Sunday, Nov 17 2019 | Time 18:26 Hrs(IST)
 • ಐಸಿಸಿ ಟೆಸ್ಟ್‌ ಶ್ರೇಯಾಂಕ: ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಅಗರ್ವಾಲ್, ಶಮಿ
 • ಜಾರ್ಖಂಡ್ ಚುನಾವಣೆ: ಬಿಜೆಪಿಗೆ 65 ಹೆಚ್ಚು ಸ್ಥಾನ: ಜಾವಡೇಕರ್ ವಿಶ್ವಾಸ
 • ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿ
 • ಕಪ್ಪುಹಣದ ಮೇಲೆ ಮತ್ತೊಮ್ಮೆ ಗುರಿ; ಆಸ್ತಿಗಳಿಗೆ ಆಧಾರ್ ಕಡ್ಡಾಯಗೊಳಿಸಲು ಮೋದಿ ಸರ್ಕಾರದ ಸಿದ್ದತೆ
 • ಗೋವಾ ವಿರುದ್ಧ ಕರ್ನಾಟಕಕ್ಕೆೆ 35 ರನ್ ಜಯ
 • ಕುಖ್ಯಾತ ಮನೆಗಳ್ಳ ಎಸ್ಕೇಪ್ ಕಾರ್ತಿಕ್ ಬಂಧನ: 8 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
 • ಪ್ರಸಕ್ತ ಸಂಸತ್ ಅಧಿವೇಶನ ರಾಜ್ಯಸಭೆಯ 250 ನೇ ಅಧಿವೇಶನ ಆಚರಣೆಯ ವಿಶೇಷ ಸಂದರ್ಭವಾಗಲಿದೆ: ಪ್ರಧಾನಿ
 • class="rtejustify">ಆಯೋಧ್ಯೆ ತೀರ್ಪು; ಮರು ಪರಿಶೀಲನಾ ಆರ್ಜಿ ಸಲ್ಲಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧಾರ
 • ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ,ಕೇಂದ್ರ ಸಚಿವರು,ಸಂಸದರಿಗೆ ಸ್ಥಾನ
 • ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಆರಂಭ
 • ಬಾಳಾ ಠಾಕ್ರೆ ಏಳನೇ ಪುಣ್ಯ ತಿಥಿ; ಮಹಾರಾಷ್ಟ್ರದಲ್ಲಿ ಮುಖಂಡರ ಪಕ್ಷಾತೀತ ನಮನ
 • ಸಂಸತ್‍ ಚಳಿಗಾಲದ ಅಧಿವೇಶನ: ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆ ಅಂತ್ಯ
 • 105 ದಿನಗಳ ಬಳಿಕ ಶ್ರೀನಗರ-ಬನಿಹಾಲ್ ರೈಲು ಸೇವೆ ಪುನಾರಂಭ
 • ಕಾಶ್ಮೀರದಲ್ಲಿ ಹೆಚ್ಚಿನ ಅಂಗಡಿಗಳು ಪುನರಾರಂಭ: ಸಾಮಾನ್ಯ ಸ್ಥಿತಿಯತ್ತ ಜನ-ಜೀವನ
 • ಮೀಸಲಾತಿಗೆ ಶತಶತಮಾನಗಳ ಇತಿಹಾಸವಿದೆ: ನಾಡೋಜ ಬರಗೂರು ರಾಮಚಂದ್ರಪ್ಪ
Sports Share

ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ

ಬರ್ಮಿಂಗ್‌ಹ್ಯಾಮ್‌, ಜೂ 25 (ಯುಎನ್‌ಐ) ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದ ಅಂತಿಮ 11 ಆಟಗಾರರನ್ನೇ ನಾಳೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುವ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೂ ಮುಂದುವರಿಸುವಂತೆ ಪಾಕಿಸ್ತಾನದ ಮಾಜಿ ವೇಗಿ ವಾಸೀಮ್‌ ಅಕ್ರಂ ಅವರು, ನಾಯಕ ಸರ್ಫರಾಜ್‌ ಅಹಮದ್‌ ಅವರಿಗೆ ಸಲಹೆ ನೀಡಿದ್ದಾರೆ.
ಕಳೆದ ಭಾನುವಾರ ಆಫ್ರಿಕಾ ವಿರುದ್ಧ 49 ರನ್‌ಗಳಿಂದ ಜಯ ಸಾಧಿಸಿದ ಬಳಿಕ ಪಾಕಿಸ್ತಾನಕ್ಕೆ ಸೆಮಿಫೈನಲ್‌ ಹಾದಿ ಇನ್ನೂ ಜೀವಂತವಾಗಿದೆ. 1992ರಲ್ಲಿ ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ನ್ಯೂಜಿಲೆಂಡ್‌ ತಂಡವನ್ನು ಕ್ರೈಸ್ಟ್‌ ಚರ್ಚ್‌ನಲ್ಲಿ ಪಾಕಿಸ್ತಾನ ಮಣಿಸಿತ್ತು. ಈ ಆವೃತ್ತಿಯಲ್ಲಿ 1992ರ ಹಳೆಯ ಘಟನೆಯನ್ನು ಮತ್ತೇ ಪಾಕ್‌ ಆಟಗಾರರು ಮರುಕಳಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅಕ್ರಂ ಹೇಳಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಒಟ್ಟು 14 ಕ್ಯಾಚ್‌ಗಳನ್ನು ಪಾಕಿಸ್ತಾನ ಕೈಚೆಲ್ಲಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್‌ ಬಿಟ್ಟಿರುವ ತಂಡ ಎಂಬ ಕುಖ್ಯಾತಿಗೆ ಪಾಕ್‌ ಭಾಜನವಾಗಿದೆ. ಇದು ವಿಶ್ವಕಪ್‌ನಲ್ಲಿ ಪಾಕ್‌ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ಪಂದ್ಯಗಳಲ್ಲಿ ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲಬೇಕು. ಇಲ್ಲವಾದಲ್ಲಿ ಸರ್ಫರಾಜ್‌ ಪಡೆಯ ಸೆಮಿಫೈನಲ್‌ ತಲುಪುವ ಹಾದಿಗೆ ಮುಳುವಾಗಲಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಬಾಬರ್‌ ಅಜಾಮ್‌ ಅರ್ಧ ಶತಕವನ್ನು ಶತಕದತ್ತ ಕೊಂಡೊಯ್ಯುವತ್ತ ಗಮನಹರಿಸಬೇಕು. ಆ ಮೂಲಕ ಅವರೊಬ್ಬ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ನಿರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಂದಿನ ಪಂದ್ಯಗಳು ಪಾಕಿಸ್ತಾನ ಪಾಲಿಗೆ ಅತ್ಯಂತ ಪ್ರಮುಖ ಪಂದ್ಯಗಳಾಗಿವೆ. ಆದ್ದರಿಂದ ಕಳೆದ ಪಂದ್ಯವಾಡಿದ ತಂಡವನ್ನೇ ನಾಳಿನ ಪಂದ್ಯಕ್ಕೂ ಮುಂದುವರಿಸಬೇಕು ಎಂದು ವಾಸೀಮ್ ಅಕ್ರಂ ಸಲಹೆ ನೀಡಿದ್ದಾರೆ. ಯುಎನ್‌ಐ ಆರ್‌ಕೆ ಎಎಚ್‌ 1146