Monday, Sep 23 2019 | Time 01:47 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
Karnataka Share

ನೆಲಮಂಗಲ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಉಪ ಮುಖ್ಯಮಂತ್ರಿ ಕಾರಜೋಳ ದಿಢೀರ್ ಭೇಟಿ

ನೆಲಮಂಗಲ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಉಪ ಮುಖ್ಯಮಂತ್ರಿ ಕಾರಜೋಳ ದಿಢೀರ್ ಭೇಟಿ
ನೆಲಮಂಗಲ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಉಪ ಮುಖ್ಯಮಂತ್ರಿ ಕಾರಜೋಳ ದಿಢೀರ್ ಭೇಟಿ

ಬೆಂಗಳೂರು, ಸೆ 11 (ಯುಎನ್ಐ) ನೆಲಮಂಗಲ ಟೌನ್ ನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಹಾಸ್ಟೆಲ್ ಕಟ್ಟಡದ ಮುಂಭಾಗ ಇದ್ದ ಕಸದ ರಾಶಿ ಕಂಡು ಕೆಂಡಾಮಂಡಲರಾದ ಕಾರಜೋಳ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ಕೂಡಲೇ ಕಸ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಸ್ಟೆಲ್ ವ್ಯವಸ್ಥೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲಿಸಿದರು.

ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು‌ ವ್ಯವಸ್ಥಿತವಾಗಿ ನೀಡಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತೆ ಹಾಗೂ ಉತ್ತಮ ಫಲಿತಾಂಶಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಹಾಸ್ಟೆಲ್‌ನಲ್ಲಿ ನೀಡುತ್ತಿರುವ ಆಹಾರ ಮತ್ತಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಅಡುಗೆ ಕೋಣೆಗಳಿಗೆ ಸ್ವತಃ ತೆರಳಿ ಪರಿಶೀಲಿಸಿದ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಭೇಟಿಗೆ ಹೊರಟಿದ್ದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯವರು ಗಡಿ ಭಾಗಕ್ಕೆ ಬಂದಿದ್ದರು. ಆಗ ಹಾಸ್ಟೆಲ್ ಒಂದಕ್ಕೆ ಭೇಟಿ ನೀಡಬೇಕು ಎಂದು ಹೇಳಿದಾಗ ನೆಲಮಂಗಲದಲ್ಲಿರುವ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಹಾಸ್ಟೆಲ್‌ ಅನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಆದರೆ ವಿದ್ಯಾರ್ಥಿ ನಿಲಯದ ಹೊರಗಡೆ ಕಸದ ರಾಶಿ ಬಿದ್ದಿರುವುದು ಕಂಡುಬಂದಿದೆ. ಅದನ್ನು ತೆಗೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು.

ಉಳಿದಂತೆ ಹಾಸ್ಟೆಲ್‌ ಸುಸಜ್ಜಿತವಾಗಿದ್ದು, ವಿದ್ಯಾರ್ಥಿಗಳೊಂದಿಗೂ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಹಾಸ್ಟೆಲ್ ಚೆನ್ನಾಗಿದೆ, ಊಟ-ವಸತಿ ವ್ಯವಸ್ಥೆ ಚೆನ್ನಾಗಿದೆ ಎಂದು ಹೇಳಿದ್ದಾರೆ. ಯಾರು ಕೂಡ ದೂರು ನೀಡಿಲ್ಲ. ಅಲ್ಲಿರುವುದು ಬಡವರ ಮಕ್ಕಳು, ನಮ್ಮ ಮಕ್ಕಳಿಗೆ ನೀಡುವ ಸೌಲಭ್ಯವೂ ಅವರಿಗೆ ದೊರೆಯಬೇಕು ಎಂಬುದ ನಮ್ಮ ಉದ್ದೇಶವಾಗಿದೆ. ಇಲ್ಲಿ ಸುಮಾರು 150 ವಿದ್ಯಾರ್ಥಿಗಳು ನೆಲೆಸಿದ್ದಾರೆ ಎಂದರು.

ಕಾಂಗ್ರೆಸ್ ನಾಯಕ ಡಿ ಕೆ‌.ಶಿವಕುಮಾರ್ ಬಂಧನ ಖಂಡಿಸಿ ಇಂದು ರಾಜಧಾನಿ ಬೆಂಗಳೂರಿನಲ್ಲಿ ಒಕ್ಕಲಿಗರ ಪ್ರತಿಭಟನೆ ನಡೆಸುತ್ತಿರುವ ವಿಚಾರದ ಬಗ್ಗೆ ಕೇಳಿದಾಗ, ನಾನು ಈ ಬಗ್ಗೆ ಮಾತನಾಡುವುದಿಲ್ಲ. ಅದು ನನಗೆ ಸಂಬಂಧ ಇಲ್ಲದ ವಿಷಯ, ದೇಶದಲ್ಲಿ ಕಾನೂನು ಕ್ರಮಗಳು ನಡೆಯತ್ತಿರುತ್ತವೆ, ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸಯ್ಯ, ಕಂದಾಯಧಿಕಾರಿ ಅಶ್ವಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯುಎನ್ಐ ಎಎಚ್ 1148

More News
ಅನರ್ಹರನ್ನು ಬಚಾವ್ ಮಾಡಲು ಯಡಿಯೂರಪ್ಪ ಬಳಿ ಸಮಯವಿದೆ : ಎಚ್ ಡಿ ಕುಮಾರಸ್ವಾಮಿ ಲೇವಡಿ

ಅನರ್ಹರನ್ನು ಬಚಾವ್ ಮಾಡಲು ಯಡಿಯೂರಪ್ಪ ಬಳಿ ಸಮಯವಿದೆ : ಎಚ್ ಡಿ ಕುಮಾರಸ್ವಾಮಿ ಲೇವಡಿ

22 Sep 2019 | 8:28 PM

ಬೆಂಗಳೂರು, ಸೆ 22 (ಯುಎನ್‍ಐ) ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬಗ್ಗೆ ದೆಹಲಿ ನಾಯಕರ ಜೊತೆ ಮಾತನಾಡಲು ಯಡಿಯೂರಪ್ಪ ಅವರಿಗೆ ಸಮಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 Sharesee more..
ಇಡೀ ಜಗತ್ತೇ 370 ವಿಧಿ ರದ್ದತಿ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದೆ: ಜೆ ಪಿ ನಡ್ಡಾ

ಇಡೀ ಜಗತ್ತೇ 370 ವಿಧಿ ರದ್ದತಿ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದೆ: ಜೆ ಪಿ ನಡ್ಡಾ

22 Sep 2019 | 8:00 PM

ಬೆಂಗಳೂರು,ಸೆ 22(ಯುಎನ್ಐ)ವಿಶ್ವವೇ 370 ವಿಧಿ ನಿಷ್ಕ್ರಿಯಗೊಳಿಸಿದ ನಿರ್ಧಾರದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದೆ. ಪಾಕಿಸ್ತಾನ ಈ ವಿಚಾರವಾಗಿ ಈಗ ಜಗತ್ತಿನ ಮುಂದೆ ಏಕಾಂಗಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ‌.ನಡ್ಡಾ ತಿಳಿಸಿದರು.

 Sharesee more..