Monday, Jan 20 2020 | Time 23:54 Hrs(IST)
 • ಚಲೋ ಅಸೆಂಬ್ಲಿ ಪ್ರತಿಭಟನೆ: ಪೂರ್ವ ಗೋದಾವರಿಯಲ್ಲಿ 64 ಟಿಡಿಪಿ ನಾಯಕರ ಗೃಹಬಂಧನ
 • ವಿಪಕ್ಷಗಳ ನಡೆ ಕುರಿತು ಮೋದಿ ವಾಗ್ದಾಳಿ
 • ರಣಜಿ ಟ್ರೋಫಿ : ವೇಗಿ ಇಶಾಂತ್‌ ಶರ್ಮಾಗೆ ಗಾಯ
 • ಸಿಎಎ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ: ಸರ್ಕಾರದ ವಿವರಣೆ ತಿರಸ್ಕರಿಸಿದ ರಾಜ್ಯಪಾಲ
 • ರಣಜಿ ಟ್ರೋಫಿ: ಮನೋಜ್ ತಿವಾರಿ ಚೊಚ್ಚಲ ತ್ರಿಶತಕ
 • ಸೇನಾ ನೆಲೆಗಳ ಮೇಲೆ ಉಗ್ರರ ಗ್ರೆನೇಡ್ ದಾಳಿ
 • ಸಜೀವ ಬಾಂಬ್ ಪ್ರಕರಣ ಶೀಘ್ರ ತನಿಖೆಯಾಗಲಿ, ಇಲ್ಲದಿದ್ದರೆ ಕತೆ ಕಟ್ಟುವ ಸಾಧ್ಯತೆ; ಎಚ್‌ ಡಿ ಕುಮಾರಸ್ವಾಮಿ
 • ಜಮ್ಮು ಕಾಶ್ಮೀರ ಸಮಗ್ರ ಅಭಿವೃದ್ಧಿಗೆ ಕೇಂದ್ರ ಬದ್ಧ : ಸಾರಂಗಿ
 • ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ, ಸತ್ಯಾಸತ್ಯತೆ ಬಯಲಿಗೆಳೆಯಲು ಎಸ್ ಡಿ ಪಿ ಐ ಆಗ್ರಹ
 • ಸಾಯಿ ಬಾಬಾ ಜನ್ಮಸ್ಥಳದ ಕುರಿತ ವಿವಾದಿತ ಹೇಳಿಕೆ ಹಿಂಪಡೆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
 • ರೋಡ್ ಷೋ ವಿಳಂಬ, ನಾಮಪತ್ರ ಸಲ್ಲಿಸಲು ವಿಫಲರಾದ ಕೇಜ್ರಿವಾಲ್
 • ಕೆಪಿಸಿಸಿ ನಾಯಕತ್ವ: ಸಿದ್ದರಾಮಯ್ಯ ವಿರುದ್ಧವೇ ಸ್ವಪಕ್ಷ ಕಾರ್ಯಕರ್ತರ ಪ್ರತಿಭಟನೆ
 • ದೇಶದಲ್ಲಿ 3 ಕೋಟಿ ನಕಲಿ ಪಡಿತರ ಚೀಟಿ ಪತ್ತೆ : ಪಾಸ್ವಾನ್
 • ನಿರ್ಭಯ ಪ್ರಕರಣ: ಅಪ್ರಾಪ್ತ ಮನವಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್
 • ಜೆ ಪಿ ನಡ್ಡಾಗೆ ಮಧ್ಯ ಪ್ರದೇಶ ಸಿಎಂ ಕಮಲನಾಥ್ ಅಭಿನಂಧನೆ !
Special Share

ಫೆಬ್ರವರಿ ಕೊನೆ ವಾರದಲ್ಲಿ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಟ್ರಂಪ್ ?

ಫೆಬ್ರವರಿ ಕೊನೆ ವಾರದಲ್ಲಿ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಟ್ರಂಪ್ ?
ಫೆಬ್ರವರಿ ಕೊನೆ ವಾರದಲ್ಲಿ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಟ್ರಂಪ್...?

ನವದೆಹಲಿ, ಜ ೧೪ (ಯುಎನ್‌ಐ) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಟ್ರಂಪ್ ಭಾರತ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ವಾಷಿಂಗ್ಟನ್‌ನಿಂದ ಭದ್ರತಾ ಹಾಗೂ ಲಾಜಿಸ್ಟಿಕ್ ತಂಡಗಳು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿವೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಟ್ರಂಪ್ ಭಾರತ ಭೇಟಿಯ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಟ್ರಂಪ್ ಭಾರತ ಭೇಟಿಯ ಸಾಧ್ಯತೆಯನ್ನು ಅಮೆರಿಕಾದ ಅಧಿಕೃತ ಮೂಲಗಳು ಖಚಿತಪಡಿಸಿವೆ.

ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಡೋನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಕೋರಿದ್ದರು ಆದರೆ, ಟ್ರಂಪ್ ನಿರಾಕರಿದ್ದರು ಎಂದು ವರದಿಯಾಗಿದೆ. ಆದರೆ, ತಮ್ಮ ಭಾರತ ಭೇಟಿಗೆ ಶೀಘ್ರದಲ್ಲಿಯೇ ವ್ಯವಸ್ಥೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಶ್ವೇತ ಭವನ ಮೂಲಗಳು ಹೇಳಿವೆ

ಜನವರಿ ೭ ರಂದು ನಡೆದ ದೂರವಾಣಿ ಮಾತುಕತೆಯಲ್ಲಿ ಪ್ರಧಾನಿ ಮೋದಿ ಈ ಅಂಶವನ್ನು ಪ್ರಸ್ತಾಪಿಸಿದ್ದರು ಎಂದು ವರದಿಯಾಗಿದೆ.

ಅಮೆರಿಕಾ ಅಧ್ಯಕ್ಷರು ಫೆಬ್ರವರಿ ಕೊನೆಯ ವಾರದಲ್ಲಿ ಭಾರತ ಭೇಟಿ ಸಾಧ್ಯವಾಗಬಹುದು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷಿ ಶ್ರೀಂಗ್ಲಾ ತಿಳಿಸಿದ್ದಾರೆ. ತಮ್ಮ ಭಾರತ ಪ್ರವಾಸಕ್ಕೆ ವ್ಯವಸ್ಥೆ ಮಾಡುವಂತೆ ಟ್ರಂಪ್ ಈಗಾಗಲೇ ತಮ್ಮ ತಂಡಕ್ಕೆ ಸೂಚನೆ ನೀಡಿದ್ದಾರೆ ಅವರು ಹೇಳಿದ್ದಾರೆ.

ಟ್ರಂಪ್ ಭಾರತ ಭೇಟಿಯ ವೇಳೆ ಉಭಯ ದೇಶಗಳ ನಡುವೆ ೨೦೧೮ರಿಂದ ಬಾಕಿ ಉಳಿದುಕೊಂಡಿರುವ ಹಲವು ವ್ಯಾಪಾರ ಒಪ್ಪಂದಗಳು ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. ಜೂನ್ ೨೦೧೯ ರಲ್ಲಿ ಭಾರತಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಅಮೆರಿಕಾ ರದ್ದುಗೊಳಿಸಿತ್ತು, ಅದು ಪುನರುಜ್ಜೀವನಗೊಳ್ಳುವ ಸಾಧ್ಯತೆಯಿದೆ. ಅಮೆರಿಕಾದಲ್ಲಿ ಭಾರತದ ಹೂಡಿಕೆಗಳು ಮತ್ತು ತೈಲ ಉತ್ಪನ್ನಗಳ ಆಮದನ್ನು ಹೆಚ್ಚಿಸುವ ಬಗ್ಗೆ ಮಾತುಕತೆಗಳು ನಡೆಯುವ ನಿರೀಕ್ಷೆಯಿದೆ.

ಯುಎನ್ ಐ ಕೆವಿಆರ್ ೧೫೦೪

More News

ಸಿದ್ಧಿವಿನಾಯಕನಿಗೆ 35 ಕೆಜಿ ಚಿನ್ನ

20 Jan 2020 | 11:26 PM

 Sharesee more..

Kerala Governor rejects Govt's explanation over CAA

20 Jan 2020 | 11:16 PM

 Sharesee more..

ಶಬರಿಮಲೆಯ ಅಯ್ಯಪ್ಪ ದರ್ಶನಾವಧಿ ಮುಕ್ತಾಯ

20 Jan 2020 | 11:07 PM

 Sharesee more..

Ayyappa temple at Sabarimala closed

20 Jan 2020 | 11:05 PM

 Sharesee more..