Friday, Feb 28 2020 | Time 10:47 Hrs(IST)
 • ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಸುಧಾರಣೆಯಾಗಬೇಕು: ರವಿಶಾಸ್ತ್ರಿ
 • ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನಿಂದ ನೋಟೀಸ್ ಜಾರಿ
 • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
 • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
 • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
 • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
 • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
 • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
 • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
 • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
 • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
 • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
International Share

ಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿಗಾಗಿ ಆಹಾಕಾರ !

ಲಾಹೋರ್ (ಪಾಕಿಸ್ತಾನ), ಜ ೨೧ (ಯುಎನ್‌ಐ) ಉಗ್ರರನ್ನು ಪೋಷಿಸುತ್ತಿರುವ ನೆರೆಯ ಪಾಕಿಸ್ತಾನದಲ್ಲಿ ಈಗ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ. ದೇಶದಲ್ಲಿ ಗೋಧಿ ಹಿಟ್ಟಿನ ತೀವ್ರ ಕೊರತೆಯಿಂದ ಚಪಾತಿ ತಿನ್ನುವ ಜನರು ಸಮಸ್ಯೆ ಎದುರಿಸುವಂತಾಗಿದೆ.
ಖೈಬರ್ ಪಖ್ತೂನ್ ಖವಾ ಪ್ರಾಂತ್ಯದ ರಾಜಧಾನಿ ಪೇಷಾವರ್ ನಗರದಲ್ಲಿ ಗೋದಿ ಹಿಟ್ಟು ಮಾರಾಟ ಮಾಡುವ ೨,೫೦೦ ಮಳಿಗೆಗಳಿದ್ದು, ಗೋಧಿ ಹಿಟ್ಟಿನ ಕೊರತೆ ಕಾರಣ ಈ ಅಂಗಡಿಗಳು ಬಹುತೇಕ ಬಂದ್ ಆಗಿವೆ. ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್ ಖವಾ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿನ ಕೊರತೆ ತೀವ್ರವಾಗಿ ಕಾಣಿಸಿಕೊಂಡಿದೆ. ಗೋಧಿ ಹಿಟ್ಟಿನ ಅಭಾವದ ಕಾರಣ ಚಪಾತಿ ಪ್ರಿಯರು ತಮ್ಮ ಆಹಾರ ಅಗತ್ಯಗಳಿಗೆ ಅಕ್ಕಿಯ ಮೊರೆ ಹೋಗಿದ್ದಾರೆ.
ಗೋಧಿ ಹಿಟ್ಟು ಕೊರತೆ ಕಾರಣ ದೇಶದ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ತೀವ್ರ ಏರಿಕೆ ಕಂಡಿದೆ. ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದರೂ, ತಳಮಟ್ಟದಲ್ಲಿ ಯಾವುದೇ ಬದಲಾವಣೆ ಸಾಧ್ಯವಾಗಿಲ್ಲ.
ಮಾರುಕಟ್ಟೆಗಳಲ್ಲಿನ ಕೊರತೆಯೊಂದಿಗೆ, ಒಂದು ಕಿಲೋ ಗೋಧಿ ಹಿಟ್ಟಿನ ಬೆಲೆ ೪೩ ರೂ.ಗೆ ಏರಿದೆ.
ದೇಶದಲ್ಲಿ ಗೋಧಿ ಹಿಟ್ಟಿನ ಅಭಾವನ್ನು ನಿವಾರಿಸಲು ಪಾಕಿಸ್ತಾನ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ದೂರುತ್ತಿವೆ. ಸಿಂಧ್ ರಾಜ್ಯದಲ್ಲಿ ಮಾರ್ಚ್ ತಿಂಗಳ ಮಧ್ಯದ ಹೊತ್ತಿಗೆ, ಪಂಜಾಬ್‌ನಲ್ಲಿ ಏಪ್ರಿಲ್ ೧೫ ರೊಳಗೆ ಗೋಧಿ ಬೆಳೆ ರೈತರ ಕೈಗೆ ಬರುವ ನಿರೀಕ್ಷೆಯಿದೆ. ಹೊಸ ಗೋಧಿ ಬೆಳೆ ಬಂದರೆ ಗೋಧಿ ಹಿಟ್ಟಿನ ಅಭಾವ ನಿವಾರಣೆಯಾಗಲಿದೆ ಎಂದು ರಾಷ್ಟ್ರೀಯ ಆಹಾರ ಭದ್ರತಾ ಅಧಿಕಾರಿಗಳು ಹೇಳುತ್ತಾರೆ.
ಇಮ್ರಾನ್ ಖಾನ್ ಸರ್ಕಾರದ ಅಸಮರ್ಥತತೆಯಿಂದ ದೇಶದಲ್ಲಿ ಗೋಧಿ ಹಿಟ್ಟಿನ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷದ ನಾಯಕ ಶಹಬಾಜ್ ಷರೀಫ್ ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಸರ್ಕಾರ ಅಫ್ಘಾನಿಸ್ತಾನಕ್ಕೆ ೪೦,೦೦೦ ಟನ್ ಗೋಧಿಯನ್ನು ರಫ್ತು ಮಾಡಿರುವ ಕಾರಣ ದೇಶದಲ್ಲಿ ಗೋಧಿ ಹಿಟ್ಟಿನ ಅಭಾವ ಕಂಡು ಬಂದಿದೆ ಎಂದು ಪಿಪಿಪಿ ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ ಸರ್ಕಾರವನ್ನು ಟೀಕಿಸಿದ್ದಾರೆ.
ಯುಎನ್‌ಐ ಕೆವಿಆರ್ ೧೩೫೮
More News

ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ

28 Feb 2020 | 8:37 AM

 Sharesee more..
ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

27 Feb 2020 | 5:09 PM

ಸಿಯೋಲ್, ಫೆ 27 (ಕ್ಸಿನ್ಹುವಾ) ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ (ಕೊವಿದ್-19)ನ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,766 ಕ್ಕೆ ಏರಿದೆ.

 Sharesee more..