Tuesday, Jun 25 2019 | Time 13:12 Hrs(IST)
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
 • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
Special Share

ಬಿಜೆಡಿ ಶಾಸಕಾಂಗ ನಾಯಕನಾಗಿ ನವೀನ್ ಪಟ್ನಾಯಕ್ ಆಯ್ಕೆ; 29 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಬಿಜೆಡಿ ಶಾಸಕಾಂಗ ನಾಯಕನಾಗಿ ನವೀನ್ ಪಟ್ನಾಯಕ್ ಆಯ್ಕೆ; 29 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ಬಿಜೆಡಿ ಶಾಸಕಾಂಗ ನಾಯಕನಾಗಿ ನವೀನ್ ಪಟ್ನಾಯಕ್ ಆಯ್ಕೆ; 29 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಭುವನೇಶ್ವರ್, ಮೇ 26( ಯುಎನ್ಐ) ಬಿಜು ಜನತಾ ದಳ( ಬಿಜೆಡಿ) ಪರಮೋಚ್ಛ ನಾಯಕ ನವೀನ್ ಪಟ್ನಾಯಕ್, ಪಕ್ಷದ ಕೇಂದ್ರ ಕಚೇರಿಯಲ್ಲಿಂದು ನಡೆದ ಬಿಜೆಡಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರಾಗಿ ಔಪಚಾರಿಕವಾಗಿ ಆಯ್ಕೆಗೊಂಡಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ನವೀನ್ ಪಟ್ನಾಯಕ್ ಅವರ ಹೆಸರನ್ನು ಪಕ್ಷದ ಹಿರಿಯ ನಾಯಕ ಬಿಕ್ರಂ ಅರುಖ್ ಪ್ರಸ್ತಾಪಿಸಿದರು, ಹೊಸದಾಗಿ ಚುನಾಯಿತರಾಗಿರುವ ಎಲ್ಲ 112 ಶಾಸಕರು ಪ್ರಸ್ತಾವನೆಯನ್ನು ಬೆಂಬಲಿಸಿ ಅನುಮೋದಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನವೀನ್ ಪಟ್ನಾಯಕ್, ಪಕ್ಷದ ಶಾಸಕಾಂಗ ನಾಯಕನನ್ನಾಗಿ ಆಯ್ಕೆ ಮಾಡಿದ ಪಕ್ಷದ ಎಲ್ಲ ಶಾಸಕರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಶಾಸಕಾಂಗ ನಾಯಕರನ್ನಾಗಿ ಆಯ್ಕೆ ಗೊಂಡ ನಂತರ ಪಕ್ಷದ ನಾಯಕರೊಂದಿಗೆ ರಾಜಭವನಕ್ಕೆ ತೆರಳಿದ ನವೀನ್ ಪಟ್ನಾಯಿಕ್, ರಾಜ್ಯಪಾಲ ಪ್ರೊ. ಗಣೇಶಿ ಲಾಲ್ ಅವರನ್ನು ಭೇಟಿ ಸರ್ಕಾರ ರಚನೆ ಮಾಡುವ ಹಕ್ಕು ಮಂಡಿಸಿದರು.

ರಾಜ್ಯಪಾಲರಿಗೆ ತಮ್ಮನ್ನು ಶಾಸಕಾಂಗ ನಾಯಕರನ್ನಾಗಿ ಆಯ್ಕೆಮಾಡಿದ ಎಲ್ಲ 112 ಶಾಸಕರ ಪಟ್ಟಿಯನ್ನು ಸಲ್ಲಿಸಿದರು. ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 147 ಸದಸ್ಯಬಲದ ಶಾಸನ ಸಭೆಯಲ್ಲಿ ಬಿಜೆಡಿ 112 ಸ್ಥಾನಗಳನ್ನು ಭರ್ಜರಿ ಗೆಲುವು ಪಡೆದುಕೊಂಡಿದೆ

ನವೀನ್ ಪಟ್ನಾಯಕ್ ಅವರು ಸತತ ಐದನೇ ಬಾರಿ ಓಡಿಶಾ ಮುಖ್ಯಮಂತ್ರಿಯಾಗಿ ಭುವನೇಶ್ವರದ ಐಡಿಸಿಓ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಮೇ 29 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ರಾಜಭವನ ದಿಂದ ಹೊರಗೆ ನಡೆಯುತ್ತಿದೆ.

ಇದಕ್ಕೂ ಮೊದಲು ಬಿಜೆಡಿ ಪರಮೋಚ್ಛ ನಾಯಕ ನವೀನ್ ಪಟ್ನಾಯಿಕ್ ತಮ್ಮ ನಿವಾಸದಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಸಿದರು. ಸಭೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಲ್ಲ 12 ಸಂಸದರು ಉಪಸ್ಥಿತರಿದ್ದರು.

ಪಕ್ಷದ ಸಂಸದರು ತಂಡ ಸ್ಪೂರ್ತಿಯಿಂದ ಕಾರ್ಯನಿರ್ವಹಿಸಬೇಕು, ಲೋಕಸಭೆಯಲ್ಲಿ ರಾಜ್ಯದ ವಿಷಯಗಳ ಪರ ಹೋರಾಟ ನಡೆಸಬೇಕು ಎಂದು ಸೂಚನೆ ನೀಡಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಡಿ ಬೆಹರಾಂಪುರ್ ಲೋಕಸಭಾ ಕ್ಷೇತ್ರದ ಸದಸ್ಯ ಚಂದ್ರ ಶೇಖರ್ ಸಾಹು, ಸಭೆಯಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನ ಕಲ್ಪಿಸಬೇಕೆಂಬ ಬೇಡಿಕೆ, ನೈಸರ್ಗಿಕ ವಿಕೋಪಗಳಿಗೆ ಹೆಚ್ಚಿನ ಕೇಂದ್ರೀಯ ಅನುದಾನ, ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ಯುಎನ್ಐ ಕೆವಿಆರ್ ವಿಎನ್ 1644