NationalPosted at: Feb 28 2021 6:46PM
Shareಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆ
ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆಶ್ರೀಹರಿಕೋಟ, ಫೆ 28 (ಯುಎನ್ಐ)- ದೇಶೀಯ ನಿರ್ಮಿತ ಪಿಎಸ್ಎಲ್ ವಿ-ಸಿ 51 ರಾಕೆಟ್ ಇಂದು ಬ್ರೆಜಿಲ್ ನ 637 ಕೆ.ಜಿ. ತೂಕದ ಅಮೆಜೋನಿಯಾ-1 ಉಪಗ್ರಹವನ್ನು ಎರಡು ತಾಸಿನಲ್ಲಿ ಯಶಸ್ವಿಯಾಗಿ ಉಡಾಯಿಸಿದೆ.
ಇಲ್ಲಿನ ಎಸ್ ಎಚ್ಎಆರ್ ಶ್ರೀಣಿಯ ಎಸ್ ಡಿಎಸ್ ಸಿ ಕೇಂದ್ರದಿಂದ ಅಮೆಜೋನಿಯಾ-1 ಮತ್ತು 18 ಸಹ ಉಪ್ರಗ್ರಹಗಳನ್ನು ಪಿಎಸ್ಎಲ್ ವಿ –ಸಿ 51 ರಾಕೆಟ್ ಉಡಾಯಿಸಿದೆ.
22.5 ತಾಸಿನ ಇಳಿ ಎಣಿಕೆ ನಂತರ 44.4 ಮೀಟರ್ ಎತ್ತರದ ಪಿಎಸ್ಎಲ್ –ಸಿ51 ಉಡ್ಡಯನ ವಾಹಕ ಬೆಳಿಗ್ಗೆ 10.24ಕ್ಕೆ ಶುಭ್ರ ಆಕಾಶದ ನಡುವೆ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ.
ಯುಎನ್ಐ ಎಸ್ಎಲ್ಎಸ್ 1411