Friday, May 29 2020 | Time 10:02 Hrs(IST)
  • ವಂದೇ ಭಾರತ್ ಮಿಷನ್: 45 ಸಾವಿರ ಭಾರತೀಯರು ತವರಿಗೆ
  • ಮೆಕ್ಸಿಕೋದಲ್ಲಿ ಕೊರೊನಾ ಸೋಂಕಿಗೆ ಮತ್ತೆ 447 ಬಲಿ, ಒಟ್ಟು 9,044 ಸಾವು
  • ಚಿಲಿಯಲ್ಲಿ 87 ಸಾವಿರ ಕೊರೊನಾ ಸೋಂಕು ಪ್ರಕರಣ
  • ರಾಜ್ಯಸಭಾ ಸದಸ್ಯ ವಿರೇಂದ್ರಕುಮಾರ್ ಇನ್ನಿಲ್ಲ
  • ಸೊಲ್ಲಾಪುರ; ಕೃಷಿ ಭೂಮಿಯಲ್ಲಿ ಸುಮಾರು ೭೦೦ ಪುರಾತನ ನಾಣ್ಯಗಳ ಪತ್ತೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ಲಾಕ್ ಡೌನ್; ರಾಜ್ಯಗಳ ಅಭಿಪ್ರಾಯ ಕೇಳಿದ ಗೃಹ ಸಚಿವ ಅಮಿತ್ ಶಾ
Entertainment Share

ಭಗವತ್ ಗೀತೆ ಜೊತೆಯಲ್ಲಿಟ್ಟುಕೊಳ್ಳುವ ಆಯುಷ್ಮಾನ್ ಖುರಾನಾ

ಮುಂಬೈ, ಸೆ 22 (ಯುಎನ್ಐ) ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಯಾವಾಗಲೂ ಭಗವತ್ ಗೀತೆ ಜೊತೆಯಲ್ಲಿಟ್ಟುಕೊಂಡಿರುತ್ತಾರಂತೆ.
ಹೌದು. ವಿಭಿನ್ನ ಚಿತ್ರ ಕಥೆಗಳಲ್ಲಿ ನಟಿಸಿ ಒಂದಾದ ನಂತರ ಒಂದು ಸೂಪರ್ ಹಿಟ್ ಚಿತ್ರ ನೀಡುವ ಮೂಲಕ ಆಯುಷ್ಮಾನ್ ಬಿಟೌನ್ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ.
ಅತ್ಯುತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ‌ ಮುಡಿಗೇರಿಸಿಕೊಂಡಿದ್ದಾರೆ.
ಆಯುಷ್ಮಾನ್ ಅವರು ಮಾತನಾಡಿರುವ ವಿಡಿಯೋ ಒಂದನ್ನು ನಟಿ ಸೋನಂ ಕಪೂರ್ ಶೇರ್ ಮಾಡಿದ್ದಾರೆ.
ಮೂಢನಂಬಿಕೆ ಕುರಿತು ಆಯುಷ್ಮಾನ್ ಖುರಾನಾ ಮಾತನಾಡಿ, ಇದೊಂದು ಮೂಢನಂಬಿಕೆ ಅಲ್ಲ‌. ತಮ್ಮ ಹೆಸರಿನಲ್ಲಿ‌ರುವ ಎನ್ ಹಾಗೂ ಆರ್ ನಮ್ಮ ತಂದೆಯ ಕಾರಣಕ್ಕಿರುವುದು.
ಯಾವಾಗಲೂ ನನ್ನ ಜೊತೆಗೆ ಭಗವತ್ ಗೀತೆ ಇಟ್ಟುಕೊಳ್ಳುತ್ತೇನೆ. ಮಲಗುವಾಗಲೂ ಸಹ.
ಅಲ್ಲದೇ ಸಭೆ ಸಮಾರಂಭ ಅಥವಾ ಚಿತ್ರಿಕರಣದ ಸೆಟ್ ಪ್ರವೇಶಿಸುವ ಮುಂಚೆಯೂ ಭಗವತ್ ಗೀತೆಗೆ ನಮಸ್ಕರಿಸುತ್ತೆನೆ ಎಂದು ಹೇಳಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್ 1733