Saturday, Jul 11 2020 | Time 10:05 Hrs(IST)
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
Karnataka Share

ಪ್ರತಿಭಟನೆಗೆ ಸೈಕಲ್ ಮೇಲೆ ತೆರಳುವ ಮುನ್ನ ಚಟುವಟಿಕೆ ಕೇಂದ್ರವಾದ ಸಿದ್ದರಾಮಯ್ಯ ನಿವಾಸ

ಪ್ರತಿಭಟನೆಗೆ ಸೈಕಲ್ ಮೇಲೆ ತೆರಳುವ ಮುನ್ನ ಚಟುವಟಿಕೆ ಕೇಂದ್ರವಾದ ಸಿದ್ದರಾಮಯ್ಯ ನಿವಾಸ
ಪ್ರತಿಭಟನೆಗೆ ಸೈಕಲ್ ಮೇಲೆ ತೆರಳುವ ಮುನ್ನ ಚಟುವಟಿಕೆ ಕೇಂದ್ರವಾದ ಸಿದ್ದರಾಮಯ್ಯ ನಿವಾಸ

ಬೆಂಗಳೂರು,ಜೂ 29(ಯುಎನ್ಐ) ರಾಜ್ಯ ಸರ್ಕಾರದ ವಿರುದ್ಧ ಇಂದು ಬೃಹತ್ ಪ್ರತಿಭಟನೆಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದ ಸೈಕಲ್ ಮೇಲೆ ಹೊರಟರು.

ಕುಮಾರಕೃಪಾ ರಸ್ತೆಯಲ್ಲಿರುವ ಸಿದ್ದರಾಮಯ್ಯ ನಿವಾಸದ ಚಟುವಟಿಕೆಯ ಕೇಂದ್ರವಾಗಿತ್ತು. ಬಿಬಿಎಂಪಿ ಸಿಬ್ಬಂದಿ ಕೂಡ ಸಿದ್ದರಾಮಯ್ಯ ನಿವಾಸ ಮುಂಭಾಗ ಬಿಬಿಎಂಪಿ ಸಿಬ್ಬಂದಿ ಶ್ಯಾನೆ ಟೈಲ್ಸ್ ಮಾಡಿದ್ದು,ಬೆಳಗ್ಗೆಯೇ ವಿವಿಧ ನಾಯಕರು ನಿವಾಸಕ್ಕೆ ಭೇಟಿ ನೀಡಿದರು.

ದೇಶದಲ್ಲಿ ದಿನೇದಿನೇ ಪೆಟ್ರೋಲ್ - ಡಿಸೇಲ್ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸೈಕಲ್ ಸವಾರಿ ಮಾಡಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಗೆ ಸೈಕಲ್ ಮೂಲಕ ಆಗಮಿಸಿ ಇಲ್ಲಿಂದ ಆದಾಯ ತೆರಿಗೆ ಕಚೇರಿಗೆ ಸೈಕಲ್ ಮೇಲೆ ತೆರಳಿ ರ್ಯಾಲಿಯನ್ನು ಉದ್ದೇಶಿಸಿ ಪ್ರತಿಭಟನೆ ನಡೆಸಿದರು..



ಸಿದ್ರಾಮಯ್ಯ ಮನೆಗೆ ಶಾಸಕ ಜಮೀರ್ ಅಹಮ್ಮದ್ ಹಾಗೂ ಮಾಜಿ ಶಾಸಕ ಚೆಲುವರಾಯಸ್ವಾಮಿ ಆಗಮನಿಸಿದ್ದು, ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಕಚೇರಿಗೆ ಸೈಕಲ್ ಮೇಲೆ ಪ್ರಯಾಣ ಬೆಳೆಸಿದರು.ಕೆಪಿಸಿಸಿ ಆಫ್ಟರ್ ಪ್ರಯಾಣ ಬೆಳೆಸುವ ಮುನ್ನ ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸಗಳ ಅಂಗಳದಲ್ಲಿ ಸಿದ್ದರಾಮಯ್ಯ ಓಡಿಸುವ ಪ್ರಯತ್ನ ನಡೆಸಿದರು.

ಮನೆಯಿಂದ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ರಾಮಯ್ಯ, 74 ನೇ ಇಸಿವಿಯಿಂದ ಸೈಕಲ್ ಹೊಡೆದಿರಲಿಲ್ಲ. ಈಗಲೇ ಸೈಕಲ್ ಹೊಡೆದಿರೋದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಬ್ಯಾರಲ್ ಗೆ 130 ರೂ ಡಾಲರ್ ಇದ್ರು ದರ ಏರಿಕೆ ಮಾಡಿದ್ದಾರೆ. ನನ್ನ ಪ್ರಕಾರ ಪೆಟ್ರೋಲ್ ಗೆ 25 ರೂ ಮಾಡಬೇಕಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟಿತ್ತು. ಈಗ ಈ ಸರ್ಕಾರ ಯಾವುದೂ ಕೊಟ್ಟಿಲ್ಲ. ಸಾಮನ್ಯ ಜನರ ಮೇಲೆ ದುಬಾರಿ ಬೆಲೆ ಹಾಕ್ತಿದೆ. ರೈತರಿಗೆ ಹಾಗೂ ಕೈಗಾರಿಕೆಗಳಿಗೆ ಇಂದಿನ ಪರಿಸ್ಥಿತಿ ದುಬಾರಿ ಯಾಗಿದೆ.ಕೋವಿಡ್ ಇದ್ರು ಕಳೆದ 10 ದಿನಗಳಿಂದ 11 ರೂ ಹೆಚ್ಚಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕಿದೆ. ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭ ಟನೆ ಮಾಡ್ತಿವಿ. ಮುಂದಿನ ದಿನಗಳಲ್ಲಿ ಕರೋನ ನಿರ್ವಹಣೆ ಯಲ್ಲಿ ಸರ್ಕಾರ ವಿಫಲ ಆಗಿರುವುದರ ಬಗ್ಗೆಯೂ ಪ್ರತಿಭಟನೆ ಮಾಡ್ತೀವಿ ಎಂದರು.



ಯುಎನ್ಐ ಎಸ್ಎಂಆರ್ ವಿಎನ್ 1345

More News