Sunday, Dec 6 2020 | Time 00:32 Hrs(IST)
Entertainment Share

ಪವರ್ ಸ್ಟಾರ್ ಗೆ ಸಚಿವರಿಂದ ಬೆಳ್ಳಿ ಗದೆ

ಬೆಂಗಳೂರು/ಹೊಸಪೇಟೆ, ಅ 20 (ಯುಎಸ್‍ಐ) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಬೆಳ್ಳಿ ಗದೆ ನೀಡಿ ಗೌರವಿಸಿದ್ದಾರೆ.

ಹೊಸಪೇಟೆಯ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ಪುನೀತ್ ಅವರನ್ನು ಸ್ವಾಗತಿಸಿದ ಸಚಿವ ಆನಂದ್ ಸಿಂಗ್, ಪುನೀತ್ ರಾಜ್‌ಕುಮಾರ್ ಅವರಿಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ ಸನ್ಮಾನಿಸಿದ್ದಾರೆ.ಸಚಿವರ ಕುಟುಂಬ ಸದಸ್ಯರ ಜತೆ ಪುನೀತ್ ರಾಜ್‌ಕುಮಾರ್ ಉಪಹಾರ ಸೇವಿಸಿದ್ದಾರೆ.

ಈ ಸಂದರ್ಭದಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆಂದು ಹೊಸಪೇಟೆಗೆ ಆಗಮಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವಧಿ ಸಹ ಹಾಜರಿದ್ದರು.

ಜೇಮ್ಸ್‌ ಸಿನಿಮಾದ ಚಿತ್ರೀಕರಣಕ್ಕಾಗಿ ಕಳೆದೊಂದು ವಾರದಿಂದ ಬಳ್ಳಾರಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಪುನೀತ್ ರಾಜ್‌ಕುಮಾರ್. ಹೊಸಪೇಟೆ, ಗಂಗಾವತಿ, ಕಮಲಾಪುರ, ಹಂಪಿ ಗಳಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಬಿಡುವು ಮಾಡಿಕೊಂಡು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೂ ಸಹ ಪುನೀತ್ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಜೇಮ್ಸ್ ಚಿತ್ರಕ್ಕೆ ತಮಿಳಿನ ಪ್ರಿಯಾ ಆನಂದ್ ನಾಯಕಿಯಾಗಿದ್ದು, ಭರ್ಜರಿ ಚೇತನ್ ಕುಮಾರ್ ಸಾರಥ್ಯವಿದೆ. ಅನು ಪ್ರಭಾಕರ್, ಆದಿತ್ಯ ಮೆನನ್ ಮತ್ತಿತರರು ತಾರಾಗಣದಲ್ಲಿದ್ದಾರೆ.
ಯುಎನ್ಐ ಎಸ್‍ಎ 1503 ಯುಎನ್ಐ ಎಸ್‍ಎ 1500
More News
ಆ ಒಂದು ಕನಸಿಗೆ ಮುಹೂರ್ತ

ಆ ಒಂದು ಕನಸಿಗೆ ಮುಹೂರ್ತ

04 Dec 2020 | 9:26 PM

ಬೆಂಗಳೂರು, ಡಿ 04 (ಯುಎನ್‍ಐ) ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಆ ಒಂದು ಕನಸು’ ಚಿತ್ರದ ಮುಹೂರ್ತ ಇತ್ತೀಚೆಗೆ ರಾಜರಾಜೇಶ್ವರಿ ನಗರದ ನಿಮಿಷಾಂಬಾ ದೇವಸ್ಥಾನದಲ್ಲಿ ನೆರವೇರಿದೆ.

 Sharesee more..
“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

04 Dec 2020 | 9:22 PM

ಬೆಂಗಳೂರು, ಡಿ 04 (ಯುಎನ್ಐ) ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರದ ಶೂಟಿಂಗ್ ಸೆಟ್ ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಭೇಟಿ ನೀಡಿ ತಂಡಕ್ಕೆ ಶುಭಕೋರಿ ಹಾರೈಸಿದ್ದಾರೆ.

 Sharesee more..