Tuesday, Oct 20 2020 | Time 13:50 Hrs(IST)
  • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
  • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
  • ನಾಳೆ ಕೇಂದ್ರ ಸಂಪುಟ ಸಭೆ
  • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
  • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
  • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
  • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
  • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
  • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
  • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
  • ಸಿಎಸ್‌ಕೆ ಸೋಲಿನ ಬಳಿಕ ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾದ ಕೇದಾರ್ ಜಾಧವ್‌
  • ಮೂರು ತಿಂಗಳ ಚಳಿಗಾಲದಲ್ಲಿ ಮತ್ತಷ್ಟು ಕಾಡಲಿರುವ ಕೊರೋನ: ಎಚ್ಚರ, ಎಚ್ಚರ !!
  • ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವೂ ಇಳಿಕೆ
Parliament Share

ಪ್ರಧಾನಿಯೊಂದಿಗೆ ಇಡೀ ದೇಶವೇ ಕೋವಿಡ್‌ ವಿರುದ್ಧ ಹೋರಾಡುತ್ತಿದೆ; ಹರ್ಷವರ್ಧನ್‌

ನವದೆಹಲಿ, ಸೆ 17 (ಯುಎನ್ಐ) ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಇಡೀ ದೇಶವು ಪ್ರಧಾನ ಮಂತ್ರಿಯೊಂದಿಗೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಗುರುವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಸರ್ಕಾರ ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ ಎಂದು ವಿಪಕ್ಷಗಳ ಟೀಕೆಗಳ ಬೆನ್ನಲ್ಲೇ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ಕೋವಿಡ್‌ ಸನ್ನಿವೇಶದ ಕುರಿತ ಚರ್ಚೆಯಲ್ಲಿ ಉತ್ತರಿಸಿದ ಹರ್ಷವರ್ಧನ್‌, ಜನವರಿ 8ರಿಂದ ಪ್ರಧಾನ ಮಂತ್ರಿಗಳು, ಸಚಿವರು ಮತ್ತು ರಾಜ್ಯ ಆರೋಗ್ಯ ಸಚಿವರುಗಳು ಒಟ್ಟಾಗಿ ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ್ದಾರೆ. ಎಲ್ಲಾ ಮುಖ್ಯಮಂತ್ರಿಗಳು ಪ್ರಧಾನಿಯೊಂದಿಗೆ ಕೈಜೋಡಿದ್ದಾರೆ ಎಂದರು.
ಆದರೂ, ಸರ್ಕಾರ ರಾಜ್ಯಗಳನ್ನು ಸಂಪರ್ಕಿಸಿಲ್ಲ ಎಂದು ಆರೋಪ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಜ.30ರಂದು ಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗುವ ಮೊದಲೇ ಎಲ್ಲಾ ಅಗತ್ಯ ಸಲಹೆಗಳು ಮತ್ತು ವಿವರಗಳನ್ನು ನೀಡಲಾಗಿತ್ತು. ನಂತರ ಸೋಂಕಿತರ ಸಂಪರ್ಕ ಪತ್ತೆ ಕೆಲಸ ತ್ವರಿತವಾಗಿ ನಡೆಸಲಾಗಿದೆ. ಮೊದಲ ಸೋಂಕಿತರ 162 ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿತ್ತು. ಈಮೂಲಕ ನಾವು ಸಂಪರ್ಕಿತರ ಪತ್ತೆಯ ಹೊಸ ಅಧ್ಯಾಯ ಬರೆದಿದ್ದೇವೆ ಎಂದು ವಿವರಿಸಿದರು.
ಇಡೀ ಸನ್ನಿವೇಶವನ್ನು ಅವಿರತವಾಗಿ ನಿಭಾಯಿಸುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತಿಹಾಸ ನೆನಪಿಸಿಕೊಳ್ಳಲಿದೆ ಎಂದು ಹೇಳಿದರು.
ಯುಎನ್ಐ ಎಸ್ಎಚ್ 1725
There is no row at position 0.