Saturday, Feb 29 2020 | Time 15:13 Hrs(IST)
 • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
 • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
 • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
 • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
 • ಮೈಸೂರಿನಲ್ಲಿ ಇಬ್ಬರು ಬಾಂಗ್ಲಾ ದೇಶ ಅಕ್ರಮ ವಲಸಿಗರ ಬಂಧನ
 • ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ
 • ಪ್ರಧಾನಿ ಆಗಮನಕ್ಕೂ ಮುನ್ನ ಪ್ರಯಾಗ್ ರಾಜ್ ನಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ
Special Share

ಬುಕ್ಕಿ ಸಂಜೀವ್ ಚಾವ್ಲಾ ಇಂಗ್ಲೇಡ್ ನಿಂದ ಭಾರತಕ್ಕೆ ಹಸ್ತಾಂತರ

ಬುಕ್ಕಿ ಸಂಜೀವ್ ಚಾವ್ಲಾ ಇಂಗ್ಲೇಡ್ ನಿಂದ ಭಾರತಕ್ಕೆ ಹಸ್ತಾಂತರ
ಬುಕ್ಕಿ ಸಂಜೀವ್ ಚಾವ್ಲಾ ಇಂಗ್ಲೇಡ್ ನಿಂದ ಭಾರತಕ್ಕೆ ಹಸ್ತಾಂತರ

ನವದೆಹಲಿ, ಫೆ 13( ಯುಎನ್ಐ) ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರು ಭಾಗಿಯಾಗಿದ್ದ, 2000 ಇಸವಿಯಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ಪ್ರಮುಖ ಬುಕ್ಕಿ ಸಂಜೀವ್ ಚಾವ್ಲಾ ನನ್ನು ಇಂಗ್ಲೆಡ್ ನಿಂದ ಗುರುವಾರ ಬೆಳಗ್ಗೆ ಭಾರತಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ.

ಡಿಸಿಪಿಯೊಬ್ಬರ ನೇತೃತ್ವದ ದೆಹಲಿ ಅಪರಾಧ ವಿಭಾಗ ಪೊಲೀಸರ ತಂಡವೊಂದು, ಹೈಪ್ರೊಫೈಲ್ ಆರೋಪಿಯನ್ನು ಕರೆತರಲು ಲಂಡನ್ ಗೆ ತೆರಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಸಂಜೀವ್ ಚಾವ್ಲಾ ಅವರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

50ರ ಹರೆಯದ ಸಂಜೀವ್‌ ಚಾವ್ಲಾ 2000ದಲ್ಲಿ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೆ ಭಾಗಿಯಾಗಿದ್ದ ಮ್ಯಾಚ್‌ ಫಿಕ್ಸಿಂಗ್‌ ಹಗರಣದ ಪ್ರಮುಖ ಆರೋಪಿಯಾಗಿದ್ದ.

ಬಲಗೈ ಬ್ಯಾಟ್ಸ್ ಮನ್ ಹ್ಯಾನ್ಸಿ ಕ್ರೋನಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದರು, ನಂತರ ಅವರು 2002ರಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

ಮ್ಯಾಚ್ ಫಿಕ್ಸಿಂಗ್ ಸಂಬಂಧ ಕ್ರೋಂಜೆ ಹಾಗೂ ಚಾವ್ಲಾ ನಡುವಣ ನಡೆದ ದೂರವಾಣಿ ಸಂಭಾಷಣೆ ಕದ್ದಾಲಿಕೆಯ ನಂತರ ಅಪರಾಧ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು.

ಭಾರತಕ್ಕೆ ತಮ್ಮನ್ನು ಹಸ್ತಾಂತರಿಸುವುದನ್ನು ತಪ್ಪಿಸಿಕೊಳ್ಳಲು ಸಂಜೀವ್ ಚಾವ್ಲಾ ಮಾನವ ಹಕ್ಕುಗಳ ಐರೋಪ್ಯ ನ್ಯಾಯಾಲಯ( ಇ ಸಿ ಹೆಚ್ ಆರ್)ದ ಮೊರೆ ಹೋಗಿದ್ದರು. ಆದರೆ ಅದು ಆರ್ಜಿಯನ್ನು ತಿರಸ್ಕರಿಸಿ ಭಾರತಕ್ಕೆ ಹಸ್ತಾಂತರಿಸಲು ಅವಕಾಶ ಮಾಡಿಕೊಟ್ಟಿತ್ತು

ಮಾನವ ಹಕ್ಕುಗಳ ಆಧಾರದ ಮೇಲೆ ಚಾವ್ಲಾ ಸಲ್ಲಿಸಿದ್ದ ಮನವಿಯನ್ನು ಲಂಡನ್ ಹೈಕೋರ್ಟ್ ಸಹ ಜನವರಿ 23 ರಂದು ತಿರಸ್ಕರಿಸಿ, ಭಾರತಕ್ಕೆ ಗಡೀಪಾರು ಮಾಡಲು 28 ದಿನಗಳ ಗಡುವು ವಿಧಿಸಿತ್ತು

ಸಂಜೀವ್ ಚಾವ್ಲಾ ನಿಗೆ ಸೂಕ್ತ ಭದ್ರತೆ ಹಾಗೂ ಸುರಕ್ಷತೆಯತೆಯಡಿ ಕಾರಾಗೃಹದಲ್ಲಿ ಏಕಾಂತವಾಗಿರಿಸಲಾಗುವುದು ಎಂದು ಭಾರತ ನೀಡಿದ ಭರವಸೆಯನ್ನು ಅಂಗೀಕರಿಸಿರುವುದಾಗಿ ಇಬ್ಬರು ಸದಸ್ಯರ ಹೈಕೋರ್ಟ್ ಸಮಿತಿ ಹೇಳಿತ್ತು.

ಯುಎನ್ಐ ಕೆವಿಆರ್ 1727