Thursday, Jan 21 2021 | Time 03:14 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
National Share

ಬಿಜೆಪಿಗೆ ಹೈದರಾಬಾದ್ ಮೇಯರ್ ಸ್ಥಾನ: ಅಮಿತ್‍ ಶಾ ವಿಶ್ವಾಸ

ಹೈದರಾಬಾದ್, ನ 29 (ಯುಎನ್ಐ)- ಹೈದರಾಬಾದ್‍ ಮೇಯರ್ ಸ್ಥಾನ ಬಿಜೆಪಿ ಅಭ್ಯರ್ಥಿ ಪಾಲಾಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍‍ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 1ರಂದು ನಡೆಯುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್‍ಎಂಸಿ) ಚುನಾವಣೆಗೆ ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಇದಕ್ಕೂ ಮುನ್ನ ಅಮಿತ್ ಶಾ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ರೋಡ್‍ ಶೋ ಮುನ್ನ ಚಾರ್ ಮಿನಾರ್ ಬಳಿಯ ಭಾಗ್ಯಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ, ಭವ್ಯ ಸ್ವಾಗತ ಕೋರಿದ ನಗರದ ಜನತೆಯನ್ನು ಅಭಿನಂದಿಸಿದರು.
ರಾಜಕೀಯ ಪಕ್ಷಗಳ ನಡುವೆ ಮೈತ್ರಿ ಸಾಮಾನ್ಯ. ಆದರೆ, ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್‍) ಮಜ್ಲಿಸ್‍-ಇ—ತ್ತೆಹದುಲ್‍ ಮುಸ್ಲೀಮನ್‍ ಪಕ್ಷದೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡಿರುವುದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಬೆಂಬಲ ನೀಡುವಂತೆ ನಗರದ ಜನತೆಗೆ ಮನವಿ ಮಾಡಿದ ಅಮಿತ್ ಶಾ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಬಿಜೆಪಿ ಪರ ಮತದಾರರು ಒಲವು ತೋರಬೇಕು. ಮಹಾನಗರಪಾಲಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಕಾಲುವೆಗಳು ಮತ್ತು ಸರೋವರಗಳ ಬಳಿಯ ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು. ತಾನು ನೀಡಿದ ಆಶ್ವಾಸನೆಗಳನ್ನು ಅಕ್ಷರಶಃ ಈಡೇರಿಸಲಾಗುವುದು ಎಂದು ಹೇಳಿದ್ದಾರೆ. ಹೈದರಾಬಾದ್‍ ಅನ್ನು ಮಿನಿ ಭಾರತ ಎಂದು ಬಣ್ಣಿಸಿದ ಅಮಿತ್ ಶಾ, ಬಿಜೆಪಿಗೆ ಅವಕಾಶ ನೀಡಿದಲ್ಲಿ, ನಗರವನ್ನು ಜಾಗತಿಕ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದು. ಈ ಮೂಲಕ ವಿದೇಶಿ ಮತ್ತು ದೇಶೀಯ ಕಂಪೆನಿಗಳನ್ನು ನಗರದತ್ತ ಸೆಳೆಯಲಾಗುವುದು ಎಂದು ಹೇಳಿದ್ದಾರೆ.
ಯುಎನ್‍ಐ ಎಸ್ಎಲ್ಎಸ್ 1915