EntertainmentPosted at: Nov 20 2019 8:43PM Shareಪ್ರಾಮಾಣಿಕ ವ್ಯಕ್ತಿಯನ್ನು ವಿವಾಹವಾಗ ಬಯಸುತ್ತಾರಂತೆ ತಾಪ್ಸಿ ಪನ್ನುಮುಂಬೈ, ನ 20 (ಯುಎನ್ಐ) ಬಾಲಿವುಡ್ ನಟಿ ತಾಪ್ಸಿ ಪನ್ನುಗೆ ಪ್ರಾಮಾಣಿಕ ವ್ಯಕ್ತಿಯನ್ನು ವಿವಾಹವಾಗ ಬಯಸುತ್ತಾರಂತೆ! ಬಾಲಿವುಡ್ ನ ಪ್ರತಿಭಾವಂತ ನಟಿಯರ ಸಾಲಿಗೆ ಸೇರ್ಪಡೆಯಾಗಿರುವ ತಾಪ್ಸಿ ಪನ್ನು ತನ್ನ ಅತ್ಯುದ್ಭತ ನಟನೆಯಿಂದ ಚಿತ್ರರಸಿಕರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ತಾಪ್ಸಿ ತನ್ನ ಸಂಬಂಧಗಳ ಕುರಿತು ಪ್ರತಿಕ್ರಿಯಿಸುತ್ತಾರೆ. ತಾಪ್ಸಿ ಎಂತಹ ಹುಡುಗನೊಂದಿಗೆ ವಿವಾಹವಾಗಲು ಇಚ್ಚಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪರಿಶ್ರಮಪಟ್ಟು ಇಲ್ಲಿಯವರೆಗೆ ತಲುಪಿದ್ದೇನೆ. ನಾನು ಇಂದು ಏನಾಗಿದ್ದೇನೋ ಅದಕ್ಕೆ ನನ್ನ ಶ್ರಮವೇ ಕಾರಣ. ಈ ಉದ್ಯಮದಲ್ಲಿ ನನಗೆ ಯಾವುದೇ ಗಾಡ್ ಫಾದರ್ ಇಲ್ಲ. ತಾನು ಪ್ರಾಮಾಣಿಕವಾಗಿರುವುದರಿಂದ ಅಷ್ಟೇ ಪ್ರಾಮಾಣಿಕವಾಗಿರುವ ವ್ಯಕ್ತಿಯನ್ನು ವಿವಾಹವಾಗ ಬಯಸುತ್ತೇನೆ ಎಂದಿದ್ದಾರೆ. ಯುಎನ್ಐ ಎಸ್ಎಚ್ 2040