Friday, Apr 10 2020 | Time 08:37 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Special Share

ಭಾರತ ಕ್ರೀಡೆಯಲ್ಲಿ ಅಗ್ರ ಸಾಲಿಗೆ ಸೇರ್ಪಡೆಯಾಲು ಕಾರ್ಯತಂತ್ರ : ಕಿರಣ್ ರಿಜಿಜು

ಲೇಹ್, ಫೆ 25 (ಯುಎನ್ಐ) ಲಾಸ್ ಏಂಜಲೀಸ್ ನಲ್ಲಿ 2028 ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಪಂದ್ಯಾವಳಿಯಲ್ಲಿ ಅಗ್ರ 10 ದೇಶಗಳ ಪೈಕಿ ಭಾರತದ ಹೆಸರು ರಾರಾಜಿಸುವಂತಾಗಲು ಕಾರ್ಯಪ್ರವೃತ್ತವಾಗಿರುವುದಾಗಿ ಕೇಂದ್ರ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಲೇಹ್‌ನಲ್ಲಿ ಖೇಲೋ ಲಡಾಕ್ ಚಳಿಗಾಲದ ಕ್ರೀಡೆ 2020 ಉದ್ಘಾಟಿಸಿ ಮಾತನಾಡಿದ ಅವರು, 2020 ರ ಜುಲೈನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ ಗೆ 62 ಕ್ರೀಡಾಪಟುಗಳು ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ. ಮೇ ತಿಂಗಳಲ್ಲಿ ಇನ್ನಷ್ಟು ಕ್ರೀಡಾಪಟುಗಳು ಅರ್ಹತೆ ಪಡೆದುಕೊಳ್ಳಲಿದ್ದಾರೆ ಎಂದರು.

ಜಗತ್ತಿನ ಶೇಕಡ 20 ರಷ್ಟು ಯುವಶಕ್ತಿಯನ್ನು ಭಾರತ ಹೊಂದಿದ್ದು, ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯೋಜನೆಯಡಿ ವಿಶ್ವವಿದ್ಯಾಲಯ, ಯುವ ಹಾಗೂ ಚಳಿಗಾಲದ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಈವರೆಗೆ ೧೫ ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿವಿಧ ತರಬೇತಿ ಒದಗಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಯುಎನ್ಐ ಜಿಎಸ್ಆರ್ 2200
More News
ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

09 Apr 2020 | 3:51 PM

ಭುವನೇಶ್ವರ, ಏ.9 (ಯುಎನ್ಐ) ಒಡಿಸ್ಸಾ ಸರ್ಕಾರ ಕೋವಿಡ್‌ 19 ಲಾಕ್‌ಡೌನ್‌ ಅನ್ನು ಮತ್ತೆ ಏಪ್ರಿಲ್‌ 30ರವರೆಗೆ ವಿಸ್ತರಿಸಿದೆ. ಮಾತ್ರವಲ್ಲ ಏಪ್ರಿಲ್ 30ರವರೆಗೆ ವಿಮಾನ ಮತ್ತು ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

 Sharesee more..

J'khand records first COVID-19 death, positive cases reach 12

09 Apr 2020 | 9:53 AM

 Sharesee more..