Sunday, May 31 2020 | Time 18:40 Hrs(IST)
 • ಅಮೇರಿಕಾ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹರಿಸುವಂತೆ ಸಿದ್ದರಾಮಯ್ಯ ಒತ್ತಾಯ
 • ರಾಜ್ಯದಲ್ಲಿ ಒಂದೇ ದಿನ 299 ಕೊರೋನಾ ಸೋಂಕಿತರು ಪತ್ತೆ, ಒಟ್ಟು ಸಂಖ್ಯೆ 3221ಕ್ಕೇರಿಕೆ
 • ತಮ್ಮ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಇಬ್ಬರು ಭಾರತೀಯರನ್ನು ಹೆಸರಿಸಿದ ಅಂಪೈರ್ ಇಯಾನ್
 • ರಾಜ್ಯ ಸರ್ಕಾರದ ಲಾಕ್‌ ಡೌನ್‌ 5 0 ಹೊಸ ಮಾರ್ಗಸೂಚಿ ಪ್ರಕಟ; ಮೂರು ಹಂತಗಳಲ್ಲಿ ನಿರ್ಬಂಧ ಸಡಿಲಿಕೆ
 • ತೆಲಂಗಾಣದಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ
 • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
 • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
 • ಮುಂಬೈನಲ್ಲಿ ಸಿಲುಕಿದ್ದ ಇನ್ನೂ 180 ವಲಸಿಗರು ವಿಶೇಷ ವಿಮಾನದ ಮೂಲಕ ರಾಂಚಿಗೆ ಆಗಮನ
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
Entertainment Share

ನಿರ್ಮಾಪಕಿಯಾಗಲು ವಿದ್ಯಾ ಗೆ ಇಷ್ಟ ಇಲ್ವಂತೆ

ಮುಂಬೈ 29 ಸೆ (ಯುಎನ್ಐ) ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ಗೆ ನಿರ್ಮಾಪಕಿ ಆಗಲು ಇಷ್ಟವಿಲ್ಲವಂತೆ.

ಬಿಟೌನ್ ನಲ್ಲಿ ಅನೇಕ ನಟಿಯರು ಕೇವಲ ನಟನೆಗೆ ಮಾತ್ರ ಸೀಮಿತವಾಗಿರದೇ, ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾ ಬಾಲನ್ ಅವರ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಚಿತ್ರ ನಿರ್ಮಾಪಕರಾಗಿದ್ದಾರೆ. ಹೀಗಾಗಿ ತಾವೇನಾದರೂ ನಿರ್ಮಾಪಕಿಯಾಗುತ್ತೀರಾ ಎಂದು ವಿದ್ಯಾ ಅವರನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, "ನಾನು ನಿರ್ಮಾಪಕಿಯಾಗಲು ಇಚ್ಛಿಸುವುದಿಲ್ಲ. ಅಲ್ಲದೇ, ನಿರ್ಮಾಪಕಿ ಆಗುವ ಯಾವುದೇ ಉದ್ದೇಶ ನನ್ನಲಿಲ್ಲ. ನಾನು ಮನೆಯಲ್ಲಿಯೇ ನಿರ್ಮಾಪಕಿಯಾಗಿದ್ದಾನೆ. ಅದಷ್ಟೇ ನನಗೆ ಸಾಕು ಎಂದು ಉತ್ತರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾ, ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಮಾನವ ಕಂಪ್ಯೂಟರ್ ಖ್ಯಾತಿಯ ಗಣಿತಜ್ಞ 'ಶಕುಂತಲಾ ದೇವಿ ಅವರ ಜೀವನಾಧಾರಿತ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಥೆವುಳ್ಳ ವೆಬ್ ಸರಣಿಯಲ್ಲಿಯೂ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್ 1612