Thursday, Jan 21 2021 | Time 03:29 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Special Share

ಫ್ರಾನ್ಸ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಗಳ ಜಪ್ತಿ

ಫ್ರಾನ್ಸ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಗಳ ಜಪ್ತಿ
ಫ್ರಾನ್ಸ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಗಳ ಜಪ್ತಿ

ನವದೆಹಲಿ, ಡಿ 4(ಯುಎನ್ಐ) ಬ್ಯಾಂಕುಗಳಿಂದ ಪಡೆದ ಸಾವಿರಾರು ಕೋಟಿ ರೂ ಸಾಲ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯಮಲ್ಯ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬೆನ್ನಿತ್ತಿದೆ. ಫ್ರಾನ್ಸ್‌ನಲ್ಲಿ ಮಲ್ಯ ಹೊಂದಿದ್ದ ಸುಮಾರು 1.6 ಮಿಲಿಯನ್ ಯೂರೋ ಮೌಲ್ಯದ ಆಸ್ತಿಯನ್ನು ಶುಕ್ರವಾರ ವಶಪಡಿಸಿಕೊಂಡಿದೆ. ಇ ಡಿ ಮಾಡಿದ ಮನವಿಯಂತೆ ಫ್ರಾನ್ಸ್ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯಡಿ ಪ್ಯಾರೀಸ್ 32 ಅವೆನ್ಯೂ ಫೋಚ್‌ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಭಾರತೀಯ ಕರೆನ್ಸಿಯಲ್ಲಿ ವಶಪಡಿಸಿಕೊಂಡ ಆಸ್ತಿಗಳ ಮೌಲ್ಯ ಸುಮಾರು 14 ಕೋಟಿ ರೂ ಮೌಲ್ಯದ್ದಾಗಿದೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆಗಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ಬ್ಯಾಂಕುಗಳಿಂದ ತೆಗೆದುಕೊಂಡ ಬೃಹತ್ ಮೊತ್ತದ ಸಾಲಗಳನ್ನು ಮರುಪಾವತಿಸದೆ ವಿಜಯ ಮಲ್ಯ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಬ್ಯಾಂಕುಗಳಿಗೆ ಅಸಲು, ಬಡ್ಡಿ ಸೇರಿದಂತೆ ಒಟ್ಟು 9,000 ಕೋಟಿ ರೂ. ಪಾವತಿಸಬೇಕಿದೆ. ಮಲ್ಯರನ್ನು ಲಂಡನ್‌ನಿಂದ ಹಸ್ತಾಂತರಿಸಿಕೊಳ್ಳಲು ಭಾರತ ಸರ್ಕಾರ ತೀವ್ರವಾಗಿ ಶ್ರಮಿಸುತ್ತಿದೆ. 2016 ರ ಮಾರ್ಚ್ ನಿಂದ ಮಲ್ಯ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಜಾಮೀನು ಮೇಲಿರುವ ಅವರನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳಲು ಕಾನೂನು ತೊಡಕುಗಳಿದ್ದು, ಪರಿಹರಿಸಿದ ನಂತರ ಮಲ್ಯ ಅವರನ್ನು ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುಎನ್ಐ ಕೆವಿಆರ್ 2030

More News
ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

20 Jan 2021 | 3:56 PM

ನವದೆಹಲಿ, ಜ 20(ಯುಎನ್ಐ)- ಸ್ವಯಂ ಘೋಷಿತ ಆಧ್ಯಾತ್ಮಿಕ ಗುರುಗಳು ನಡೆಸುತ್ತಿರುವ ಆಶ್ರಮಗಳ ವಿರುದ್ಧ ಕ್ರಮ ಜರುಗಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಖಟ್ಲೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

 Sharesee more..