Saturday, Oct 24 2020 | Time 20:15 Hrs(IST)
 • ಜಂಬೂಸವಾರಿ 40 ನಿಮಿಷಕ್ಕೆ ಸೀಮಿತ: 300 ಜನರಿಗೆ ಮಾತ್ರ ಪ್ರವೇಶ; ಡಾ ಚಂದ್ರಗುಪ್ತ
 • ಎನ್‌ಸಿಬಿ ಅಧಿಕಾರಿಗಳ ಸೋಗಿನಲ್ಲಿ ಬೆಳ್ಳುಳ್ಳಿಯ ವ್ಯಾಪಾರಿಯ ದರೋಡೆ
 • ಚರ್ಚ್ ಕುಸಿದು 22 ಮಂದಿ ಸಾವು
 • ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು: ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ
 • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
 • ತಿರುಪತಿ ತಿಮ್ಮಪ್ಪ ದೇಗಲ ಪ್ರಸಾದ ತಯಾರಿಕ ಕೇಂದ್ರದಲ್ಲಿ ಸ್ಪೋಟ- ಐವರು ಕಾರ್ಮಿಕರಿಗೆ ಗಾಯ
 • ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ
 • ಗುಜರಾತ್‌; ಕಿಸಾನ್‌ ಸೂರ್ಯೋದಯ ಸೇರಿ ಮೂರು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
 • ಕೆಲವೆಡೆ ಆಯುಧ ಪೂಜೆ, ಇನ್ನೂ ಕೆಲವೆಡೆ ಸಿದ್ಧತೆ: ಕಾರ್ಮಿಕರಿಗಿಲ್ಲ ಬೋನಸ್ !!!
Karnataka Share

ಬೆಂಗಳೂರಿನ ಗಾಂಧಿಕೃಷಿ ವಿಜ್ಞಾನ ಕೇಂದ್ರದ ಜೀವವೈವಿಧ್ಯ ಪಾರಂಪರಿಕ ತಾಣ ಅನನ್ಯ: ಅಶೀಸರ

ಬೆಂಗಳೂರು,. ಸೆ 18 [ಯುಎನ್ಐ] ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪಾರಂಪರಿಕ ಜೀವವೈವಿಧ್ಯತಾಣ ದೇಶದ ಎಲ್ಲಾ ಕೃಷಿ ವಿ.ವಿಗಳಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.
ವಿನಾಶದ ಅಂಚಿನ ಸಸ್ಯವರ್ಗ ಸೇರಿ ಒಂದು ಲಕ್ಷ ಗಿಡಮರಗಳ ಅನನ್ಯಜೀವವೈವಿಧ್ಯ ಭಂಡಾರ ಇಲ್ಲಿದೆ. ಬೆಂಗಳೂರು ಮಹಾನಗರಕ್ಕೆ ಜಿ.ಕೆ.ವಿ.ಕೆ. ಜೈವಿಕತಾಣ ನೀಡುವ ಆಮ್ಲಜನಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ತಾಣದ ಸಂಪೂರ್ಣ ಸಂರಕ್ಷಣೆಗೆ ನಿರಂತರ ಕ್ರಮಕೈಗೊಂಡಿರುವ ಕೃಷಿ ವಿಶ್ವವಿದ್ಯಾಲಯ ಅಭಿನಂದನೆಗೆ ಅರ್ಹ ಎಂದಿದ್ದಾರೆ.
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಜೀವವೈವಿಧ್ಯ ಪಾರಂಪರಿಕ ತಾಣಕ್ಕೆತಜ್ಞರು, ಅಧಿಕಾರಿಗಳ ತಂಡದ
ಜೊತೆ ಭೇಟಿ ನೀಡಿ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಜೀವವೈವಿಧ್ಯತಾಣ ಪರಿಸ್ಥಿತಿ ಕುರಿತ ಸಮಾಲೋಚನಾ ಸಭೆಯಲ್ಲಿ ಕೃಷಿ ಜೀವವೈವಿಧ್ಯ ಅಧ್ಯಯನಕ್ಕೆ ಜಿ.ಕೆ.ವಿ.ಕೆ ತನ್ನ ಗಣನೀಯ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ|ರಾಜೇಂದ್ರ ಪ್ರಸಾದ್ ಮಾತನಾಡಿ, ಕೃಷಿ ವಿ.ವಿ.ಕೈಗೊಂಡಿರುವ ಹಸಿರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇಲ್ಲಿ ಜಲ ಸ್ವಾವಲಂಬನೆಗೆ, ಇಂಧನ ಸ್ವಾವಲಂಬನೆಗೆ ಮುಂದಾಗಿದ್ದೇವೆ. ೧೩೦೦ ಎಕರೆ ಪ್ರದೇಶ ವೃಕ್ಷಗಳಿಂದ ಕಂಗೊಳಿಸುವ ವಿಶೇಷ ಯೋಜನೆ ರೂಪಿಸಿದ್ದೇವೆ. ವಿದ್ಯಾರ್ಥಿವನ, ಜೈವಿಕಇಂಧನ ಪಾರ್ಕ್, ಸಸ್ಯಶಾಸ್ತ್ರೀಯವನ ಇವೆ. ಗೋಬರ್ಗ್ಯಾಸ್, ಸೋಲಾರ್ ಪಂಪ್, ಸೋಲಾರ್ ವಿದ್ಯುತ್, ಕೆರೆಗಳ ನಿರ್ಮಾಣ ಮಾಡಿದ್ದೇವೆ ಎಂದರು.
ರಾಜ್ಯದ ವಿನಾಶದ ಅಂಚಿನಲ್ಲಿರುವ ಜನಪ್ರಿಯ ಹಲಸಿನ ತಳಿಗಳ ಜೀನ್ ಬ್ಯಾಂಕ್, ನರ್ಸರಿ ಮಾಡಿದ್ದೇವೆ ಎಂದು ಕೃಷಿವಿಜ್ಞಾನಿ ಡಾ|ಶ್ಯಾಮಲಮ್ಮ ತಿಳಿಸಿದರೆ, ಜೇನು ಸಂಶೋಧನೆಕುರಿತ ಮಾಹಿತಿಗಳನ್ನು ಡಾ|ಎನ್.ಎಸ್.ಭಟ್ ಮತ್ತುಡಾ|ವಿಜಯಕುಮಾರ್ ನೀಡಿದರು. ಡಾ|ಷಡಾಕ್ಷರಿ,ಕೃಷಿ ಸಂಶೋಧನಾ ನಿರ್ದೇಶಕರುಅರಣ್ಯ ವಿಭಾಗದ ಮುಖ್ಯಸ್ಥ ನಾಗರಾಜಯ್ಯ ರಿಜಿಸ್ಟ್ರಾರ್ ಡಾ|ಮಹಾಬಲೇಶ್ವರ್ ಪಾರಂಪರಿಕತಾಣಕ್ಷೇತ್ರ ಭೇಟಿಯಲ್ಲಿ ಹಸಿರು ಸಂವರ್ಧನೆಯ ಮಾಹಿತಿ ಕೊಟ್ಟರು. ಜೀವವೈವಿಧ್ಯ ಮಂಡಳಿ ತಜ್ಞ ಸಲಹಾಕಾರರಾದ ಪ್ರೀತಂ, ಐಶ್ವರ್ಯ, ಪ್ರಸನ್ನ, ಅರಣ್ಯಅಧಿಕಾರಿ ಶ್ರವೀಂದ್ರ ಇತರರುಜೀವವೈವಿಧ್ಯ ಮಂಡಳಿತಂಡದಲ್ಲಿದ್ದರು.
ಯುಎನ್ಐ ವಿಎನ್ 1450
More News
ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

24 Oct 2020 | 5:33 PM

ಬೆಂಗಳೂರು,ಅ 24(ಯುಎನ್ಐ) ನಮಗೆ ಜಾತಿಯನ್ನು ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ. ತನ್ನನ್ನು ಬೆಳೆಸಿದ ಪಕ್ಷಕ್ಕೆ ಮೋಸ ಮಾಡಿದ್ದು,ಹೆತ್ತ ತಾಯಿಗೆ ದ್ರೋಹ ಬಗೆದಿದ್ದಾರೆ.ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

 Sharesee more..