Tuesday, Oct 20 2020 | Time 14:39 Hrs(IST)
 • ಇಂದು ಸಂಜೆ 6 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಮುತ್ತಯ್ಯ ಮುರಳೀಧರನ್ ಮನವಿಗೆ ಸಮ್ಮತಿಸಿದ ತಮಿಳು ನಟ ವಿಜಯ್ ಸೇತುಪತಿ
 • ಚಾಲಕರ ಸುಲಿಗೆ ಮಾಡಲು ಸರ್ಕಾರ ಪೊಲೀಸರಿಗೆ ದಂಡ ಶುಲ್ಕ ವಸೂಲಾತಿಗೆ ಟಾರ್ಗೆಟ್ ನೀಡಿದೆ : ಎಚ್ ಡಿ ಕುಮಾರಸ್ವಾಮಿ
 • ಬೆಸ್ಕಾಂ ಮೂಲಕ ಸರ್ಕಾರದ ಡೆಪಾಜಿಟ್ ದಂಧೆ : ಆಮ್ ಆದ್ಮಿ ಪಕ್ಷದ ಆರೋಪ
 • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
 • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
 • ನಾಳೆ ಕೇಂದ್ರ ಸಂಪುಟ ಸಭೆ
 • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
 • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
 • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
 • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
 • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
 • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
 • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
Sports Share

ಫಿಫಾ ಶ್ರೇಯಾಂಕ: ಬೆಲ್ಜಿಯಂ ಅಗ್ರ ಸ್ಥಾನ

ದುಬೈ, ಸೆ.18 (ಯುಎನ್ಐ)- ಫಿಫಾ ಪುರುಷರ ಫುಟ್ಬಾಲ್ ವಿಶ್ವ ಶ್ರೇಯಾಂಕ ಪಟ್ಟಿ ಐದು ತಿಂಗಳಲ್ಲಿ ಮೊದಲ ಬಾರಿಗೆ ಬಿಡುಗಡೆ ಆಗಿದ್ದು, ಬೆಲ್ಜಿಯಂ ಅಗ್ರ ಸ್ಥಾನದಲ್ಲಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆರು ತಿಂಗಳಿಗಿಂತ ಹೆಚ್ಚು ವಿರಾಮದ ನಂತರ, ಅಂತಾರಾಷ್ಟ್ರೀಯ ಪಂದ್ಯಗಳು ಅಂತಿಮವಾಗಿ ಸೆಪ್ಟೆಂಬರ್ ಆರಂಭದಲ್ಲಿ ಯುರೋಪಿನಾದ್ಯಂತ ಯುಇಎಫ್ಎ ನೇಷನ್ಸ್ ಲೀಗ್ ಪಂದ್ಯಗಳೊಂದಿಗೆ ಪುನರಾರಂಭಗೊಂಡಿವೆ. ಇದು ವಿಶ್ವ ಶ್ರೇಯಾಂಕದ ಮೇಲೆ ತಕ್ಷಣದ ಪರಿಣಾಮ ಬೀರಿದೆ.

ಆದರೆ ಪ್ರಮುಖ ತಂಡಗಳ ಮೇಲೆ ಇದರ ಯಾವುದೇ ಪರಿಣಾಮ ಬೀರಿಲ್ಲ. ಬೆಲ್ಜಿಯಂ, ಫ್ರಾನ್ಸ್, ಬ್ರೆಜಿಲ್ ಮತ್ತು ಇಂಗ್ಲೆಂಡ್ ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಗುರುವಾರ ಬಿಡುಗಡೆಯಾದ ರ್ಯಾಂಕಿಂಗ್‌ನಲ್ಲಿ ಪೋರ್ಚುಗಲ್ ಐದನೇ ಸ್ಥಾನಕ್ಕೆ ತಲುಪಿದೆ.

ಉಳಿದಂತೆ ಸ್ಪೇನ್ (7 ನೇ, ಒಂದು), ಇಟಲಿ (12 ನೇ, ಒಂದು), ನೆದರ್ಲ್ಯಾಂಡ್ಸ್ (13 ನೇ, ಒಂದು), ಮತ್ತು ಜರ್ಮನಿ (14 ನೇ, ಒಂದು ಮೇಲಕ್ಕೆ), ಪ್ರತಿಯೊಂದೂ ಜಾಗತಿಕ ಮಟ್ಟದಲ್ಲಿ ಒಂದು ಸ್ಥಾನವನ್ನು ಜಿಗಿತ ಕಂಡಿವೆ.

ಈ ಆವೃತ್ತಿಯಲ್ಲಿ ರಷ್ಯಾ ಭಾರೀ ಏರಿಕೆ ಕಂಡಿದೆ. ಸೆರ್ಬಿಯಾ (31 ನೇ ಸ್ಥಾನ) ಎರಡು ಸ್ಥಾನ ಕುಸಿತ ಕಂಡಿದೆ. ಮತ್ತು ಹಂಗೇರಿ (52) ಶ್ರೇಯಾಂಕದಲ್ಲಿ ಬದಲಾವಣೆ ಇಲ್ಲ.

ಏಷ್ಯಾದಲ್ಲಿ ಜಪಾನ್ ಅತಿ ಹೆಚ್ಚು ಶ್ರೇಯಾಂಕಿತ ತಂಡವಾಗಿದ್ದು, 28 ನೇ ಸ್ಥಾನದಲ್ಲಿದ್ದರೆ, ಚೀನಾ 76 ನೇ ಸ್ಥಾನದಲ್ಲಿದೆ. ಇರಾನ್ ಮೂರು ಸ್ಥಾನ ಜಿಗಿತ ಕಂಡಿದ್ದು ಸದ್ಯ 30ನೇ ಸ್ಥಾನದಲ್ಲಿದೆ.

ಯುಎನ್ಐ ವಿಎನ್ಎಲ್ 1542