Sunday, Jan 19 2020 | Time 05:19 Hrs(IST)
Special Share

ಭಾರತದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸದಂತೆ ಪಾಕ್ ಸಚಿವರಿಗೆ ಕ್ಯಾಪ್ಟನ್ ಅಮರಿಂದರ್ ಎಚ್ಚರಿಕೆ

ಭಾರತದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸದಂತೆ ಪಾಕ್ ಸಚಿವರಿಗೆ ಕ್ಯಾಪ್ಟನ್ ಅಮರಿಂದರ್ ಎಚ್ಚರಿಕೆ
ಭಾರತದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸದಂತೆ ಪಾಕ್ ಸಚಿವರಿಗೆ ಕ್ಯಾಪ್ಟನ್ ಅಮರಿಂದರ್ ಎಚ್ಚರಿಕೆ

ಚಂಡೀಗಢ, ಆಗಸ್ಟ್ 13 (ಯುಎನ್‌ಐ) ಪಾಕಿಸ್ತಾನ ಸಚಿವ ಫವಾದ್ ಚೌಧರಿ ಅವರು ಭಾರತದ ಸೈನ್ಯದಲ್ಲಿ ಪಂಜಾಬಿಗಳ ದಂಗೆಯನ್ನು ಪ್ರಚೋದಿಸುವಂತೆ ಮಾಡಿರುವ ಟ್ವೀಟ್‌ಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ನಿಮ್ಮ ಸ್ವಂತ ವ್ಯವಹಾರದಲ್ಲಿ ಗಮನ ಹರಿಸಿ ಮತ್ತು ಭಾರತದ ಆಂತರಿಕ ವಿಷಯದಿಂದ ಹೊರಗುಳಿಯಿರಿ ಎಂದು ಪಾಕಿಸ್ತಾನಕ್ಕೆ ಮಂಗಳವಾರ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಸೇನೆಯು ಶಿಸ್ತುಬದ್ಧ ಮತ್ತು ರಾಷ್ಟ್ರೀಯವಾದಿ ಶಕ್ತಿಯಾಗಿದೆ ಎಂದು ಪಾಕ್ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸುವ ನಿರಂತರ ಪ್ರಯತ್ನಗಳ ವಿರುದ್ಧ ಇಸ್ಲಾಮಾಬಾದ್‌ಗೆಎಚ್ಚರಿಕೆ ನೀಡಿದರು.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿದೆ ಎಂದರು.

ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 2030