Saturday, Nov 23 2019 | Time 04:40 Hrs(IST)
  • ಜಾರ್ಖಂಡ್: ಲತೇಹಾರ್‌ನಲ್ಲಿ ನಕ್ಸಲರೊಂದಿಗೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್‌ ಹುತಾತ್ಮ
  • ಆಸ್ಟ್ರೇಲಿಯಾದ ಇಬ್ಬರು ಸಚಿವರೊಂದಿಗೆ ಪೋಖ್ರಿಯಾಲ್‍ ದ್ವಿಪಕ್ಷೀಯ ಮಾತುಕತೆ
Sports Share

ಫ್ರೆೆಂಚ್ ಓಪನ್ ಮೇಲೆ ಸಿಂಧು ಕಣ್ಣು

ಪ್ಯಾಾರಿಸ್, ಅ 21 (ಯುಎನ್‌ಐ) ಕಳೆದ ಚೀನಾ ಹಾಗೂ ಕೊರಿಯಾ ಓಪನ್ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿದ್ದ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ನಾಳೆಯಿಂದ ಫ್ರಾನ್ಸ್‌‌ನಲ್ಲಿ ಆರಂಭವಾಗುವ ಫ್ರೆೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ ಆಗಸ್‌ಟ್‌‌ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಒಲಿಂಪಿಕ್‌ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರು ಕಳೆದ ಚೀನಾ ಹಾಗೂ ಕೊರಿಯಾ ಓಪನ್ ಎರಡರಲ್ಲೂ ಸೋತು ಹೊರ ನಡೆದಿದ್ದರು. ಚೀನಾ ಓಪನ್‌ನಲ್ಲಿ ಎರಡನೇ ಸುತ್ತಿನಲ್ಲಿ ಹಾಗೂ ಕೊರಿಯಾ ಓಪನ್‌ನಲ್ಲಿ ಮೊದಲನೇ ಸುತ್ತಿನಲ್ಲಿ ನಿರ್ಗಮಿಸಿದ್ದರು. ಸಿಂಧು ಮೊದಲನೇ ಸುತ್ತಿನಲ್ಲಿ ಕೆನಡಾದ ವಿಶ್ವ 9ನೇ ಶ್ರೇಯಾಂಕಿತೆ ಮಿಚೆಲ್ಲೆೆ ಲೀ ವಿರುದ್ಧ ಅಭಿಯಾನ ಶುರು ಮಾಡಲಿದ್ದಾರೆ.
ಭಾರತದ ಮತ್ತೊರ್ವ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸದ್ಯ ಫಿಟ್ನೆೆಸ್ ಸಮಸ್ಯೆ ಎದುರಿಸುತ್ತಿದ್ದು, ಕಳೆದ ಮೂರು ಟೂರ್ನಿಗಳಲ್ಲಿ ಮೊದಲನೇ ಸುತ್ತಿನಲ್ಲಿ ಔಟ್ ಆಗಿದ್ದರು. ಮೊದಲನೇ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಚೆಯಾಂಗ್ ನಗನ್ ಯೀ ವಿರುದ್ಧ ಸೆಣಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ಅವರು ಹಾಂಕಾಂಗ್‌ನ ಎನ್.ಜಿ ಕಾ ಲಾಂಗ್ ಅಂಗುಸ್ ವಿರುದ್ಧ ಆಡಲಿದ್ದಾರೆ. ಸಮೀರ್ ವರ್ಮಾ ಅವರು ಜಪಾನ್‌ನ ಕೆಂಟಾ ನಿಶಿಮೋಟಾ ವಿರುದ್ಧ ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಬಿ. ಸಾಯಿ ಪ್ರಣೀತ್ ಅವರು ಆರಂಭಿಕ ಸುತ್ತಿನಲ್ಲಿ ಚೀನಾದ ಲಿನ್ ಡಾನ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಯುಎನ್‌ಐ ಆರ್ ಕೆ 2207