SportsPosted at: Jan 21 2021 8:07PM Shareಫ್ರ್ಯಾಂಚೈಸ್ ಕ್ರಿಕೆಟ್ ನಿಂದ ಹಿಂದೆ ಸರಿದ ಲಸಿತ್ ಮಾಲಿಂಗ್ನವದೆಹಲಿ, ಜ.21 (ಯುಎನ್ಐ)- ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಇನ್ನು ಮುಂದೆ ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಅವರ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಈ ಮಾಹಿತಿ ನೀಡಿದೆ. ಮಾಲಿಂಗ ಐಪಿಎಲ್ 2020 ರಲ್ಲಿ ಆಡಿರಲಿಲ್ಲ ಮತ್ತು ಮುಂಬೈ ಅವರನ್ನು ಐಪಿಎಲ್ 2021 ಋತುವಿನಲ್ಲಿ ಉಳಿಸಿಕೊಂಡಿರಲಿಲ್ಲ. ಐಪಿಎಲ್ 2021 ಗೆ ಲಭ್ಯವಿಲ್ಲದಿರುವ ಬಗ್ಗೆ ಮಾಲಿಂಗ ಈ ತಿಂಗಳ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು. ಮತ್ತು ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಂತೆ ಕೇಳಿಕೊಂಡಿದ್ದರು. ಮಾಲಿಂಗ ತಮ್ಮ ಹೇಳಿಕೆಯಲ್ಲಿ, "ಕುಟುಂಬದೊಂದಿಗೆ ಚರ್ಚಿಸಿದ ನಂತರ, ಎಲ್ಲಾ ಫ್ರ್ಯಾಂಚೈಸ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಕೊರೋನಾ ಸಾಂಕ್ರಾಮಿಕದ ಸಂದರ್ಭಗಳು ಮತ್ತು ಪ್ರಯಾಣದ ನಿಷೇಧವು ನನ್ನ ವೈಯಕ್ತಿಕ ಸಂದರ್ಭಗಳಿಂದಾಗಿ ಮುಂದಿನ ವರ್ಷ ಫ್ರ್ಯಾಂಚೈಸ್ ಕ್ರಿಕೆಟ್ನಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನನಗೆ ಕಷ್ಟವಾಗಿದ್ದು, ಈ ನಿರ್ಧಾರ ಕೈಗೊಂಡಿದ್ದೇನೆ” ಎಂದಿದ್ದಾರೆ. “ಅಂಬಾನಿ ಕುಟುಂಬಕ್ಕೆ, ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸ್ನ ಎಲ್ಲ ಸದಸ್ಯರಿಗೆ ಮತ್ತು ನಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ಮುಂಬೈ ಇಂಡಿಯನ್ಸ್ ನನ್ನನ್ನು ಕುಟುಂಬದವರಂತೆ ನೋಡಿಕೊಂಡರು. ಮೈದಾನದಲ್ಲಿ ಮತ್ತು ಹೊರಗೆ ಇರುವ ಪ್ರತಿಯೊಂದು ಪರಿಸ್ಥಿತಿಯಲ್ಲೂ 100 ಪ್ರತಿಶತದಷ್ಟು ಬೆಂಬಲವನ್ನು ನೀಡಿತು. ಮತ್ತು ಮೈದಾನದಲ್ಲಿ ನನ್ನ ನೈಜ ಆಟವನ್ನು ಆಡಲು ಯಾವಾಗಲೂ ನನಗೆ ಧೈರ್ಯ ಮತ್ತು ಸ್ವಾತಂತ್ರ್ಯವನ್ನು ನೀಡಿತು. ವಿಶ್ವ ಕ್ರಿಕೆಟ್ನ ಅತ್ಯುತ್ತಮ ಫ್ರ್ಯಾಂಚೈಸ್ಗಾಗಿ ಇಷ್ಟು ದಿನ ಆಡಿದ್ದಕ್ಕೆ ತುಂಬಾ ಕೃತಜ್ಞರಾಗಿರಬೇಕು” ಎಂದು ತಿಳಿಸಿದ್ದಾರೆ. ಯುಎನ್ಐ ವಿಎನ್ಎಲ್ 2005