Sunday, Apr 18 2021 | Time 08:22 Hrs(IST)
Special Share

ಪ್ರಧಾನಿ ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

ಪ್ರಧಾನಿ  ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ
ಪ್ರಧಾನಿ ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

ಶ್ರೀನಗರ, ಫೆ 28(ಯುಎನ್ಐ)- ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ ನರೇಂದ್ರ ಮೋದಿ ಅವರಿಂದ ಜನರು ಕಲಿಯಬೇಕಾಗಿರುವುದು ಬಹಳಷ್ಟಿದೆ. ದೇಶದ ಅತ್ಯುನ್ನತ ಸ್ಥಾನಮಾನ ಪ್ರಧಾನಿ ಮಂತ್ರಿ ಸ್ಥಾನಕ್ಕೆ ಏರಿದ್ದರೂ, ಅವರು ಎಂದೂ ತಮ್ಮ ಮೂಲ ಬೇರುಗಳನ್ನು ಮರೆತಿಲ್ಲ. ತಾವೊಬ್ಬ ‘ಚಾಯ್ ವಾಲಾ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ” ಎಂದು ಹೇಳಿದರು ತಮಗೂ, ಮೋದಿ ಅವರಿಗೂ ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ವ್ಯಕ್ತಿಗತವಾಗಿ ಅವರು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.

ಆದರೆ, ಕೆಲ ವಾರಗಳ ಹಿಂದೆ, ಗುಲಾಮ್ ನಬಿ ಆಜಾದ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿಯುವ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡುತ್ತಾ... ಆಜಾದ್ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು, ತೀವ್ರ ಭಾವೋದ್ವೇಗಕ್ಕೊಳಗಾಗಿ, ಕಣ್ಣೀರು ಹಾಕಿದ್ದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಜಾದ್ ಅವರ ಸ್ಥಾನವನ್ನು ಮತ್ತೊಬ್ಬರು ತುಂಬುವುದು ಕಷ್ಟ ಎಂದು ಪ್ರಧಾನಿ ಹೇಳಿದರು. ಆಜಾದ್, ತಮ್ಮ ಪಕ್ಷದ ಹಿತಾಸಕ್ತಿಗಳ ಜೊತೆಗೆ ರಾಜ್ಯಸಭೆ, ದೇಶದ ಹಿತಾಸಕ್ತಿಗಳಿಗೂ ಆದ್ಯತೆ ನೀಡುತ್ತಿದ್ದರು ಎಂದರು.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಬೇಕು ಎಂದು ಆಜಾದ್ ತಮ್ಮನ್ನು ಕೋರಿದ್ದರು, ಇದರಿಂದ ತಕ್ಷಣವೇ ತಾವು ಸರ್ವಪಕ್ಷಗಳ ಸಭೆ ಕರೆದಿದ್ದಾಗಿ ಪ್ರಧಾನಿ ಸ್ಮರಿಸಿದ್ದರು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಆಜಾದ್ ಕಾಶ್ಮೀರ ಮುಖ್ಯಮಂತ್ರಿಆಗಿದ್ದರು. ತಮ್ಮಿಬ್ಬರ ನಡುವೆ ಉತ್ತಮ ಮಾತುಕತೆ ನಡೆಯುತ್ತಿತ್ತು ಎಂದು ತಿಳಿಸಿದರು. ಕಾಶ್ಮೀರದಲ್ಲಿ ಗುಜರಾತ್ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದಾಗ ತಮಗೆ ಮೊದಲು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದು ಆಜಾದ್ ಎಂದು ಪ್ರಧಾನಿ ನೆನಪಿಸಿಕೊಂಡರು. ಆ ಸಮಯದಲ್ಲಿ ತೀವ್ರ ಉದ್ವೇಗಕ್ಕೊಳಗಾದ ಪ್ರಧಾನಿ, ತಮ್ಮ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ “ಅಧಿಕಾರ ಬರುತ್ತದೆ. ಹೋಗುತ್ತದೆ. ಕೆಲವರಿಗೆ ಆ ಅಧಿಕಾರವನ್ನು ಸರಿಯಾಗಿ ಚಲಾಯಿಸುವುದು ಹೇಗೆ ಎಂಬುದು ಗೊತ್ತಿರುತ್ತದೆ. ಆಜಾದ್ ಅವರಿಗೆ ಅದು ಗೊತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಯುಎನ್ಐ ಕೆವಿಆರ್ 1757

More News
ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

17 Apr 2021 | 9:04 PM

ನವದೆಹಲಿ, ಏ 17( ಯುಎನ್ಐ) ದೇಶದಲ್ಲಿ ಕೋವಿಡ್ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಿಸಲು ಎರಡು ಪ್ರಮುಖ ಕಾರಣಗಳಿವೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಶನಿವಾರ ಹೇಳಿದ್ದಾರೆ.

 Sharesee more..
ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

17 Apr 2021 | 8:07 PM

ಹರಿದ್ವಾರ, ಏ 17( ಯುಎನ್ ಐ) ಕುಂಭ ಮೇಳ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಲಹೆಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂಭ ಮೇಳ ಶನಿವಾರ ಕೊನೆಗೊಂಡಿದೆ ಎಂದು ಜುನಾ ಅಖಾಡಾದ ಸ್ವಾಮಿ ಅವಧೇಶಾನಂದ ಗಿರಿ ಘೋಷಿಸಿದ್ದಾರೆ.

 Sharesee more..

ಕೋವಿಡ್‌ ಎಫೆಕ್ಟ್:‌ ಕರೆನ್ಸಿ ಮುದ್ರಣ ಸ್ಥಗಿತ

16 Apr 2021 | 5:54 PM

 Sharesee more..

ಪವನ್‌ ಕಲ್ಯಾಣ್‌ಗೆ ಕೋವಿಡ್‌ ದೃಢ

16 Apr 2021 | 5:38 PM

 Sharesee more..