Monday, Mar 1 2021 | Time 03:23 Hrs(IST)
Special Share

ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರಿ ಅಗ್ನಿ ಆಕಸ್ಮಿಕ

ಮುಂಬೈ, ಜ 21(ಯುಎನ್ಐ)- ಪುಣೆಯ ಸೀರಮ್ ಔಷಧಿ ತಯಾರಕ ಸಂಸ್ಥೆಯಲ್ಲಿ ಗುರುವಾರ ಭಾರಿ ಪ್ರಮಾಣದ ಅಗ್ನಿ ಆಕಸ್ಮಿಕ ಉಂಟಾಗಿದೆ. ಟರ್ಮಿನಲ್ ಗೇಟ್ -1 ಬಳಿಯ ಕಟ್ಟಡದ ಐದನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನು ನಿಯಂತ್ರಿಸಲು ಹತ್ತು ಅಗ್ನಿಶಾಮಕ ಯಂತ್ರಗಳು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿವೆ.
ಈ ವಿಷಯವನ್ನು ಪುಣೆ ಮೇಯರ್ ಮುರಳೀಧರ್ ಮೊಹಲ್ ದೃಢಪಡಿಸಿದ್ದು, ಆರಂಭದಲ್ಲಿ ಕೇವಲ ಐದು ಅಗ್ನಿಶಾಮಕ ಯಂತ್ರಗಳು ತೆರಳಿದ್ದವು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಅಧಿಕಾರಿಗಳು ಇನ್ನೂ ಐದು ಅಗ್ನಿಶಾಮಕ ಯಂತ್ರಗಳನ್ನು ನಿಯೋಜಿಸಿದ್ದಾರೆ.
ಯುಎನ್ಐ ಕೆವಿಆರ್ 1555
More News
ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

28 Feb 2021 | 8:16 PM

ಹಮೀರ್ ಪುರ, ಫೆಬ್ರವರಿ 28 (ಯುಎನಐ) ಸ್ವಾಮಿ ವಿವೇಕಾನಂದ ಕನಸಿನಂತೆ ಭಾರತ ಮತ್ತೊಮ್ಮೆ ವಿಶ್ವ ಗುರುಗಳಾಗುವತ್ತ ಸಾಗುತ್ತಿದೆ, ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಎಚ್ ಪಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಹೇಳಿದ್ದಾರೆ.

 Sharesee more..
ಪ್ರಧಾನಿ  ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

ಪ್ರಧಾನಿ ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

28 Feb 2021 | 7:52 PM

ಶ್ರೀನಗರ, ಫೆ 28(ಯುಎನ್ಐ)- ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 Sharesee more..