SpecialPosted at: Jan 13 2021 8:37PM
Shareಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕ್ವಶ್ಚನ್ ಬ್ಯಾಂಕ್ ರೂಪಿಸಿ; ಸಂಸದೀಯ ಸಮಿತಿ ಸೂಚನೆ
ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕ್ವಶ್ಚನ್ ಬ್ಯಾಂಕ್ ರೂಪಿಸಿ; ಸಂಸದೀಯ ಸಮಿತಿ ಸೂಚನೆನವದೆಹಲಿ, ಜ 13(ಯುಎನ್ಐ) ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ -19 ಸಾಂಕ್ರಾಮಿಕ ಕಾರಣದಿಂದ ವಿದ್ಯಾರ್ಥಿಗಳ ವ್ಯಾಸಂಗ ಪ್ರಕ್ರಿಯೆ ಸೂಕ್ತವಾಗಿ ನಡೆದಿಲ್ಲ, ಇಂಟರ್ ನೆಟ್ ಸಂಪರ್ಕ ಸಮಸ್ಯೆ ಇರುವ ಪ್ರದೇಶಗಳಲ್ಲಿ ಆನ್ಲೈನ್ ತರಗತಿಗಳನ್ನು ಆಲಿಸಲು ಸಾಧ್ಯವಾಗಿಲ್ಲ ಎಂದು ಶಾಲಾ ಶಿಕ್ಷಣ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಮಂಡಳಿ ಪರೀಕ್ಷೆಗಳಿಗೆ ಹಾಜರಾಗುವ 10 ಹಾಗೂ 12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಪಠ್ಯಕ್ರಮ ರೀತ್ಯ ಮುಂಚಿತವಾಗಿ ಪ್ರಮುಖ ಪ್ರಶ್ನೆಗಳೊಂದಿಗೆ ಪ್ರಶ್ನೆಗಳ ನಿಧಿ( ಕ್ವಶ್ಚನ್ ಬ್ಯಾಂಕ್ )ಸ್ಥಾಪಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
ಪರೀಕ್ಷೆಗಳಿಗೆ ಇದರಿಂದಲೇ ಪ್ರಶ್ನೆಗಳನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಿದೆ. ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೊದಲ್ಲಿ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗಾಗಿ ಪ್ರಸಾರವಾಗುವ ಪಾಠಗಳ ಬೋಧನ ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಜಾಹೀರಾತು ನೀಡುವಂತೆ ಸಂಸದೀಯ ಸಮಿತಿ ಅಧ್ಯಕ್ಷ ಎಂ.ಪಿ. ವಿನಯ್ ಸಹಸ್ರ ಬುದ್ದೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಯುಎನ್ಐ ಕೆವಿಆರ್ 19.08