KarnatakaPosted at: Jan 22 2021 10:28AM Shareಬಿಳಿ ಗೂಬೆ ಮರಿಗಳ ರಕ್ಷಣೆಮೈಸೂರು, ಜ.22 (ಯುಎನ್ಐ) ಬಲು ಅಪರೂಪದ ಬಿಳಿ ಗೂಬೆ ಮರಿಗಳನ್ನು ಜಿಲ್ಲೆಯಹೆಚ್. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದಲ್ಲಿ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.ರೈತ ಚಂದ್ರಮೌಳಿ ಎಂಬುವವರ ಫಾರ್ಮ್ ಹೌಸ್ ನಲ್ಲಿ ಗೂಬೆ ಮರಿಗಳಿದ್ದವು.ತಾಯಿಯನ್ನು ಕಳೆದುಕೊಂಡ ನಾಲ್ಕು ಗೂಬೆ ಮರಿಗಳು ಅನಾಥವಾಗಿದ್ದವು. ಹೀಗಾಗಿ ಮರಿಗಳು ಸ್ವತಂತ್ರವಾಗಿ ಬದುಕುವ ತನಕ ಅವುಗಳನ್ನು ಪೋಷಿಸಿ, ಅನಂತರ ಮರಿಗಳನ್ನು ಅದರ ಮೂಲಸ್ಥಾನಕ್ಕೆ ಸ್ಥಳಾಂತರಿಸಲು ಶಿಂಡೇನಹಳ್ಳಿಯ ಸ್ನೇಕ್ ಶ್ಯಾಂ ಅವರ ಪುತ್ರ ಸೂರ್ಯ ಕೀರ್ತಿ ನಿರ್ಧರಿಸಿದ್ದಾರೆ.ಯುಎನ್ಐ ಪಿಕೆ ಎಎಚ್