Friday, Feb 28 2020 | Time 10:16 Hrs(IST)
  • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
  • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Karnataka Share

ಭಾರತೀಯರನ್ನು ದೇಶದಿಂದ ಹೊರಗಟ್ಟಲು ಬಿಜೆಪಿ ಹುನ್ನಾರ: ಡಾ. ವಾಸು ಆರೋಪ

ಬೆಂಗಳೂರು, ಜ 21 (ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿ ಮೂಲ ಭಾರತೀಯರನ್ನು ದೇಶದಿಂದ ಹೊರಗಟ್ಟುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಪ್ರತಿಭಟನಾ ಜಂಟಿ ಸಮಿತಿಯ ಮುಖಂಡ ಡಾ.ವಾಸು ಆರೋಪಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನೋಂದಣಿ ವಿರೋಧಿಸಿ ಜಂಟಿ ಕ್ರಿಯಾ ಸಮಿತಿ ಮತ್ತು ಪೀಪಲ್ ಫೆಡರೇಶನ್ ನಿಂದ ನಗರದ ರಸೆಲ್ ಮಾರ್ಕೆಟ್ ನ ಚಾಂದನು ಚೌಕ್ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು,
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶ, ಧರ್ಮದ ಆಧಾರದ ಮೇಲೆ ವಿಭಜನೆಗೊಳ್ಳಲಿದೆ. ಆದ್ದರಿಂದ ಇಂತಹ ದುರಂತವನ್ನು ತಪ್ಪಿಸಲು ನಾವು ಒಗ್ಗಟ್ಟು ಪ್ರದರ್ಶಿಸಿ, ಕಾಯ್ದೆಯನ್ನು ಸಂಪೂರ್ಣವಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಸರ್ಕಾರ ಈ ಕಾಯ್ದೆ ಜಾರಿ ಮಾಡುವ ಮೂಲಕ ನಿಜವಾದ ಭಾರತೀಯರನ್ನು ದೇಶದಿಂದ ಹೊರಗಟ್ಟುವ ಹುನ್ನಾರ ನಡೆಸಿದೆ. ಕೇಂದ್ರ ಸರ್ಕಾರ ಕಾಯ್ದೆ ಜಾರಿಗಾಗಿ ದೇಶವಾಸಿಯ ಕುರಿತಾದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದರೆ, ದಾಖಲೆಗಳಿಲ್ಲದ ಜನರ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದ ಅವರು, ಈ ಕಾಯ್ದೆ ನ್ಯಾಯ ಸಮ್ಮತವಾಗಿಲ್ಲ. ಅಲ್ಲದೇ, ಈ ಕಾಯ್ದೆ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಟೋನ್ಮೆಂಟ್ 9 ಮಾರುಕಟ್ಟೆಗಳಲ್ಲೂ ವ್ಯಾಪಾರ ಬಂದ್ ಆಗಿದ್ದು ರಸೆಲ್ ಮಾರುಕಟ್ಟೆ, ಬೀಫ್ ಮಾರ್ಕೆಟ್, ನಾಲಾ ವೆಜಿಟೇಬಲ್ ಮಾರ್ಕೆಟ್, ಇವಿನಿಂಗ್ ಬಜಾರ್ ಮಾರ್ಕೆಟ್, ಗುಜರಿ ಮಾರ್ಕೆಟ್, ಬಂಡಿ ಮೋಟ್ ಮಾರ್ಕೆಟ್, ಸ್ಟಿಫನ್ ಸ್ಕೋರ್ ಮಾರ್ಕೆಟ್ ಹಾಗೂ ಸೆಂಟ್ರಲ್ ಸ್ಟ್ರೀಟ್ ಮಾರ್ಕೆಟ್ ಸೇರಿದಂತೆ ಇಡೀ ಕಂಟೋನ್ಮೆಂಟ್ ಸಂಪೂರ್ಣ ಬಂದ್ ಆಗಿತ್ತು.
ಬಂದ್ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪೂರ್ವ ಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಭದ್ರತೆ ಪರಿಶೀಲನೆ ನಡೆಸಿ, ಶಾಂತಿಯುತ ಧರಣಿ ನಡೆಸಲು ಸೂಚನೆ ನೀಡಿದರು.
ಸಮಿತಿಯ ಮುಖಂಡರು ಕಾರ್ಯಕರ್ತರು ಸೇರಿ ಸಾವಿರಾರು ಮಂದಿ ಶಿವಾಜಿನಗರ ರಸೂಲ್ ಮಾರುಕಟ್ಟೆ ಮುಂಭಾಗದಲ್ಲಿ ಸಮಾವೇಶಗೊಂಡು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನೋಂದಣಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿರೋಧಿಸಬೇಕೆಂದು ಕರೆ ನೀಡಿದರು.
ರಸೂಲ್ ಮಾರುಕಟ್ಟೆ ಮುಂಭಾಗ ಹಾಗೂ ಸುತ್ತಮುತ್ತಲಿನ ಎಲ್ಲಾ ವಾಣಿಜ್ಯ ವಹಿವಾಟು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಸಾವಿರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಮಿತಿ ಮುಖಂಡರಾದ ಜಮೀರ್ ಪಾಶಾ, ಮೌಲಾನಾ ಇಸ್ಲಾಂ ಅಂಜುಮ್, ಜುಲ್ಫ್ ಕಾರ್ ನೂರಿ, ವಕೀಲ ನರಸಿಂಹಮೂರ್ತಿ, ಮನೋಹರ್ ಹಿಲಾವರ್ತಿ, ಮಹೇಂದ್ರ ಕುಮಾರ್, ಮೌಲಾನಾ ಆಜಾದ್ ನಜ್ವಿ, ಸೇರಿ ಮತ್ತಿತ್ತರ ಮುಖಂಡರು ಉಪಸ್ಥಿತರಿದ್ದರು.
ಯುಎನ್ಐ ಪಿಕೆ ಎಎಚ್