Monday, Mar 1 2021 | Time 03:59 Hrs(IST)
Sports Share

ಬ್ಯಾಡ್ಮಿಂಟನ್: ಸಮೀರ್ ಕ್ವಾರ್ಟರ್ ಫೈನಲ್ಸ್‌ ಗೆ, ಪ್ರಣಯ್ ಗೆ ಸೋಲು

ನವದೆಹಲಿ, ಜ.21 (ಯುಎನ್ಐ)- ಟೊಯೋಟಾ ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್‌ನ ಕ್ವಾರ್ಟರ್ ಫೈನಲ್ಸ್ಗೆ ಭಾರತದ ಸಮೀರ್ ವರ್ಮಾ ಪ್ರವೇಶಿಸಿದ್ದು, ಎಚ್‌ಎಸ್ ಪ್ರಣಯ್ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.

ಸಮೀರ್ ಎರಡನೇ ಸುತ್ತಿನ 39 ನಿಮಿಷಗಳ ಹೋರಾಟದಲ್ಲಿ ಡೆನ್ಮಾರ್ಕ್ ನ ರಾಸ್ ಮಸ್ ಗೇಮ್‌ಕೆ ಅವರನ್ನು 21–12 21–9ರಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್ಸ್ನಲ್ಲಿ ಸಮೀರ್ ಮೂರನೇ ಶ್ರೇಯಾಂಕದ ಡೆನ್ಮಾರ್ಕ್‌ನ ಆಂಡರ್ಸ್ ಆಂಟೊನ್ಸನ್ ಅವರನ್ನು ಎದುರಿಸಲಿದ್ದಾರೆ. ಆಂಟನ್ಸನ್ ಅವರು ಭಾರತದ ಕಿಡಂಬಿ ಶ್ರೀಕಾಂತ್ ಅವರಿಂದ ಎರಡನೇ ಸುತ್ತಿನ ವಾಕ್ಓವರ್ ಪಡೆದರು. ಕ್ವಾರ್ಟರ್ ಫೈನಲ್ಸ್ಗೆ ಅರ್ಹತೆ ಪಡೆಯಲು ಅವರು ಪ್ರಣಯ್ ಅವರನ್ನು 40 ನಿಮಿಷಗಳಲ್ಲಿ 21-17 21-18ರಿಂದ ಮಲೇಷ್ಯಾದ ಲಿಯು ಡೆರೆನ್ ಸೋಲಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಕ್ವಾರ್ಟರ್ ಫೈನಲ್ಸ್ಗೆ ಪ್ರವೇಶಿಸಿದರು. ಭಾರತೀಯ ಜೋಡಿ ಜರ್ಮನಿಯ ಜೋಡಿ ಮಾರ್ಕ್ ಲೆಮ್ಸ್ಫಸ್ ಮತ್ತು ಇಸಾಬೆಲ್ ಹರ್ಟ್ರಿಚ್ ಅವರನ್ನು 56 ನಿಮಿಷ 22-20 14-21 21-16ರಿಂದ ಸೋಲಿಸಿತು. ಭಾರತೀಯ ಜೋಡಿ ಕ್ವಾರ್ಟರ್‌ಫೈನಲ್ಸ್ನಲ್ಲಿ ಐದನೇ ಶ್ರೇಯಾಂಕದ ಮಲೇಷಿಯಾದ ಜೋಡಿ ಚಾನ್ ಪೆಂಗ್ ಸೂನ್ ಅವರನ್ನು ಎದುರಿಸಲಿದೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಳನೇ ಶ್ರೇಯಾಂಕದ ಕೊರಿಯಾದ ಜೋಡಿ ಚೊಯ್ ಮತ್ತು ಸಿಯೋ ಸೆಯುಂಗ್ ಜೇ ಅವರನ್ನು 21-18, 23-21ರಿಂದ 40 ನಿಮಿಷಗಳಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ಸ್ಗೆ ಮುನ್ನಡೆದರು. ಕ್ವಾರ್ಟರ್‌ಫೈನಲ್ಸ್ನಲ್ಲಿ ಈ ಜೋಡಿ ಓಂಗ್ ಯೆ ಸಿನ್ ಮತ್ತು ಟಿಯೊ ಯಿ ಅವರನ್ನು ಎದುರಿಸಲಿದೆ.

ಯುಎನ್ಐ ವಿಎನ್ಎಲ್ 1810
More News

ವಿಜಯ್ ಹಜಾರೆ: ಸಮರ್ಥ್, ದೇವದತ್ ಶತಕದ ವೈಭವ

28 Feb 2021 | 6:30 PM

 Sharesee more..

ಶೂಟಿಂಗ್ ಸ್ಕೀಟ್: ಭಾರತಕ್ಕೆ ಕಂಚು

28 Feb 2021 | 6:08 PM

 Sharesee more..
ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

27 Feb 2021 | 9:14 PM

ನವದೆಹಲಿ, ಫೆ.27 (ಯುಎನ್ಐ)- ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ.

 Sharesee more..

ಶ್ರೇಯಸ್ ಶತಕ: ಮುಂಬೈ ಅಗ್ರ ಸ್ಥಾನ ಭದ್ರ

27 Feb 2021 | 8:50 PM

 Sharesee more..