ್ಣುವರ್ಧನ್ ಅವರೇ ಅವನನ್ನು ಅಲ್ಲಿಂದ ದೂರ ಕಳುಹಿಸಿಬಿಡುತ್ತಿದ್ದರು.

ಸಹಕಲಾವಿದರ ಕಷ್ಟ ಆಲಿಸುತ್ತಿದ್ದ ಕರುಣಾಮಯಿ. .. ವಿಷ್ಣುವರ್ಧನ್ ಅವರು ಚಿತ್ರೀಕರಣದ ಬಿಡುವಿನ ವೇಳೆ ಸಹಕಲಾವಿದರೊಡನೆ ಆತ್ಮೀಯವಾಗಿ ಬೆರೆಯುತ್ತಿದ್ದರು. “ಯಾರ್ಯಾರು ಯಾವ ಚಿತ್ರ ಮಾಡುತ್ತಿದ್ದೀರಿ? ನಿರ್ಮಾಪಕರು ಪೇಮೆಂಟ್ ಕೊಟ್ಟಿದ್ದಾರೆಯೇ?” ಎಂದು ವಿಚಾರಿಸುತ್ತಿದ್ದರು. ಒಂದು ವೇಳೆ ಇನ್ನೂ ಪೇಮೆಂಟ್ ಬಂದಿಲ್ಲ ಎಂದರೆ ನಿರ್ಮಾಪಕರ ಬಳಿ ಮಾತನಾಡಿ ಕೊಡಿಸುತ್ತಿದ್ದರು.

ವಿಷ್ಣುವರ್ಧನ್ ನಟನಲ್ಲ ‘ಕಲಾವಿದ’

ನಿರ್ದೇಶಕ ಪುಟ್ಟಣಕಣಗಾಲ್ ಗರಡಿಯಲ್ಲಿ ಪಳಗಿದ ವಿಷ್ಣುವರ್ಧನ್ ಕೇವಲ ನಟ ಅಲ್ಲ ‘ಕಲಾವಿದ’. ಪಾತ್ರದಲ್ಲಿ ತಲ್ಲೀನರಾಗಿ ಅಳು, ನಗು, ರೋಷಾವೇಶ. . . ಹೀಗೆ ಎಲ್ಲ ಭಾವವನ್ನೂ ಸಹಜವಾಗಿ ತೋರ್ಪಡಿಸುತ್ತಿದ್ದರು. ಇಂದಿನ ಬಹುತೇಕರು ತಾವು ಕಲಾವಿದರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಟರೇ ಹೊರತು ಕಲಾವಿದರಲ್ಲ.

ವಿಷ್ಣುವರ್ಧನ್ ಇದ್ದಿದ್ದರೆ ಇಂಡಿನ ಡ್ರಗ್ಸ್ ಚರ್ಚೆಗೆ ಏನು ಹೇಳುತ್ತಿದ್ದರು? ಪ್ರಸ್ತುತ ವಿಷ್ಣು ಸರ್‍ ಇದ್ದಿದ್ದರೆ ಮಾದಕ ವ್ಯಸನಕ್ಕೆ ಒಳಗಾಗದಂತೆ ಬುದ್ಧಿ ಹೇಳುತ್ತಿದ್ದರು. ಅಲ್ಲದೆ ಡ್ರಗ್ಸ್ ವ್ಯವಹಾರಕ್ಕೆ ಕೇವಲ ಚಿತ್ರರಂಗವನ್ನು ಮಾತ್ರ ಎಳೆಯಬೇಡಿ. ಅದು ಎಲ್ಲೆಡೆ ವ್ಯಾಪಿಸಿದೆ ಎನ್ನುತ್ತಿದ್ದರು.

*ಬದುಕಿನ ಕೊನೆಯ ಘಟ್ಟದಲ್ಲಿ ವಿಷ್ಣು ತತ್ವಜ್ಞಾನಿಯಂತಿದ್ದರು…

ತಮ್ಮ ಜೀವನದ ಕೊನೆಯ ನಾಲ್ಕೈದು ವರ್ಷ ಅವರು ಸದಾ ಆಧ್ಯಾತ್ಮಿಕದ ಬಗ್ಗೆ ಮಾತನಾಡುತ್ತಿದ್ದರು. ‘ಸಿರಿವಂತ’ ಚಿತ್ರದ ಬಳಿಕ ಅವರು ಈ ಅವಸ್ಥೆ ತಲುಪಿದರು ಎನ್ನಬಹುದು. ಆ ಚಿತ್ರದಲ್ಲಿ ಬರುವ ಕೆಲ ಘಟನೆಗಳು ಅವರ ಮನಕಲಕಿತ್ತು. ಹಣವೇ ಸರ್ವಸ್ವವಲ್ಲ, ಯಾವುದಕ್ಕೂ ಹೆಚ್ಚು ಆಸೆ ಪಡಬಾರದು ಎನ್ನುತ್ತಿದ್ದರು.

*ಮತ್ತೆ ಚಿತ್ರ ನಿರ್ಮಾಣ ಮಾಡುವ ಆಲೋಚನೆ?.

ವಿಷ್ಣುವರ್ಧನ್ ಅವರ ಹಾಗೆ ನಿರ್ಮಾಪಕರಿಗೆ ಗೌರವ ನೀಡುವ ಕಲಾವಿದರು ಈಗಿಲ್ಲ. ಹೀಗಾಗಿ ಚಿತ್ರ ನಿರ್ಮಾಣದ ಬಗ್ಗೆ ಆಲೋಚನೆ ಬಂದಾಗಲೆಲ್ಲ ಹಿಂದೇಟು ಹಾಕುವಂತಾಗುತ್ತದೆ. ಆದಾಗ್ಯೂ ಕೊರೋನಾ ಗಲಾಟೆ ಸಂಪೂರ್ಣ ಮುಗಿದ ನಂತರ ಒಳ್ಳೆಯ ಕಥೆ ಸಿಕ್ಕಿದಲ್ಲಿ ನಿರ್ಮಾಣ ಮಾಡುವ ಮನಸ್ಸಿದೆ.

ಯುಎನ್‍ಐ ಎಸ್‍ಎ 1405