Thursday, Jan 21 2021 | Time 04:51 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
National Share

ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

ನವದೆಹಲಿ, ನ 29 (ಯುಎನ್ಐ) ಹಣದ ಕೊರತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ವೇತನ ತಡೆಹಿಡಿದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ, ಎಸ್‌ಸಿ ಮತ್ತು ಎಸ್‌ಟಿ ಯಾವಾಗಲೂ ಹಿಂದುಳಿದಿರಬೇಕು ಎಮದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌, "ಕೇಂದ್ರ ಸರ್ಕಾರದ ಹಣದ ನೆರವು ಸ್ಥಗಿತಗೊಂಡ ನಂತರ 60 ಲಕ್ಷ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸ್ಥಗಿತಗೊಂಡಿದೆ " ಎಂದು ಆರೋಪಿಸಿದ್ದಾರೆ.

"ಬಿಜೆಪಿ/ಆರ್‌ಎಸ್‌ಎಸ್‌ನ ದೃಷ್ಟಿಯಲ್ಲಿ, ಆದಿವಾಸಿಗಳು ಮತ್ತು ದಲಿತರಿಗೆ ಶಿಕ್ಷಣ ಪಡೆಯುವ ಹಕ್ಕಿಲ್ಲ. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿರುವುದರಿಂದ ಅವರ ಅಗತ್ಯತೆಗಳ ಪೂರೈಕೆ ಸ್ಥಗಿತಗೊಂಡಿದೆ" ಎಂದಿದ್ದಾರೆ.

ಯುಎನ್ಐ ಎಸ್ಎಚ್ 1653