Monday, Feb 24 2020 | Time 05:55 Hrs(IST)
International Share

ಭಾರತ-ನೇಪಾಳ ಜಂಟಿ ಆಯೋಗದ ಸಭೆ: ಡಾ ಎಸ್ ಜೈಶಂಕರ್ ಭಾಗಿ

ಭಾರತ-ನೇಪಾಳ ಜಂಟಿ ಆಯೋಗದ ಸಭೆ: ಡಾ ಎಸ್ ಜೈಶಂಕರ್ ಭಾಗಿ
ಭಾರತ-ನೇಪಾಳ ಜಂಟಿ ಆಯೋಗದ ಸಭೆ: ಡಾ ಎಸ್ ಜೈಶಂಕರ್ ಭಾಗಿ

ಕಠ್ಮಂಡು, ಆ 21 (ಯುಎನ್ಐ) ಭಾರತ-ನೇಪಾಳದ ಐದನೇ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಕಠ್ಮಂಡು ತಲುಪಿದ್ದು, ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಮತ್ತು ನೇಪಾಳದಲ್ಲಿನ ಭಾರತದ ರಾಯಭಾರಿ ನೀಲಾಂಬರ್ ಆಚಾರ್ಯ ಬರಮಾಡಿಕೊಂಡರು.

ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗಯಾವಲಿ ಮತ್ತು ಡಾ.ಜೈಶಂಕರ್ ಅವರು ಸಭೆಯ ಸಹ -ಅಧ್ಯಕ್ಷತೆ ವಹಿಸಲಿದ್ದು, ದ್ವಿಪಕ್ಷೀಯ ಸಂಬಂಧದ ಕುರಿತು ಉಭಯ ಮುಖಂಡರೂ ಚರ್ಚಿಸಲಿದ್ದಾರೆ ಎಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಭಾರತ-ನೇಪಾಳ ಆಯೋಗ 1987ರ ಜೂನ್ ತಿಂಗಳಲ್ಲಿ ಸ್ಥಾಪನೆಯಾಯಿತು. ಇದರ ಸಭೆಗಳು ಒಮ್ಮೆ ಭಾರತದಲ್ಲಿ ಹಾಗೂ ಮತ್ತೊಮ್ಮೆ ನೇಪಾಳದಲ್ಲಿ ನಡೆಯುತ್ತದೆ ಕಳೆದ ಸಭೆಯನ್ನು 2016ರ ಅಕ್ಟೋಬರ್ ನಲ್ಲಿ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು.

ಭಾರತ-ನೇಪಾಳ ಆಯೋಗದ ಸಭೆಯ ನಡುವೆ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಮತ್ತು ಪ್ರಧಾನಿ ಕೆ ಪಿ ಶರ್ಮಾ ಒಲಿಯವರನ್ನು ಎಸ್ ಜೈಶಂಕರ್ ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಯುಎನ್ಐ ಎಸ್ಎ ವಿಎನ್ 1346

More News
ಬಿಲ್ ಗೇಟ್ ಔದಾರ್ಯಕ್ಕೆ  ವಿಶ್ವ ನಾಯಕರ ಮೆಚ್ಚುಗೆ

ಬಿಲ್ ಗೇಟ್ ಔದಾರ್ಯಕ್ಕೆ ವಿಶ್ವ ನಾಯಕರ ಮೆಚ್ಚುಗೆ

23 Feb 2020 | 8:18 PM

ಬೀಜಿಂಗ್, ಫೆ 23(ಯುಎನ್ಐ ) ಕೊರೋನವೈರಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸುವ ಜಾಗತಿಕ ಕಾರ್ಯತಂತ್ರಕ್ಕಾಗಿ ವಿಶ್ವದ ಕುಬೇರ ಎಂದೇ ಗುರುತಿಸಿಕೊಂಡಿರುವ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯ ಡಾಲರ್ ಸುಮಾರು 718 ಕೋಟಿ ರೂಪಾಯಿ ದೇಣಿಗೆ ನೀಡಿ ಔದಾರ್ಯ ಮೆರೆದಿದೆ.

 Sharesee more..

ಟರ್ಕಿಯಲ್ಲಿ ಭೂಕಂಪನ: 7 ಮಂದಿ ಸಾವು

23 Feb 2020 | 4:07 PM

 Sharesee more..