Thursday, Aug 13 2020 | Time 20:34 Hrs(IST)
 • ಬರೋಬ್ಬರಿ 10 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ ಫವಾದ್ ಆಲಮ್
 • ರಾಜ್ಯದಲ್ಲಿ 2 ಲಕ್ಷದ ಗಡಿ ದಾಟಿ ಕೋವಿಡ್‌ ಪ್ರಕರಣಗಳು; ಗುಣಮುಖರಾದವರಿಗೆ 1 20 ಲಕ್ಷಕ್ಕೇರಿಕೆ
 • ದಲಿತ ಜಪ ಆರಂಭಿಸಿದ ಬಿ ಎಲ್ ಸಂತೋಷ್: ಸಿದ್ದರಾಮಯ್ಯ ವ್ಯಂಗ್ಯ
 • ದ್ವಿತೀಯ ಟೆಸ್ಟ್ ಗೆ ವರುಣನ ಕಾಟ
 • ಆರ್ಥಿಕತೆ ಸುಧಾರಣೆಗೆ ವುಹಾನ್‌ ಬಿಯರ್‌ ಉತ್ಸವ ಆಯೋಜನೆ
 • ಕೇರಳದಲ್ಲಿ 1,564 ಹೊಸ ಕೊವಿಡ್‍ ಪ್ರಕರಣಗಳು ದೃಢ, ಮೂವರು ಸಾವು
 • ಮನೆ, ಬೆಳೆಹಾನಿ ಕುರಿತ ವರದಿ ಶೀಘ್ರ ಸಲ್ಲಿಸಲು ಸಚಿವ ಜಗದೀಶ್ ಶೆಟ್ಟರ್ ಸೂಚನೆ
 • ನಾನು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರವಲ್ಲ: ಕಟೀಲ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
 • ಚಲನಚಿತ್ರದ ಪೋಷಕ ಕಲಾವಿದರಿಗೆ ಆಲೆಯನ್ಸ್ ವಿವಿಯಿಂದ ಆರ್ಥಿಕ ನೆರವು : ಡಿಸಿಎಂ ಅಶ್ವತ್ಥ್ ನಾರಾಯಣ್
 • ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ
 • ಬಿಡಿಎಲ್‌ನಿಂದ ಸ್ವದೇಶಿ ನಿರ್ಮಿತ ಎರಡು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ರಾಜನಾಥ್‌
 • ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ : ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಚರ್ಚೆ
 • ಆರೋಪಿ ಮನೆಗೆ ಜಮೀರ್ ಹೋಗ್ತಾರೆ ಅಂದರೆ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟ : ಸಚಿವ ಡಾ ಕೆ ಸುಧಾಕರ್
 • ಕೋವಿಡ್‌ ಹಿನ್ನೆಲೆ: ದೇಶಾದ್ಯಂತ ಐತಿಹಾಸಿಕ ದುರ್ಗಾ ಪೂಜೆ ಆಚರಣೆಗೆ ಅಡ್ಡಿ
 • ಕೋವಿಡ್ ಸೋಂಕಿನಿಂದ ಕರುಣ್ ಚೇತರಿಕೆ
National Share

ಪ್ರಧಾನಿ ಮೋದಿ-ಸ್ವೀಡನ್ ದೊರೆ ಭೇಟಿ: ಉಗ್ರ ನಿಗ್ರಹ ಸಹಕಾರಕ್ಕೆ ಸಮ್ಮತಿ

ಪ್ರಧಾನಿ ಮೋದಿ-ಸ್ವೀಡನ್ ದೊರೆ ಭೇಟಿ: ಉಗ್ರ ನಿಗ್ರಹ ಸಹಕಾರಕ್ಕೆ ಸಮ್ಮತಿ
ಪ್ರಧಾನಿ ಮೋದಿ-ಸ್ವೀಡನ್ ದೊರೆ ಭೇಟಿ: ಉಗ್ರ ನಿಗ್ರಹ ಸಹಕಾರಕ್ಕೆ ಸಮ್ಮತಿ

ನವದೆಹಲಿ, ಡಿ ೦೨ (ಯುಎನ್‌ಐ) ಆರು ದಿನಗಳ ಭಾರತ ಪ್ರವಾಸದಲ್ಲಿರುವ ಸ್ವೀಡನ್ ದೊರೆ ಕಾರ್ಲ್ ಗುಸ್ತಾಫ್ ಪತ್ನಿ ಸಿಲ್ವಿಯಾ ಅವರೊಡನೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ಭವಿಷ್ಯದ ಸವಾಲುಗಳನ್ನು ಎದುರಿಸುವಲ್ಲಿ ಉಭಯ ದೇಶಗಳ ನಡುವೆ ಸಹಕಾರಿ ತಂತ್ರಜ್ಞಾನ-ನಾವೀನ್ಯತೆ ನಾಯಕತ್ವದ ಪಾತ್ರದ ಬಗ್ಗೆ ಚರ್ಚಿಸಲಾಗಿದ್ದು, ಉಗರ ನಿಗ್ರಹಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪರಸ್ಪರ ಸಹಕರಿಸಲು ಸಮ್ಮತಿಸಿವೆ.

ನಿಯೋಗ ಮಟ್ಟದ ಮಾತುಕತೆಯಲ್ಲಿ ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಹೆಚ್ಚಿನ ಒಮ್ಮುಖಗಳನ್ನು ನಿರ್ಮಿಸುವ ಬಯಕೆಯನ್ನು ನಾಯಕರು ದೃಢಪಡಿಸಿದರು.

ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ನವೀನ ನೀತಿ ಕುರಿತು ಭಾರತ-ಸ್ವೀಡನ್ ಉನ್ನತ ಮಟ್ಟದ ನೀತಿ ಸಂವಾದದ ಅಧ್ಯಕ್ಷತೆಯನ್ನು ಪ್ರಧಾನಿ ಮತ್ತು ಸ್ವೀಡನ್ ದೊರೆ ವಹಿಸಿದ್ದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ಕಾರ್ಲ್ ಗುಸ್ತಾಫ್ ಮತ್ತು ರಾಣಿ ಸಿಲ್ವಿಯಾ ಸೋಮವಾರ ಬೆಳಿಗ್ಗೆ ಆರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ. ಇದು ಭಾರತಕ್ಕೆ ಅವರ ಮೂರನೇ ಭೇಟಿಯಾಗಿದೆ.

ಪ್ರಧಾನಿ ಭೇಟಿಗೂ ಮುನ್ನ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸ್ವೀಡನ್ ರಾಜದಂಪತಿಯನ್ನು ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದರು.

ಯುಎನ್‌ಐ ಎಸ್‌ಎ ವಿಎನ್ ೧೯೪೬

More News
ತಂದೆ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿರವಾಗಿದೆ: ಅಭಿಜಿತ್ ಮುಖರ್ಜಿ

ತಂದೆ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿರವಾಗಿದೆ: ಅಭಿಜಿತ್ ಮುಖರ್ಜಿ

13 Aug 2020 | 7:13 PM

ನವದೆಹಲಿ, ಆ 13(ಯುಎನ್‍ಐ) ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ದೇಹಸ್ಥಿತಿಯ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ಅವ ರ ಪುತ್ರ ಅಭಿಜಿತ್ ಮುಖರ್ಜಿ ತೆರೆ ಎಳೆದಿದ್ದು,”ತಂದೆಯ ಆರೋಗ್ಯ ಸ್ಥಿರವಾಗಿದೆ” ಎಂದು ಹೇಳಿದ್ದಾರೆ.

 Sharesee more..
ಇಐಎ 2020 ರದ್ದುಗೊಳಿಸಲು ಸೋನಿಯಾ ಒತ್ತಾಯ

ಇಐಎ 2020 ರದ್ದುಗೊಳಿಸಲು ಸೋನಿಯಾ ಒತ್ತಾಯ

13 Aug 2020 | 7:02 PM

ನವದೆಹಲಿ, ಆಗಸ್ಟ್ 13 (ಯುಎನ್‌ಐ) ಕರಡು ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಇಐಎ), 2020 'ಪರಿಸರದ ಮೇಲೆ ಪರಿಣಾಮ ಬೀರುವ 'ವಿನಾಶಕಾರಿ' ಕಾನೂನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದು, ನಿಯಮಗಳು ಮತ್ತು ಅದರ ಅಧಿಸೂಚನೆಯನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ.

 Sharesee more..
ಯುಎಸ್‌ಬಿಗಳಲ್ಲಿ ಸಿಸ್ಟಮ್‌ ಆಧಾರಿತ ಆಸ್ತಿ ವರ್ಗೀಕರಣ ಜಾರಿಗೊಳಿಸಲಿರುವ ಆರ್‌ಬಿಐ

ಯುಎಸ್‌ಬಿಗಳಲ್ಲಿ ಸಿಸ್ಟಮ್‌ ಆಧಾರಿತ ಆಸ್ತಿ ವರ್ಗೀಕರಣ ಜಾರಿಗೊಳಿಸಲಿರುವ ಆರ್‌ಬಿಐ

13 Aug 2020 | 6:54 PM

ಮುಂಬೈ, ಆ 13 (ಯುಎನ್ಐ) ಆಸ್ತಿ ವರ್ಗೀಕರಣ ಪ್ರಕ್ರಿಯೆಯ ದಕ್ಷತೆ, ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಸುಧಾರಿಸಲು, ನಗರ ಸಹಕಾರ ಬ್ಯಾಂಕುಗಳಲ್ಲಿ (ಯುಸಿಬಿ) ಸಿಸ್ಟಮ್ ಆಧಾರಿತ ಆಸ್ತಿ ವರ್ಗೀಕರಣವನ್ನು ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧರಿಸಿದೆ.

 Sharesee more..
ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

13 Aug 2020 | 5:26 PM

ನವದೆಹಲಿ, ಆ 13 (ಯುಎನ್ಐ) ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಿಸುವ ಪ್ರಕ್ರಿಯೆಗೆ ಕೇಂದ್ರ ಮುಂದಾಗಿದೆ. ಈ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಐಟಿ ಮೂಲಸೌಕರ್ಯ ಸ್ಥಾಪನೆಗೆ ಸಂಸ್ಥೆಯೊಂದನ್ನು ಆಯ್ಕೆ ಮಾಡುತ್ತಿದೆ.

 Sharesee more..