Sunday, Dec 15 2019 | Time 18:26 Hrs(IST)
 • ಸುಕನ್ಯಾ ಸಮೃದ್ದಿ ಯೋಜನೆ ಖಾತೆದಾರರಿಗೆ ಸಿಹಿ ಸುದ್ದಿ !
 • ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ದೇಶ ರಕ್ಷಣೆಯಾಗಿದೆ; ಪ್ರಧಾನಿ
 • ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್‌ ಇಂಡೀಸ್‌ಗೆ 289 ರನ್ ಗುರಿ
 • ಸೈಫ್ ಪುತ್ರಿಯಾಗಿ ಅನನ್ಯ !
 • ದಬಾಂಗ್ -3 ಕುರಿತು ಸಲ್ಮಾನ್ ಮಾತು
 • ಎಚ್ ಡಿ ರೇವಣ್ಣ ಮಂಡ್ಯ ಉಸಾಬರಿಗೆ ಬರುವುದು ಬೇಡ: ನಾರಾಯಣಗೌಡ
 • ಧೋನಿ ನನ್ನ ನೆಚ್ಚಿನ ಕ್ರಿಕೆಟರ್; ಸಲ್ಮಾನ್ ಖಾನ್
 • ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ
 • ಭಾರತಕ್ಕೆೆ ಪಂತ್, ಅಯ್ಯರ್ ಅರ್ಧಶತಕಗಳ ಆಸರೆ
 • ರಾಹುಲ್ ಗಾಂಧಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವೆ; ರಂಜಿತ್ ಸಾರ್ವಕರ್
 • ಅಸ್ಸಾಂ ಪರಿಸ್ಥಿತಿ ಕುರಿತು ಮೋದಿ, ಅಮಿತ್‍ ಷಾಗೆ ಮಾಹಿತಿ ನೀಡಲಿರುವ ಸೋನೋವಾಲ್‍
 • ವೃತ್ತಿ ಜೀವನದ 11ನೇ ಬಿಡಬ್ಲ್ಯುಎಫ್ ಫೈನಲ್ಸ್‌ ಗೆದ್ದ ಕೆಂಟೊ ಮೊಮೊಟಾ
 • ಕಾಂಗ್ರೆಸ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ; ಮಾಯಾವತಿ ಲೇವಡಿ
 • ಭಾರತೀಯ ಮೀನುಗಾರರ ದೋಣಿಗಳ ಮೇಲೆ ಶ್ರೀಲಂಕಾ ನೌಕಾಪಡೆಯಿಂದ ದಾಳಿ
 • ವಿಶ್ವ ಸುಂದರಿ ಪಟ್ಟ, ಭಾರತದ ಸುಮನ್ ರಾವ್ ಗೆ ದ್ವಿತೀಯ ಸ್ಥಾನ
Health -Lifestyle Share

ಮಕ್ಕಳ ದಿನಾಚರಣೆಅಂಗವಾಗಿ ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಶಿಬಿರ ಆಯೋಜನೆ: ಅಂಗಾಂಗಳ ಮಾದರಿ ಮೂಲಕ ಪ್ರಾತ್ಯಕ್ಷಿಕೆ

ಬೆಂಗಳೂರು, ನ 14 [ಯುಎನ್ಐ] ಇತ್ತೀಚೆಗೆವ್ಯಾಪಕವಾಗುತ್ತಿರುವ ಕ್ಯಾನ್ಸರ್ ಕುರಿತು ಸಪ್ತಗಿರಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದಮಕ್ಕಳ ದಿನಾಚರಣೆ ಅಂಗವಾಗಿ ವಿಶೇಷವಾಗಿ “ ಕ್ಯಾನ್ಸರ್ ಜಾಗೃತಿ ಶಿಬಿರ “ ಆಯೋಜಿಸಲಾಗಿತ್ತು.
ಕೇಂದ್ರ ಸರ್ಕಾರದ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಪ್ತಗಿರಿ ಕಾಲೇಜಿನ 15 ವಿಭಾಗಗಳ ತಜ್ಞರು ಐವತ್ತಕ್ಕೂಹೆಚ್ಚು ಕ್ಯಾನ್ಸರ್ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಮಳಿಗೆಗಳನ್ನು ತೆರೆದು ಬಗ್ಗೆ ಜಾಗೃತಿ ಮೂಡಿಸಿದರು.
ಪ್ರತಿಯೊಂದು ಕ್ಯಾನ್ಸರ್ ಗುಣಲಕ್ಷಣಗಳು, ಇದಕ್ಕೆ ಕಾರಣ, ಜೀವನ ಶೈಲಿಯಿಂದ ಆಗುವ ಸಮಸ್ಯೆಗಳು, ಆಹಾರ, ವಿಹಾರದಿಂದ ಅರ್ಬದ ಕಾಣಿಸಿಕೊಳ್ಳುವಕುರಿತು ಪ್ರತಿಯೊಂದು ಅಂಗಾಂಗಳ ಮಾದರಿಗಳನ್ನು ಸಿದ್ಧಪಡಿಸಿ ಪ್ರಾತ್ಯಕ್ಷಿಕೆ ಮೂಲಕ ಜನ ಸಾಮಾನ್ಯರಿಗೆತಿಳುವಳಿಕೆ ಕೊಟ್ಟರು. ಮಕ್ಕಳು ಹೆಚ್ಚಾಗಿ ಜಂಕ್ ಫುಡ್ ನಿಂದ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳ ಆಹಾರ ಪದ್ಧತಿಯಲ್ಲಿಬದಲಾವಣೆಯಾಗಬೇಕಾಗಿದೆ.
ಈ ಬಗ್ಗೆ ನುರಿತ ವೈದ್ಯರು ವಿಶೇಷವಾಗಿ ಪಾಲಕರಿಗೆ ತಿಳುವಳಿಕೆ ನೀಡಿದರು. ಸಪ್ತಗಿರಿ ವೈದ್ಯಕೀಯ ಸಂಸ್ಥೆಯಅಧ್ಯಕ್ಷ ಜಿ. ದಯಾನಂದ್, ನಿರ್ದೇಶಕ ಡಿ.ಜಿ.ಮನೋಜ್, ಡೀನ್ ಮತ್ತು ಪ್ರಾಂಶುಪಾಲರಾದ ಡಾಕ್ಟರ್ ಜಯಂತಿಜಾಗೃತಿ ಶಿಬಿರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ನುರಿತಮತ್ತು ತಜ್ಞ ವೈದ್ಯರಿಂದ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿ, ಆಹಾರಪದ್ಧತಿ ಕುರಿತು ಸಂವಾದ ಗೋಷ್ಠಿ ಸಹ ಆಯೋಜಿಸಲಾಗಿತ್ತು. ಕ್ಯಾನ್ಸರ್ ತಡೆಗೆ ನಡೆಯುತ್ತಿರುವ ಅನ್ವೇಷಣೆಮತ್ತು ಸಂಶೋಧನೆಗಳ ಬಗ್ಗೆ ತಜ್ಞರು ಬೆಳಕು ಚೆಲ್ಲಿದರು.
ಇದೇ ಸಂದರ್ಭದಲ್ಲಿ ಕ್ಯಾನ್ಸರ್ ಪತ್ತೆಗಾಗಿ ಉಚಿತ ತಪಾಸಣಾ ಶಿಬಿರ ಸಹ ಏರ್ಪಡಿಸಲಾಗಿತ್ತು. ಈ ಕುರಿತು ಅರಿವು ಮೂಡಿಸುವ ಕಿರು ನಾಟಕ ಪ್ರದರ್ಶನಏರ್ಪಡಿಸಲಾಗಿತ್ತು.
ಡಾಕ್ಟರ್ ಜಯಂತಿ ಮಾತನಾಡಿ, ಯುವ ಸಮೂಹ ಸಿಗರೇಟ್ ಸೇವನೆ ಮತ್ತು ಮಾದಕ ವಸ್ತುಗಳಿಗೆಮಾರು ಹೋಗುತ್ತಿದ್ದು, ಇದರಿಂದ ಕ್ಯಾನ್ಸರ್ ಸಮಸ್ಯೆಗಳು ಹೆಚ್ಚಾಗುತ್ತಿದೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿಪಾಲಕರು ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಿ ಕ್ಯಾನ್ಸರ್ ಬರದಂತೆ ತಡೆಯಲು ಅಗತ್ಯ ರೀತಿಯ ಮುನ್ನೆಚ್ಚರಿಕಾಕ್ರಮಗಳನ್ನು ಕೈಗೊಳ್ಳುವಂತೆ ಸಲನೆ ನೀಡಲಾಗಿದೆ ಎಂದರು.
ಯುಎನ್ಐ ವಿಎನ್ 1750
More News
ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ

ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ

22 Nov 2019 | 12:29 PM

ಬೆಂಗಳೂರು, ನ 21 (ಯುಎನ್ಐ) ಈಗಿರುವುದು ಹೈಫೈ ವೈಫೈ ಕಾಲ. ಅಧುನಿಕತೆಯ ಆಡಂಬರ, ಕಣ್ಣುಹಾಯಿಸಿದಷ್ಟು ತಂತ್ರಜ್ಞಾನ. ಸಂಚರಿಸಲು ಕಾರು, ಬಸ್ಸು, ಬೈಕು. ಆದರೆ ರಾಜ್ಯದ ಅದೆಷ್ಟೋ ಕುಗ್ರಾಮಗಳಲ್ಲಿ ನಡೆಯಲು ರಸ್ತೆಯೇ ಇಲ್ಲದಿರುವುದು ಕೂಡ ವಾಸ್ತವ. ಹೌದು, ಚಾಮರಾಜನಗರ ಜಿಲ್ಲೆಯ ಅದೆಷ್ಟೋ ಗ್ರಾಮಗಳಲ್ಲಿ ಮಕ್ಕಳು, ವಯೋವೃದ್ಧರು ನಡೆದಾಡುವುದಿರಲಿ, ಗಟ್ಟಿಮುಟ್ಟಾದ ಹದಿಹರೆಯದ ಯುವಕ-ಯುವತಿಯರೇ ನಡೆದಾಡಲು ಸಂಕಷ್ಟಪಡುವಂತಹ ದುಃಸ್ಥಿತಿ ಇದೆ.

 Sharesee more..

ನ 25 ರಿಂದ ನಗರದಲ್ಲಿ ಕ್ಷಯ ರೋಗ ನಿಯಂತ್ರಣ ಆಂದೋಲನ

21 Nov 2019 | 6:56 PM

 Sharesee more..