Friday, Nov 15 2019 | Time 12:44 Hrs(IST)
  • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
  • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
  • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
  • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
  • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
  • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
business economy Share

ಪೇಯು ಜೊತೆ ಶ್ಯಾಪ್ ಮ್ಯಾಟಿಕ್ ಒಪ್ಪಂದ

ಬೆಂಗಳೂರು, ಅ.21 (ಯುಎನ್ಐ) ವರ್ತಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಇ-ಕಾಮರ್ಸ್ ಸಂಸ್ಥೆಯು ಆನ್‌ಲೈನ್ ಪಾವತಿ ಪರಿಹಾರ ಸೇವೆ ಒದಗಿಸುವುದರಲ್ಲಿ ಭಾರತದ ಮುಂಚೂಣಿಯ ಪೇಯು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಪರಿಣಾಮ ಶ್ಯಾಪ್ ಮ್ಯಾಟಿಕ್ ನಲ್ಲಿ ನೋಂದಣಿಯಾದ ವರ್ತಕರು ಬಹು ವಿಧಾನದಲ್ಲಿ ಒಂದೇ ವೇದಿಕೆ ಮೂಲಕ ಗ್ರಾಹಕರಿಂದ ಪಾವತಿ ಸ್ವೀಕರಿಸಬಹುದು.
ಇಂದು ಗ್ರಾಹಕರು ಪಾವತಿ ಮಾಡಲು ಬಹು ಆಯ್ಕೆಗಳನ್ನು ಬಯಸುತ್ತಾರೆ. ಪೇಯು ಜೊತೆ ಶ್ಯಾಪ್ ಮ್ಯಾಟಿಕ್ ಸ್ಟೋರ್ಸ್ ಇಂಟಿಗ್ರೇಟ್ ಮಾಡುವುದರ ಮೂಲಕ ಗ್ರಾಹಕರಿಗೆ ಬಹು ವಿಧಾನ ಪಾವತಿ ಆಯ್ಕೆಯನ್ನು ಒದಗಿಸಿದೆ. ಶ್ಯಾಪ್ ಮ್ಯಾಟಿಕ್ ಮೂಲಕ ಖರೀದಿಸಿದರೆ ಗ್ರಾಹಕರು ಇನ್ನು ಮುಂದೆ ಯುಪಿಐ ಮೂಲಕ ಗೂಗಲ್ ಪೇ, ಫೋನ್ ಪೇ, ಭೀಮ್, ವ್ಯಾಲೇಟ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿ ಪಾವತಿ ಮಾಡಬಹುದು.
"ಪೇಯು ಜೊತೆಗಿನ ಒಡಂಬಡಿಕೆ ನಮಗೆ ಸಂತಸ ತಂದಿದೆ. ವರ್ತಕರಿಗೆ ಸುಲಭವಾಗಿ ಮತ್ತು ಯಾವುದೇ ಅಡೆ-ತಡೆ ಇಲ್ಲದೆ ಪಾವತಿ ಸ್ವೀಕರಿಸುವ ಸೇವೆ ಒದಗಿಸಿದ್ದೇವೆ. ಪೇಯು ಜೊತೆಗಿನ ನಮ್ಮ ಒಪ್ಪಂದವು ವರ್ತಕರಿಗೆ ನಾವು ನೀಡಿದ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವಿವಿಧ ಬ್ರ್ಯಾಂಡ್ ಗಳ ಜೊತೆ ಒಪ್ಪಂದ ಮಾಡುವ ನಮ್ಮ ಕಾರ್ಯವು ಮುಂದುವರೆದು ವರ್ತಕರಿಗೆ ಉತ್ತಮ ಸೇವೆ ಒದಗಿಸಲಾಗುವುದು" ಎಂದು ಶ್ಯಾಪ್ ಮ್ಯಾಟಿಕ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗು ಸಿಇಒ ಅನುರಾಗ್ ಅವುಲಾ ಹೇಳಿದರು.
"ವ್ಯಾಪಾರಿಗಳಿಗೆ ತ್ವರಿತ ಮತ್ತು ಸುಲಭವಾದ ಓಮ್ನಿಚಾನಲ್ ಪಾವತಿ ಪರಿಹಾರಗಳನ್ನು ವಿಸ್ತರಿಸಲು ನಾವು ಶ್ಯಾಪ್ ಮ್ಯಾಟಿಕ್‌ನೊಂದಿಗೆ ಪಾಲುದಾರರಾಗಲು ಖುಷಿಯಾಗುತ್ತದೆ. ಶ್ಯಾಪ್ ಮ್ಯಾಟಿಕ್‌ನೊಂದಿಗಿನ ಈ ಸಹಭಾಗಿತ್ವದ ಮೂಲಕ ನಾವು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಮಹತ್ವಾಕಾಂಕ್ಷೆಗಳಿಗೆ ಶಕ್ತಿ ನೀಡುತ್ತಿದ್ದೇವೆ. ನಮ್ಮ ನವೀನ ಪಾವತಿ ಪರಿಹಾರಗಳು ಶ್ಯಾಪ್ ಮ್ಯಾಟಿಕ್‌ನ ವ್ಯಾಪಾರಿ ಪಾಲುದಾರರಿಗೆ ಪಾವತಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ ಎನ್ನುವ ವಿಶ್ವಾಸ ನಮಗಿದೆ" ಎಂದು ಪೇಯು ಸಂಸ್ಥೆಯ ಸ್ಮಾಲ್ ಅಂಡ್ ಮಿಡಿಎಂ ಬಿಸಿನೆಸ್ ವಿಭಾಗದ ಕಂಟ್ರಿ ಹೆಡ್ ನೂಪುರ್ ಚತುರ್ವೇದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಎನ್ಐ ಎಎಚ್ 1254
More News

ಸೆನ್ಸೆಕ್ಸ್ 229 ಅಂಕ ಇಳಿಕೆ

13 Nov 2019 | 4:54 PM

 Sharesee more..
ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಮಂಡಳಿಗೆ ನೀತಾ ಅಂಬಾನಿ ಆಯ್ಕೆ

ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಮಂಡಳಿಗೆ ನೀತಾ ಅಂಬಾನಿ ಆಯ್ಕೆ

13 Nov 2019 | 2:15 PM

ಮುಂಬೈ, ನ.13(ಯುಎನ್‌ಐ) ಶಿಕ್ಷಣ ತಜ್ಞ, ಸಮಾಜಸೇವಕಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರನ್ನು ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನ ಗೌರವ ಟ್ರಸ್ಟಿಯಾಗಿ ಆಯ್ಕೆ ಮಾಡಲಾಗಿದೆ.

 Sharesee more..
ಜಿಯೋ ಟಿವಿಗೆ ಪ್ರತಿಷ್ಠಿತ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ

ಜಿಯೋ ಟಿವಿಗೆ ಪ್ರತಿಷ್ಠಿತ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ

12 Nov 2019 | 9:40 PM

ಬೆಂಗಳೂರು, ನ.12 (ಯುಎನ್ಐ) ಭಾರತದ ಲಕ್ಷಾಂತರ ಮೊಬೈಲ್ ಫೋನ್ ಬಳಕೆದಾರರು ಆನಂದಿಸುತ್ತಿರುವ ಅತ್ಯಂತ ಜನಪ್ರಿಯ ಟಿವಿ ಮತ್ತು ಪ್ರಸಾರ ಅಪ್ಲಿಕೇಶನ್ ಜಿಯೋ ಟಿವಿಗೆ ಲಂಡನ್‌ನಲ್ಲಿ ನಡೆದ ವಿಶ್ವ ಸಂವಹನ ಪ್ರಶಸ್ತಿ 2019 ರಲ್ಲಿ ‘ಐಪಿಟಿವಿ ಇನ್ನೋವೇಶನ್‌ ಪ್ರಶಸ್ತಿ’ ಲಭ್ಯವಾಗಿದೆ.

 Sharesee more..